For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಸಾ.ರಾ. ಗೋವಿಂದು ಜತೆ ಜಟಾಪಟಿ: ಜೈ ಜಗದೀಶ್ ಕೊಟ್ಟ ಉತ್ತರವೇನು?

  |

  ಚಿತ್ರರಂಗದ ಹಿರಿಯ ನಿರ್ಮಾಪಕರಾದ ಸಾ.ರಾ. ಗೋವಿಂದು ಮತ್ತು ಜೈಜಗದೀಶ್ ಅವರ ನಡುವಿನ ಕಿತ್ತಾಟ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಾ.ರಾ. ಗೋವಿಂದು ವಿರುದ್ಧ ಜೈಜಗದೀಶ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.

  ರಾಜ್ ಕುಮಾರ್ ಪಾರ್ವತಮ್ಮ ಇದ್ದಾಗ ಯಾರ್ಯಾರಿಗೆ ಎಣ್ಣೆನೀರ್ ಕುಡ್ಸಿದ್ರಿ ಅಂತಾ ಗೊತ್ತಿದೆ,ನಾವ್ಯಾರೂ ಕೇರ್ ಮಾಡಲ್ಲ

  ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ಜೈಜಗದೀಶ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಆದರೆ ಇಷ್ಟಕ್ಕೆ ಅವರ ಸಂಘರ್ಷ ಮುಗಿದಿಲ್ಲ. ಸಾ.ರಾ. ಗೋವಿಂದು ಅವರಿಗೆ ಜೈ ಜಗದೀಶ್ ತಿರುಗೇಟು ನೀಡಿದ್ದು, ಜೈಲಿಗೆ ಹೋದರೂ ತೊಂದರೆಯಿಲ್ಲ, ಅವರ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ, ಸಾರ್ವಜನಿಕವಾಗಿ ಕ್ಷಮೆ ಕೋರದೆ ಇದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಾ.ರಾ. ಗೋವಿಂದು ಎಚ್ಚರಿಸಿದ್ದಾರೆ. ಟಿವಿ ವಾಹಿನಿಯೊಂದಕ್ಕೆ ಇಬ್ಬರೂ ನೀಡಿರುವ ಹೇಳಿಕೆಯಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಮುಂದೆ ಓದಿ...

  ಲಾಕ್ ಡೌನ್ ನಡುವೆಯೂ ಕಿತ್ತಾಟ: ಜೈ ಜಗದೀಶ್ ವಿರುದ್ಧ ಪೊಲೀಸರಿಗೆ ಸಾ.ರಾ ಗೋವಿಂದು ದೂರುಲಾಕ್ ಡೌನ್ ನಡುವೆಯೂ ಕಿತ್ತಾಟ: ಜೈ ಜಗದೀಶ್ ವಿರುದ್ಧ ಪೊಲೀಸರಿಗೆ ಸಾ.ರಾ ಗೋವಿಂದು ದೂರು

  ಏನಿದು ವಿವಾದ?

  ಏನಿದು ವಿವಾದ?

  ಚಿತ್ರರಂಗದ ಬಹಳಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ವಾಣಿಜ್ಯ ಮಂಡಳಿಯಲ್ಲಿ ಬೇಡಿಕೆ ಇಟ್ಟು ನಿರ್ಮಾಪಕರು, ಹಂಚಿಕೆದಾರರು, ಪ್ರದರ್ಶಕರಿಗೆ ಆಹಾರ, ದಿನಸಿ ಒದಗಿಸಲು ಆಗುತ್ತದೆಯೇ ಎಂದು ಕೇಳಿದ್ದರು. ಅನೇಕರಿಗೆ ಹಣಕಾಸಿನ ಸಹಾಯ ಮಾಡಲಾಗಿತ್ತು. ಹಾಗೆಯೇ ಬಿ.ಸಿ ಪಾಟೀಲ್ ಒಂದು ಸಾವಿರ ಮೂಟೆ ಅಕ್ಕಿ ಕಳುಹಿಸಿದ್ದರು. ಅವಶ್ಯಕತೆ ಇರುವವರು ತೆಗೆದುಕೊಂಡಿ ಹೋಗಿ ಎಂದಿದ್ದಷ್ಟೇ. ಅದಕ್ಕೇ ಜೈಜಗದೀಶ್ ಕುಡಿದ ಮತ್ತಿನಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನುವುದು ಸಾ.ರಾ.ಗೋವಿಂದು ಆರೋಪ. ಜೈ ಜಗದೀಶ್ ಅವರು ನಿಂದಿಸುವ ಆಡಿಯೋ ವೈರಲ್ ಆಗಿತ್ತು.

