»   » ಜಗ್ಗೇಶ್ ಈಗ ನವರಸ ನಾಯಕ ಮಾತ್ರವಲ್ಲ.. ಚಿತ್ರಸಾಹಿತಿ ಕೂಡ ಹೌದು.!

ಜಗ್ಗೇಶ್ ಈಗ ನವರಸ ನಾಯಕ ಮಾತ್ರವಲ್ಲ.. ಚಿತ್ರಸಾಹಿತಿ ಕೂಡ ಹೌದು.!

Posted By:
Subscribe to Filmibeat Kannada

ನಟ ಜಗ್ಗೇಶ್ ತಮ್ಮ ಅಭಿನಯದ ಮೂಲಕ ನವರಸ ನಾಯಕ ಎಂದು ಕರೆಸಿಕೊಂಡಿದ್ದಾರೆ. ಇದೀಗ ಜಗ್ಗೇಶ್ ಬರಿ ನಟನೆ ಮಾತ್ರವಲ್ಲದೆ ಪೆನ್ ಹಿಡಿದು ಒಂದು ಹಾಡನ್ನು ಕೂಡ ಬರೆದಿದ್ದಾರೆ.

ಕೇಳ್ರಪ್ಪೋ ಕೇಳ್ರಿ, ಜಗ್ಗೇಶ್, ರಕ್ಷಿತಾ, ಭಟ್ರು ಮತ್ತೆ ಒಟ್ಟಿಗೆ ಬರ್ತಿದ್ದಾರೆ.!

ಜಗ್ಗೇಶ್ ನಟನೆಯ '8MM' ಚಿತ್ರದ ಒಂದು ಹಾಡಿನಲ್ಲಿ ಜಗ್ಗೇಶ್ ಸಾಹಿತ್ಯ ಇದೆ. ''ಬದುಕು ಒಂದು ಯುದ್ಧ ಭೂಮಿ ಕದನ ಮಾಡಿ ಗೆಲ್ಲು...'' ಎಂಬ ಹಾಡನ್ನು ಚಿತ್ರದ ನಾಯಕರಾಗಿರುವ ಜಗ್ಗೇಶ್ ಅವರೇ ಬರೆದಿದ್ದಾರೆ.

 Jaggesh wrote a song for his movie '8mm'

ನಟನಾಗಿ ಮಾತ್ರವಲ್ಲ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ ಜಗ್ಗೇಶ್ ಈಗ ಚಿತ್ರಸಾಹಿತಿ ಪಟ್ಟಕ್ಕೆ ಏರಿದ್ದಾರೆ. ತಮ್ಮ ಮೊದಲ ಹಾಡಿನಲ್ಲಿಯೇ ಬದುಕಿನ ಬಗ್ಗೆ ಜಗ್ಗೇಶ್ ಹೇಳಿದ್ದು, ಇದು ಚಿತ್ರದ ಕ್ಲೈಮ್ಯಾಕ್ಸ್ ಗೀತೆಯಾಗಿದೆ. ಅಂದಹಾಗೆ, ಈ ಹೊಸ ಹಾಡಿನ ವಿಷಯವನ್ನು ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

English summary
Kannada Actor Jaggesh wrote a song for his '8mm' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada