For Quick Alerts
  ALLOW NOTIFICATIONS  
  For Daily Alerts

  ಕೆನ್ನೆಗೆ ಭಾರಿಸಿದ ಪ್ರಕಾಶ್ ರೈ: ತಾರಕ್ಕೇರಿದ ಪರ-ವಿರೋಧ ಚರ್ಚೆ

  |

  ಮಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಮೌನಕ್ಕೆ ಜಾರಿದ್ದ ಪ್ರಕಾಶ್ ರೈ ಇದೀಗ ಸಿನಿಮಾದ ದೃಶ್ಯವೊಂದರಿಂದಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ.

  ನಟ ಸೂರ್ಯ ಅಭಿನಿಯಿಸಿರುವ 'ಜೈ ಭೀಮ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ತುಳಿತಕ್ಕೆ ಒಳಗಾದವರ ಕುರಿತ ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸಿರುವ ಒಂದು ದೃಶ್ಯವಂತೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

  ಸಿನಿಮಾದ ದೃಶ್ಯವೊಂದರಲ್ಲಿ ನಟ ಪ್ರಕಾಶ್ ರೈ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಭಾರಿಸುತ್ತಾರೆ. ಪ್ರಕಾಶ್ ರೈ ಹೀಗೆ ಮಾಡಿರುವುದು ತಪ್ಪೆಂದು ಕೆಲವರು, ಪ್ರಕಾಶ್ ರೈ ಮಾಡಿರುವುದು ಸರಿಯೆಂದು ಕೆಲವರು ಹೀಗೆ ದೊಡ್ಡ ಮಟ್ಟದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಹೀಗೆ ಚರ್ಚೆ ಪ್ರಾರಂಭವಾಗಲು ಕಾರಣ ಪ್ರಕಾಶ್ ರೈ ಕಪಾಳಕ್ಕೆ ಹೊಡೆದಿರುವುದು ಹಿಂದಿ ಮಾತನಾಡಿದ್ದಕ್ಕೆ.

  ಸಿನಿಮಾದಲ್ಲಿ ಪ್ರಕಾಶ್ ರೈ ಎದುರು ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮಾತನಾಡುತ್ತಾನೆ, ಅವನ ಕಪಾಳಕ್ಕೆ ಹೊಡೆವ ಪ್ರಕಾಶ್ ರೈ ತಮಿಳಿನಲ್ಲಿ ಮಾತನಾಡು ಎನ್ನುತ್ತಾನೆ. ಆ ನಂತರ ಆ ವ್ಯಕ್ತಿ ತಮಿಳಿನಲ್ಲಿ ಮಾತನಾಡಲು ಆರಂಭಿಸುತ್ತಾನೆ. 'ಜೈ ಭೀಮ್' ಸಿನಿಮಾವು ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಯಲ್ಲಿಯೂ ಬಿಡುಗಡೆ ಆಗಿದ್ದು, ಹಿಂದಿಯಲ್ಲಿ ಹೊರತಾಗಿ ಇನ್ನೆಲ್ಲ ಭಾಷೆಯಲ್ಲಿಯೂ ಇದೇ ಸಂಭಾಷಣೆ ಇದೆ. ಆದರೆ ಹಿಂದಿಯಲ್ಲಿ ಮಾತ್ರ, ಕಪಾಳಕ್ಕೆ ಹೊಡೆದು ''ಈಗ ಸತ್ಯ ಹೇಳು'' ಎಂದಿದೆ.

  ಈ ದೃಶ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಹಲವರು ''ಪ್ರಕಾಶ್ ರೈ ಸಿನಿಮಾಗಳ ಮೂಲಕ ಪ್ರೊಪಾಗಾಂಡಾ ಭಿತ್ತಲು ಹೊರಟಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಿಗರೇ ಕೆಲವರು ಈ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಭಾಷೆ ಮಾತನಾಡಬೇಕು ಎಂಬುದು ವ್ಯಕ್ತಿಯ ಆಯ್ಕೆ ಹಿಂದಿ ಮಾತನಾಡಿದ ಎಂದು ಕಪಾಳಕ್ಕೆ ಹೊಡೆದಿರುವುದು ಸರಿಯಾದ ಭಾಷಾ ಪ್ರೇಮದ ಸರಿಯಾದ ಅಭಿವ್ಯಕ್ತಿ ಅಲ್ಲ ಎಂದಿದ್ದಾರೆ.

  ಪ್ರಕಾಶ್ ರೈ ಕಪಾಳಕ್ಕೆ ಹೊಡೆವ ದೃಶ್ಯವನ್ನು ಹಲವಾರು ಮಂದಿ ಸರಿಯೆಂದು ಸಹ ವಾದಿಸಿದ್ದು, 'ವರ್ಷಾನುಗಟ್ಟಲೆಗಳಿಂದ ಹಿಂದಿಯವರು ದಕ್ಷಿಣ ಭಾರತದವರನ್ನು ಜೋಕರ್‌ಗಳಂತೆ ತಮ್ಮ ಸಿನಿಮಾಗಳಲ್ಲಿ ಪ್ರದರ್ಶಿಸಿದ್ದಾರೆ, ಮದ್ರಾಸಿಗಳೆಂದು, ಚೆನ್ನೈವಾಲಾಗಳೆಂದು ಹಾಸ್ಯದ ಸರಕಾಗಿ ಬಳಸಿದ್ದಾರೆ. ಆಗೆಲ್ಲ ಇಲ್ಲದ 'ಭಾಷಾ ಸೂಕ್ಷ್ಮತೆ' ಈಗ ಒಂದು ದೃಶ್ಯಕ್ಕೆ ಪ್ರದರ್ಶಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

  ''ಹಿಂದಿ ಬರದೇ ಇದ್ದರೆ ಬ್ಯಾಂಕ್‌ನಲ್ಲಿ ಸೇವೆಯೇ ಇಲ್ಲ ಎಂದು ನಮ್ಮವರನ್ನೇ ಹೊರಗಟ್ಟಿದಾಗಲೂ ಮೌನವಾಗಿ ಸಹಿಸಿಕೊಂಡವರು, ಹಿಂದಿ ಭಾಷಿಕರಿಗೇ ಹೆಚ್ಚು ಉದ್ಯೋಗ ಸಿಗುವಂತೆ ಪರೀಕ್ಷಾ ವಿಧಾನಗಳನ್ನೇ ಸರ್ಕಾರಗಳು ಬದಲಾಯಿಸಿದಾಗಲೂ ಇಲ್ಲದ ಆಕ್ರೋಶ ಒಬ್ಬ ಹಿಂದಿ ಭಾಷಿಕನಿಗೆ ಕಪಾಳಕ್ಕೆ ಹೊಡೆದಾಗ ಉಕ್ಕಿ ಬಿಟ್ಟಿತೆ'' ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

  'ಜೈ ಭೀಮ್' ಸಿನಿಮಾವು ತುಳಿತಕ್ಕೊಳಗಾದವರ ಕತೆಯನ್ನು ಹೊಂದಿದ್ದು, ಸೂರ್ಯ ವಕೀಲನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Jai Bhim Tamil movie scene of Prakash Raj sparks against Hindi imposition. A scene in the movie created debate on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X