twitter
    For Quick Alerts
    ALLOW NOTIFICATIONS  
    For Daily Alerts

    ಸುನೀಲ್ ಪುರಾಣಿಕ್ ಆಯ್ಕೆ ನನಗೆ ಖುಷಿ ನೀಡಿಲ್ಲ- ಜೈಜಗದೀಶ್

    |

    ''ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸುನೀಲ್ ಪುರಾಣಿಕ್ ಆಯ್ಕೆ ಮಾಡಿದ್ದು ನನಗೆ ಖುಷಿ ನೀಡಿಲ್ಲ'' ಎಂದು ಜೈಜಗದೀಶ್ ಹೇಳಿದ್ದಾರೆ. 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಎಕ್ಸ್ ಕ್ಲ್ಯೂಸಿವ್ ಆಗಿ ಅಕಾಡೆಮಿ ಆಯ್ಕೆ ಬಗ್ಗೆ ಮಾತನಾಡಿದ್ದಾರೆ.

    ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ನಟ ಸುನೀಲ್ ಪುರಾಣಿಕ್ ನಿನ್ನೆ (ಜನವರಿ 2) ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಪಡೆದ ಒಂದೇ ದಿನದಲ್ಲಿ ಅವರ ಆಯ್ಕೆ ಸರಿ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ.

    ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡಮಿಗೆ ಅಧ್ಯಕ್ಷಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡಮಿಗೆ ಅಧ್ಯಕ್ಷ

    ಹಿರಿಯ ನಟ ಜೈಜಗದೀಶ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ''ಸಿನಿಮಾ ಅನುಭವ ಇಲ್ಲದವರನ್ನು ನೇಮಿಸಿಕೊಂಡಿದ್ದು ಸರ್ಕಾರದ ಅತೀ ದೊಡ್ಡ ತಪ್ಪು'' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ಜೈಜಗದೀಶ್ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಸುನೀಲ್ ಪುರಾಣಿಕ್ ಆಯ್ಕೆ ಬಗ್ಗೆ ತಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ''ಸುನೀಲ್ ಪುರಾಣಿಕ್ ನನಗೆ ವೈರಿ ಅಲ್ಲ.. ಆದರೆ, ಚಲನಚಿತ್ರ ಅಕಾಡೆಮಿಗೆ ಅವರು ಸರಿಯಾದ ಆಯ್ಕೆ ಅಲ್ಲ'' ಎಂದಿದ್ದಾರೆ.

    ಸುನೀಲ್ ಪುರಾಣಿಕ್ ನನ್ನ ವೈರಿ ಅಲ್ಲ, ಆದರೆ..

    ಸುನೀಲ್ ಪುರಾಣಿಕ್ ನನ್ನ ವೈರಿ ಅಲ್ಲ, ಆದರೆ..

    ''ಸುನೀಲ್ ಪುರಾಣಿಕ್ ನನ್ನ ವೈರಿ ಅಲ್ಲ.. ನಾವು ಜೊತೆಗೆ ಕೆಲಸ ಮಾಡಿದ್ದೇವೆ. ಒಳ್ಳೆಯ ಸ್ನೇಹಿತರು. ಸುನೀಲ್ ಪುರಾಣಿಕ್ ಸಿನಿಮಾಗಿಂತ ಟಿವಿಗೆ ಜನಪ್ರಿಯರು. ಸಿನಿಮಾ ಅಕಾಡೆಮಿ ಎಂದು ಬಂದಾಗ ತುಂಬ ಅನುಭವ ಹಾಗೂ ಹೆಸರು ಮಾಡಿರುವವರು ಆಗಿರಬೇಕು ಎನ್ನುವುದು ನನ್ನ ಅಭಿಪ್ರಾಯ. ಸುನೀಲ್ ಪುರಾಣಿಕ್ ರನ್ನು ಸರ್ಕಾರ ಆಯ್ಕೆ ಮಾಡಿರುವುದು ನನಗೆ ಖುಷಿ ಆಗಲಿಲ್ಲ.''

