Jailer: ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಯಾವ ಚಿತ್ರವೂ ಮಾಡದಿದ್ದ ದಾಖಲೆ ಬರೆದ ಜೈಲರ್ ಕನ್ನಡ ವರ್ಷನ್!
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟ್ಯಾಗ್ ಪಡೆದುಕೊಂಡಿತ್ತು. ಈ ಚಿತ್ರ ಮೊದಲ ದಿನ ದಾಖಲೆಯ ಆರಂಭವನ್ನು ಪಡೆದುಕೊಂಡು ಈಗಾಗಲೇ 600 ಕೋಟಿ ಕ್ಲಬ್ ಅನ್ನೂ ಸಹ ಸೇರಿದೆ.
ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಸತತವಾಗಿ ಒಳ್ಳೆಯ ಬುಕಿಂಗ್ ಪಡೆದುಕೊಂಡು ಬಂದಿರುವ ಜೈಲರ್ 500 ಕ್ಕಿಂತ ಪ್ರದರ್ಶನಗಳನ್ನು ಪಡೆದುಕೊಂಡ ದಿನವೇ ಇಲ್ಲ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಇನ್ನೂ ಹಲವಾರು ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಂಡು ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಜೈಲರ್ ತಮಿಳಿನಲ್ಲಿ ಮಾತ್ರವಲ್ಲದೇ ಕನ್ನಡ, ಮಲಯಾಳಂ, ತೆಲುಗು ಹಾಗೂ ಹಿಂದಿ ಭಾಷೆಗಳಿಗೂ ಸಹ ಜೈಲರ್ ಡಬ್ ಆಗಿ ಬಿಡುಗಡೆಗೊಂಡಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.
ಇನ್ನು ಜೈಲರ್ ಕನ್ನಡ ವರ್ಷನ್ ಮೊದಲಿಗೆ ಕೇವಲ 30 ಪ್ರದರ್ಶನಗಳನ್ನು ಬಿಡುಗಡೆಯ ದಿನ ಪಡೆದುಕೊಂಡು ನಂತರದ ದಿನಗಳಲ್ಲಿ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವುದರ ಮೂಲಕ ಹೆಚ್ಚಿನ ಶೋಗಳನ್ನು ಪಡೆದುಕೊಂಡಿದೆ. ಸದ್ಯ ಜೈಲರ್ ಚಿತ್ರ 19 ದಿನಗಳ ಓಟವನ್ನು ಪೂರೈಸಿದ್ದು ಈಗಲೂ ಸಹ ಒಳ್ಳೆಯ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಪರಿಣಾಮವಾಗಿ ಜೈಲರ್ ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಈ ಹಿಂದೆ ಯಾವುದೇ ಕನ್ನಡ ಡಬ್ ಚಿತ್ರಗಳೂ ಸಹ ಮಾಡಿರದ ದಾಖಲೆಯನ್ನು ಬರೆದಿದೆ. ಹೌದು, ಜೈಲರ್ ಕನ್ನಡ ವರ್ಷನ್ 5 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ಮೊದಲ ಕನ್ನಡ ಡಬಿಂಗ್ ಸಿನಿಮಾ ಎಂಬ ದಾಖಲೆ ಬರೆದಿದೆ.
ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 10 ಕನ್ನಡ ಡಬಿಂಗ್ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..
1.ಜೈಲರ್ - ₹5.02 ಕೋಟಿ ಗ್ರಾಸ್ ಕಲೆಕ್ಷನ್ (19 ದಿನಗಳು)
2. ಸೈರಾ - ₹3.5 ಕೋಟಿ ಗ್ರಾಸ್ ಕಲೆಕ್ಷನ್
3. ಆದಿಪುರುಷ್ - ₹2.41 ಕೋಟಿ ಗ್ರಾಸ್ ಕಲೆಕ್ಷನ್
4. ದಬಾಂಗ್ 3 - ₹2.3 ಕೋಟಿ ಗ್ರಾಸ್ ಕಲೆಕ್ಷನ್
5. ಆರ್ ಆರ್ ಆರ್ - ₹1.68 ಕೋಟಿ ಗ್ರಾಸ್ ಕಲೆಕ್ಷನ್
6. ರಂಗಸ್ಥಳಂ - ₹1 ಕೋಟಿ ಗ್ರಾಸ್ ಕಲೆಕ್ಷನ್
7. ಅವತಾರ್ 2 - ₹97 ಲಕ್ಷ ಗ್ರಾಸ್ ಕಲೆಕ್ಷನ್
8. ಕಮಾಂಡೋ (ವಿವೇಗಂ) - ₹40 ಲಕ್ಷ ಗ್ರಾಸ್ ಕಲೆಕ್ಷನ್
9. ಪೊನ್ನಿಯಿನ್ ಸೆಲ್ವನ್ - ₹38.7 ಲಕ್ಷ ಗ್ರಾಸ್ ಕಲೆಕ್ಷನ್
10. ಜಗಮಲ್ಲ (ವಿಶ್ವಾಸಂ) - ₹24 ಲಕ್ಷ ಗ್ರಾಸ್ ಕಲೆಕ್ಷನ್


Click it and Unblock the Notifications