  ಭಿಕ್ಷೆ ರೀತಿ ಕೊಡುವುದು ತಪ್ಪು

  ಭಿಕ್ಷೆ ರೀತಿ ಕೊಡುವುದು ತಪ್ಪು

  ಘಟನೆ ದೊಡ್ಡದಲ್ಲ. ವೈಯಕ್ತಿಕ ಅಭಿಪ್ರಾಯವನ್ನು ಖಾರವಾಗಿ ಹೇಳಿದ್ದೇನೆ. ನಿರ್ಮಾಪಕರಿಗೆ ಅಕ್ಕಿ, ಬೇಳೆ, ಪಡಿತರ ಹಂಚುವ ವಿಚಾರ ನನಗೆ ಇಷ್ಟ ಆಗಿಲ್ಲ. ಇದು ಬೇಸರ ತಂದ ಸಂಗತಿ. ನಿರ್ಮಾಪಕರಾರೂ ಬೇಳೆ ಹಂಚಿ ಎಂದು ಕೇಳಿಲ್ಲ. ಏಕೆಂದರೆ ನಿರ್ಮಾಪಕ ಕೊಡುವವನೇ ಹೊರತು ಬೇಡುವವನಲ್ಲ. ಎಲ್ಲ ಸಿನಿಮಾ ನಿರ್ಮಾಪಕರು ಸಾವಿರಾರು ಜನರಿಗೆ ಊಟ ಹಾಕುವವರು. ಅವರು ಅಕ್ಕಿ ಬೇಳೆ ಕೇಳುತ್ತಾರೆ ಎನ್ನುವುದು ಸುಳ್ಳು ವಿಷಯ.

  ಗುರುರಾಜ್ಯ ಕಲ್ಯಾಣ ಮಂಟಪಕ್ಕೆ ಬಂದು, ಪಡಿತರ ಕಾರ್ಡು ಹಿಡಿದು ಕ್ಯೂನಲ್ಲಿ ನಿಂತು ದಿನಸಿ ಪಡೆದುಕೊಳ್ಳುವಂತೆ ಹೇಳಿದ್ದರು. ಅದನ್ನು ಅವರು ಆಯೋಜಿಸಿದ್ದು ರಾಜ್ ಕುಮಾರ್ ಹುಟ್ಟುಹಬ್ಬದ ದಿನ. ನಿರ್ಮಾಪಕರನ್ನು ರಾಜ್ ಕುಮಾರ್ ಅನ್ನದಾತ ಎಂದು ಹೇಳಿದವರು. ಅಂತಹವರಿಗೆ ಭಿಕ್ಷೆ ರೀತಿ ಅಕ್ಕಿ ಬೇಳೆ ಕೊಡೋದು ಸರಿಯಲ್ಲ ಎಂದು ವೈಯಕ್ತಿಕ ಕಾಮೆಂಟ್ಸ್ ಮಾಡಿದ್ದೆ ಎಂದು ಜೈ ಜಗದೀಶ್ ವಿವರಣೆ ನೀಡಿದ್ದಾರೆ.