    ಸಿನಿಮಾ ಅನುಭವ ಇರುವವರನ್ನು ಆಯ್ಕೆ ಮಾಡಬೇಕಿತ್ತು

    ಸಿನಿಮಾ ಅನುಭವ ಇರುವವರನ್ನು ಆಯ್ಕೆ ಮಾಡಬೇಕಿತ್ತು

    ''ಅನುಭವ ಇರುವ ವ್ಯಕ್ತಿಗಳು ಆ ಜಾಗಕ್ಕೆ ಬರಬೇಕಾಗಿತ್ತು. ಅವರು ಟಿವಿಯಲ್ಲಿ ಮಾಸ್ಟರ್. ಆದರೆ, ಸಿನಿಮಾದಲ್ಲಿ ಅಲ್ಲ. ಈ ಹಿಂದೆ ಚಲನಚಿತ್ರ ಅಕಾಡೆಮಿಯಲ್ಲಿ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ರಾಜೇಂದ್ರ ಸಿಂಗ್ ಬಾಬು, ತಾರಾ ಅನುರಾಧ ಈ ರೀತಿ ಅನುಭವ ಇರುವ ಹಿರಿಯರನ್ನು ಆಯ್ಕೆ ಮಾಡಿದ್ದರು. ಟಿವಿ ಮಾಧ್ಯಮದವರನ್ನು ಸಿನಿಮಾ ಮಾಧ್ಯಮಕ್ಕೆ ತಂದಿದ್ದು ಸರಿ ಎನಿಸಿಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ.''

    ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಅಧ್ಯಕ್ಷ - ಸುನಿಲ್ ಪುರಾಣಿಕ್ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಅಧ್ಯಕ್ಷ - ಸುನಿಲ್ ಪುರಾಣಿಕ್

    ಸರೋಜದೇವಿ, ಭಾರತಿ ವಿಷ್ಣುವರ್ಧನ್

    ಸರೋಜದೇವಿ, ಭಾರತಿ ವಿಷ್ಣುವರ್ಧನ್

    ''ಸರ್ಕಾರ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವುದು ನನ್ನ ಮಾತು. ಅದು ಬಿಟ್ಟರೆ, ನಾನು ಪುರಾಣಿಕ್ ಅವರನ್ನು ದೂರುವುದಿಲ್ಲ. ಚಿತ್ರರಂಗದಲ್ಲಿ ಅನುಭವ ಇರುವ ಅನೇಕರು ಇದ್ದಾರೆ. ಚಿತ್ರರಂಗದಲ್ಲಿ ನೊಂದು, ಬೆಂದವರು, ಕಷ್ಟ ಪಟ್ಟವರು ಇದ್ದಾರೆ. ಸರೋಜದೇವಿ, ಭಾರತಿ ವಿಷ್ಣುವರ್ಧನ್ ರಂತಹ ಮಹಿಳೆಯರು ಇದ್ದಾರೆ. ಹಿರಿಯರು ಇದ್ದಾರೆ. ಅವರಿಗೆ ಈ ಜವಾಬ್ದಾರಿ ನೀಡಬಹುದು ಎನ್ನುವುದು ನನ್ನ ಮಾತು.''

    ಅವಮಾನ ಮಾಡುವ ಉದ್ದೇಶ ನನ್ನದಲ್ಲ

    ಅವಮಾನ ಮಾಡುವ ಉದ್ದೇಶ ನನ್ನದಲ್ಲ

    ''ನಮ್ಮ ನಿರ್ಮಾಪಕರ ಸಂಘದ ಚುನಾವಣೆ ಇತ್ತು. ಆ ವೇಳೆ ಸುನೀಲ್ ಪುರಾಣಿಕ್ ಅಕಾಡೆಮಿಗೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಬಂತು. ಆಗ ಅಲ್ಲಿ ಇರುವವರೇ ಅವರು ಯಾರು..? ಎಂದು ಕೇಳಿದರು. ಆಗ ನಾನು ಅವರು ಒಬ್ಬ ಕಲಾವಿದ. ಟಿವಿಯಲ್ಲಿ ಜನಪ್ರಿಯತೆ ಇದೆ. ಆದರೆ, ಸಿನಿಮಾದಲ್ಲಿ ಹೆಸರು ಮಾಡಿಲ್ಲ ಎಂದೆ. ಅವರಿಗೆ ಅವಮಾನ ಮಾಡುವ ಉದ್ದೇಶ ನನ್ನದಲ್ಲ. ಆದರೆ, ಅವರ ಆಯ್ಕೆ ಸರಿ ಅಲ್ಲ.''

    English summary
    Actor Jai Jagadish unhappy about the selection of Karnataka Chalanachitra Academy chief Sunil Puranik.
    Friday, January 3, 2020, 12:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X