For Quick Alerts
  ALLOW NOTIFICATIONS  
  For Daily Alerts

  'ದುಬಾರಿ' ಆರಂಭಕ್ಕೂ ಮುನ್ನವೇ ಬ್ಲಾಸ್ಟಿಂಗ್ ಸುದ್ದಿ ನೀಡಿದ ಧ್ರುವ ಸರ್ಜಾ

  |

  ನಂದ ಕಿಶೋರ್ ನಿರ್ದೇಶನದಲ್ಲಿ ತಯಾರಾಗಿರುವ ಪೊಗರು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿರುವ ಪೊಗರು ಜನವರಿಯಲ್ಲ ತೆರೆಗೆ ಬರುವ ಹಾದಿಯಲ್ಲಿದೆ. ಈ ಸಿನಿಮಾ ರಿಲೀಸ್‌ಗೂ ಮೊದಲೇ ನಂದಕಿಶೋರ್ ಹಾಗೂ ಉದಯ್ ಮೆಹ್ತಾ ಜೊತೆ ದುಬಾರಿ ಸಿನಿಮಾ ಘೋಷಿಸಿದ್ದಾರೆ.

  ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada

  ಪೊಗರು ಬಿಡುಗಡೆಯಾದ ಬಳಿಕ ದುಬಾರಿ ಸಿನಿಮಾ ಅಧಿಕೃತವಾಗಿ ಚಿತ್ರೀಕರಣ ಪ್ರಾರಂಭಿಸಲಿದೆ. ಸದ್ಯದ ಮಾಹಿತಿ ಪ್ರಕಾರ ಶ್ರೀಲೀಲಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಪೊಗರು ದರ್ಶನಕ್ಕಾಗಿ ಕಾಯುತ್ತಿರುವ ಧ್ರುವ ಅಭಿಮಾನಿಗಳಿಗೆ ದುಬಾರಿ ಸರ್ಪ್ರೈಸ್ ನೀಡಿದ್ದರು. ಈಗ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಆಕ್ಷನ್ ಪ್ರಿನ್ಸ್ ತಯಾರಾಗುತ್ತಿದ್ದಾರೆ. ಮುಂದೆ ಓದಿ...

  ಜಗ್ಗುದಾದ ನಿರ್ದೇಶಕನ ಜೊತೆ ಹೊಸ ಸಿನಿಮಾ

  ಜಗ್ಗುದಾದ ನಿರ್ದೇಶಕನ ಜೊತೆ ಹೊಸ ಸಿನಿಮಾ

  ಜಗ್ಗುದಾದ ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗಡೆ ಜೊತೆ ಧ್ರುವ ಸರ್ಜಾ ಸಿನಿಮಾ ಮಾಡಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದ್ರೆ, ಪೊಗರು ಹಾಗೂ ಉದಯ್ ಮೆಹ್ತಾ ಸಿನಿಮಾ ಮುಂಚೂಣಿಯಲ್ಲಿತ್ತು. ಈಗ ರಾಘವೇಂದ್ರ ಹೆಗಡೆ ಚಿತ್ರ ಮತ್ತೆ ಸುದ್ದಿಗೆ ಬಂದಿದೆ.

  ಹೈದರಾಬಾದ್‌ಗೆ ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಹೋಗಿದ್ದೇಕೆ?ಹೈದರಾಬಾದ್‌ಗೆ ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಹೋಗಿದ್ದೇಕೆ?

  ಕಥೆ ಕೇಳಿದ ಧ್ರುವ ಸರ್ಜಾ

  ಕಥೆ ಕೇಳಿದ ಧ್ರುವ ಸರ್ಜಾ

  ರಾಘವೇಂದ್ರ ಹೆಗಡೆ ಅವರು ಇಂದು ಧ್ರುವ ಸರ್ಜಾ ಮನೆಗೆ ಭೇಟಿ ನೀಡಿದ್ದು, ಚಿತ್ರದ ಕಥೆ ವಿವರಿಸಿದ್ದಾರೆ. ಹೆಗಡೆ ಹೇಳಿದ ಕಥೆ ಕೇಳಿ ಧ್ರುವ ಸಖತ್ ಥ್ರಿಲ್ ಆಗಿದ್ದಾರೆ. ಅದರಲ್ಲೂ ಮೊದಲಾರ್ಧದ ಕಥೆ ಬಹಳ ಇಂಪ್ರೆಸ್ ಮಾಡಿದೆ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  ಜಗ್ಗುದಾದ ಬಳಿಕ ಸೈಲೆಂಟ್ ಆಗಿದ್ದ ನಿರ್ದೇಶಕ

  ಜಗ್ಗುದಾದ ಬಳಿಕ ಸೈಲೆಂಟ್ ಆಗಿದ್ದ ನಿರ್ದೇಶಕ

  2016ರಲ್ಲಿ ದರ್ಶನ್ ನಟನೆಯಲ್ಲಿ ಬಿಡುಗಡೆಯಾಗಿದ್ದ 'ಜಗ್ಗುದಾದ' ಚಿತ್ರದ ಬಳಿಕ ನಿರ್ದೇಶಕ ರಾಘವೇಂದ್ರ ಹೆಗಡೆ ಸೈಲೆಂಟ್ ಆಗಿದ್ದರು. ಸುಮಾರು ನಾಲ್ಕು ವರ್ಷದ ನಂತರ ನಿರ್ದೇಶಕ ರಾಘವೇಂದ್ರ ಮತ್ತೆ ಮುಂಚೂಣಿಗೆ ಬಂದಿದ್ದು ಧ್ರುವ ಸರ್ಜಾ ಜೊತೆ ಪ್ರಾಜೆಕ್ಟ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.

  'ದುಬಾರಿ' ಧ್ರುವ ಸರ್ಜಾಗೆ ಕನ್ನಡದ ಯುವ ನಟಿ ಜೋಡಿ?'ದುಬಾರಿ' ಧ್ರುವ ಸರ್ಜಾಗೆ ಕನ್ನಡದ ಯುವ ನಟಿ ಜೋಡಿ?

  ಆರಂಭದ ಬಗ್ಗೆ ಮಾಹಿತಿ ಇಲ್ಲ

  ಆರಂಭದ ಬಗ್ಗೆ ಮಾಹಿತಿ ಇಲ್ಲ

  ಜನವರಿಯಲ್ಲಿ ಪೊಗರು ಸಿನಿಮಾ ರಿಲೀಸ್ ಆಗಬಹುದು. ಈ ಸಿನಿಮಾ ತೆರೆಕಂಡ ಬಳಿಕ ದುಬಾರಿ ಚಿತ್ರೀಕರಣ ಆರಂಭಿಸಲಿದ್ದಾರೆ. ಬಹುಶಃ ಈ ಚಿತ್ರದ ಜೊತೆ ಜೊತೆಗೆ ರಾಘವೇಂದ್ರ ಹೆಗಡೆ ಅವರ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಬಹುದು. ಅಥವಾ ದುಬಾರಿ ಮುಗಿದ ಬಳಿಕ ಆರನೇ ಸಿನಿಮಾ ಆರಂಭಿಸಬಹುದು. ಆದರೆ, ಸದ್ಯಕ್ಕಂತು ಈ ಕುರಿತು ಸ್ಪಷ್ಟನೆ ಇಲ್ಲ.

  English summary
  Jaggu Dada director Raghavendra hegde narrated story line to Dhruva sarja today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X