  ಲಾಕ್ ಡೌನ್ ನಡುವೆಯೂ ಕಿತ್ತಾಟ: ನಟ ಜೈ ಜಗದೀಶ್ ವಿರುದ್ಧ ಎಫ್ಐಆರ್ ದಾಖಲುಲಾಕ್ ಡೌನ್ ನಡುವೆಯೂ ಕಿತ್ತಾಟ: ನಟ ಜೈ ಜಗದೀಶ್ ವಿರುದ್ಧ ಎಫ್ಐಆರ್ ದಾಖಲು

  ನೀವು ಹೇಳಿದ್ದು ನಾವು ಕೇಳಬೇಕಾ?

  ನೀವು ಹೇಳಿದ್ದು ನಾವು ಕೇಳಬೇಕಾ?

  ನೀವು ಒಂದು ಕಾಲದಲ್ಲಿ ದಬ್ಬಾಳಿಕೆ ಮಾಡಿ ಜೋರಾಗಿಯೇ ನಡೆಸಿದ್ದಿರಿ. ಅದು ಬೇರೆ ವಿಷಯ. ಈ ರೀತಿಯ ಕೆಲಸ ಸರಿಯಲ್ಲ. ನೀವೆಷ್ಟು ದೊಡ್ಡವರಾದರೂ ನಮ್ಮತನ ನಿಮಗೆ, ನಮ್ಮತನ ನಮಗೆ. ನಾನೂ ನಟನಾಗಿ ಬೆಳೆದಿದ್ದೇನೆ. ನೀವು ಹೇಳಿದ್ದೆಲ್ಲ ಕೇಳಬೇಕು, ಕೇರ್ ಮಾಡಬೇಕು ಎಂದೇನಿಲ್ಲ. ನಾನು ಕೇರ್ ಮಾಡಲು ನೀವು ನನ್ನನ್ನು ಸಾಕಿರಬೇಕು, ಜೀವಕ್ಕೆ ಆಧಾರವಾಗಿರಬೇಕು, ಸಹಾಯ ಮಾಡಿರಬೇಕು. ಹಾಗೆ ಮಾಡಿದ್ದರೆ ಮರ್ಯಾದೆ ಕೊಡಬೇಕು ಎನ್ನುವುದು ನಿಜ. ಆದರೆ ಆ ರೀತಿ ಏನೂ ಇಲ್ಲ. ನೀವು ಹೇಗೆ ಬಂದಿದ್ದೀರಿ ಎನ್ನುವುದು ಎಲ್ಲರಿಗೂ ಗೊತ್ತಿರವ ವಿಚಾರವೇ ಎಂದು ಸಾ.ರಾ. ಗೋವಿಂದು ವಿರುದ್ಧ ಕಿಡಿಕಾರಿದ್ದಾರೆ.

  ನಾನು ಅವರಂತೆ ಕುಡುಕ ಅಲ್ಲ

  ನಾನು ಅವರಂತೆ ಕುಡುಕ ಅಲ್ಲ

  ಕುಡಿದು ಮಾತಾಡಿದ್ದೇನೆ ಎನ್ನುವ ಅವರು ಕುಡಿಯಲು ನನಗೆ ಕೊಟ್ಟಿದ್ದರಾ? ಕುಡಿಯಲು ಅಂಗಡಿಗಳು ತೆರೆದಿದ್ದವಾ? ಉಪ್ಪು ಖಾರ ಹಾಕಿ ಸೇರಿಸಿ ಮಾತಾಡಿದ್ದಾರೆ. ನಾನು ಸಾ.ರಾ. ಗೋವಿಂದು ಥರ ಕುಡುಕ ಅಲ್ಲ. ಕುಡಿದಾಗ ಫೋನಲ್ಲಿ ಯಾರ ಬಳಿ ಏನೇನೋ ಎಷ್ಟೆಷ್ಟು ಅವಾಚ್ಯ ಶಬ್ದಗಳಿಂದ ಮಾತಾಡ್ತಾರೆ ಎಂದು ಎಲ್ಲರಿಗೂ ಗೊತ್ತು. ಅವರ ಮೇಲೆ ಎಷ್ಟು ಕೇಸ್‌ಗಳಿವೆ ಎಂದು ಗೊತ್ತು. ಕುಡಿದು ಮಾತಾಡೋರು ಅವರು. ನಾನು ಕುಡಿದಾಗ ಮಾತಾಡೊಲ್ಲ. ಸೈಲೆಂಟ್ ಆಗಿ ಮಲಗುತ್ತೇನೆ.

  ನಾನು ಹೆದರುವ ಮನುಷ್ಯನಲ್ಲ

  ನಾನು ಹೆದರುವ ಮನುಷ್ಯನಲ್ಲ

  ಅವರ ಮೇಲೆ ಎಷ್ಟು ಕೇಸ್‌ಗಳಿವೆಯೋ ನಮಗೂ ಗೊತ್ತು. ನಮಗೆ ತಿಳಿದಿಲ್ಲ ಎಂದುಕೊಂಡಿದ್ದಾರೆ. ಇದೇ ಮೊದಲ ಸಲ ಸ್ಟೇಷನ್‌ಗೆ ಹೋಗಿದ್ದಾರೆ ಎಂದಿದ್ದಾರೆ. ಅವರು ಯಾವಾಗೆಲ್ಲ ಸ್ಟೇಷನ್‌ಗೆ ಹೋಗಿ ಬಂದಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೀಸಲು ಹೋಗಿದ್ದಾರೆ. ಅವರಿಗೆ ಯಾರೂ ಸಿಕ್ಕಿಲ್ಲ, ನಾನು ಸಿಕ್ಕಿದ್ದೇನೆ ಎಂದು ಎಗರಿದ್ದಾರೆ. ಎಲ್ಲರೂ ಹೆದರಿಕೊಂಡು ಸುಮ್ಮನಾಗುತ್ತಾರೆ. ನಾನು ವೈಯಕ್ತಿಕವಾಗಿ ಹೆದರೋ ಮನುಷ್ಯ ಅಲ್ಲ.

  ಎಫ್‌ಐಆರ್ ಹಾಕುವ ಕೇಸ್ ಅಲ್ಲ

  ಎಫ್‌ಐಆರ್ ಹಾಕುವ ಕೇಸ್ ಅಲ್ಲ

  ಆ ಕೇಸ್‌ಗೆ ಎಫ್‌ಐಆರ್ ಹಾಕೊಲ್ಲ. ಇವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ದೂರು ಅಷ್ಟೇ. ಅದಕ್ಕೆ ಪ್ರತಿಯಾಗಿ ನನ್ನ ದಾಖಲೆಗಳನ್ನು ಹೇಳಿದ್ದೇನೆ. ಬರವಣಿಗೆಯಲ್ಲಿ ಕೊಟ್ಟಿದ್ದಕ್ಕೆ ಕೌಂಟರ್ ಆಗಿ ಕೊಟ್ಟಿದ್ದೇನೆ. ವೈಯಕ್ತಿಕವಾಗಿ ಸಾ.ರಾ. ಗೋವಿಂದು ಮೇಲೆ ದ್ವೇಷ, ಕೋಪ ಇಲ್ಲ. ದೊಡ್ಡ ಮನುಷ್ಯ ಆಗಬೇಕೆಂದು ಎಲ್ಲದಕ್ಕೂ ಕಡ್ಡಿಯಾಡಿಸುವುದಕ್ಕೆ ಹೋಗುತ್ತಾರೆ. ಆಡಿಯೋ ಕ್ಲಿಪ್‌ನಲ್ಲಿ ನಿಂದನೆ ಮಾಡಿದ್ದಕ್ಕೆ ಎಫ್‌ಐಆರ್ ಹಾಕಲು ಆಗೊಲ್ಲ. ನಾನೇನು ಕಳ್ಳತನ, ಕೊಲೆ, ಮಾನಹಾನಿ ಮಾಡಿಲ್ಲ. ಅವರು ಪ್ರಭಾವ ಬಳಸಿ ಎಫ್‌ಐಆರ್ ಹಾಕಿಸಿರಬಹುದು.

  ಸಾರ್ವಜನಿಕವಾಗಿ ಕ್ಷಮೆ ಕೋರಲಿ

  ಸಾರ್ವಜನಿಕವಾಗಿ ಕ್ಷಮೆ ಕೋರಲಿ

  ಜೈಜಗದೀಶ್ ಅವರಿಗೆ ಮಾನವೀಯತೆ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರಲಿ. ತಮ್ಮ ಜತೆಯಲ್ಲಿ ಯಾರಿದ್ದರು, ಎಲ್ಲಿದ್ದರು ಎಂಬ ಎಲ್ಲ ಮಾಹಿತಿ ಬಹಿರಂಗಪಡಿಸಲಿ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ತಯಾರಿ ನಡೆಸಿದ್ದೇನೆ. ಕುಡಿದ ಮತ್ತಿನಲ್ಲಿ ಏನು ಬೇಕಾದರೂ ಮಾತನಾಡಬಹುದಾ? ನಾವು ಹೀಗೆ ಮಾತಾಡಿದರೆ ಅವರು ಸಹಿಸಿಕೊಳ್ಳುತ್ತಾರಾ? 40 ವರ್ಷದ ಹೋರಾಟದಲ್ಲಿ ಇದೇ ಮೊದಲ ಬಾರಿ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿರುವುದು ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

  ಕ್ಷಮೆ? ಚಾನ್ಸೇ ಇಲ್ಲ

  ಕ್ಷಮೆ? ಚಾನ್ಸೇ ಇಲ್ಲ

  ನಾನು ಕ್ಷಮೆ ಪದ ಬಳಸೊಲ್ಲ. ಯಾವ ಕಾರಣಕ್ಕೂ ಕ್ಷಮೆ ಕೇಳೊಲ್ಲ. ಜೈಲಾದರೂ ಹೆದರೊಲ್ಲ. ಅವರು ಯಾರು ಎಂದು ನಾನು ಕ್ಷಮೆ ಕೇಳಬೇಕು? ನಾನೇನು ಅವರ ವಿರುದ್ಧ ಸಾರ್ವಜನಿಕರಿಗೆ ಹೇಳಿದ್ದೀನಾ. ಅವರು ಯಾವ ದೊಡ್ಡ ವ್ಯಕ್ತಿ ಎಂದು ನಾನು ಹೋಗಿ ಕ್ಷಮೆ ಕೇಳಬೇಕು? ನೂರಕ್ಕೆ ನೂರು ಚಾನ್ಸೇ ಇಲ್ಲ. ಗೆಳೆತನದಲ್ಲಿ ಕೇಳಬಹುದಾಗಿತ್ತು. ಆಗ ಉತ್ತರ ಕೊಡುತ್ತಿದ್ದೆ. ಪೊಲೀಸ್ ದೂರು ನೀಡಿ ಹೆದರಿಸಲು ಮುಂದಾದರೆ? ಕಾನೂನು ಎಲ್ಲರಿಗೂ ಇದೆ. ನಿಜ ಮಾತಾಡಿದ್ದೀರ ಎಂದು ಅನೇಕರು ನನಗೆ ಬೆಂಬಲ ನೀಡಿದ್ದಾರೆ ಎಂದು ಜೈಜಗದೀಶ್ ಹೇಳಿದ್ದಾರೆ.

  English summary
  Actor, producer Jai Jagadish slams producer Sa Ra Govindu for lodging complaint against him after his audio clip scolding Sa Ra Govindu goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X