Don't Miss!
- News
ದೆಹಲಿ ಮದ್ಯ ಹಗರಣದ ಹಣವನ್ನು ಗೋವಾ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ಎಎಪಿ: ಇಡಿ ಹೇಳಿಕೆಯಲ್ಲಿ ಏನಿದೆ?
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022 ಕನ್ನಡ ಚಿತ್ರರಂಗಕ್ಕೆ ಗೋಲ್ಡನ್ ಇಯರ್ ಎಂದು ಹೇಳಲು ಇಲ್ಲಿವೆ ಐದು ಕಾರಣಗಳು
2022 ವರ್ಷ ಬಾಲಿವುಡ್ ಸಿನಿ ಮಂದಿಗೆ ಅತಿಕೆಟ್ಟ ವರ್ಷವಾಗಿ ಪರಿಣಮಿಸಿದರೂ ಸಹ ದಕ್ಷಿಣ ಭಾರತ ಚಿತ್ರರಂಗಗಳ ಸಿನಿ ಮಂದಿಗೆ ಮಾತ್ರ ಗೋಲ್ಡ್ ಇಯರ್ ಆಗಿದೆ. ಹೌದು, ಕಳೆದೆರಡು ವರ್ಷಗಳಿಂದ ಕೊರೊನಾ ಲಾಕ್ ಡೌನ್ ತಲೆ ನೋವನ್ನು ಎದುರಿಸಿದ್ದ ದಕ್ಷಿಣ ಭಾರತ ಚಿತ್ರರಂಗಗಳಿಗೆ ಈ ವರ್ಷ ಬಿಡುಗಡೆಗೊಂಡ ಹಲವಾರು ಚಿತ್ರಗಳು ಭರ್ಜರಿಯಾಗಿ ಗೆದ್ದು ಮರುಜೀವ ಪಡೆದುಕೊಳ್ಳುವಂತೆ ಮಾಡಿವೆ.
ಅದರಲ್ಲಿಯೂ ಈ ವರ್ಷ ವಿಶೇಷವಾಗಿ ಕನ್ನಡ ಚಲನಚಿತ್ರರಂಗಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳೂ ಸಹ ಯಶಸ್ಸು ಕಂಡಿದ್ದು, ಇತ್ತೀಚೆಗಷ್ಟೆ ವೇದ ಯಶಸ್ಸಿನ ಮೂಲಕ ಶಿವ ರಾಜ್‌ಕುಮಾರ್ ಸಹ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಹಾಗೂ ಕನ್ನಡ ಚಿತ್ರರಂಗದ ಬೆಳವಣಿಗೆ ಬಗ್ಗೆ ಮಾತನಾಡುವಂತೆ ಮಾಡಿವೆ.
ಇನ್ನು ಐದು ಕಾರಣಕ್ಕಾಗಿ 2022 ಅನ್ನು ಕನ್ನಡ ಚಿತ್ರರಂಗಕ್ಕೆ ಗೋಲ್ಡನ್ ಇಯರ್ ಎಂದೇ ಕರೆಯಬಹುದಾಗಿದೆ. ಆ ಐದು ಅಂಶಗಳು ಯಾವುವು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

1. ನೂರು ಕೋಟಿಯ ಐದು ಚಿತ್ರಗಳು
ಈ ಹಿಂದೆ ಕನ್ನಡ ಚಿತ್ರಗಳು ನೂರು ಕೋಟಿ ಕ್ಲಬ್ ಸೇರುವುದು ಕಷ್ಟ ಎಂಬ ಅಭಿಪ್ರಾಯವಿತ್ತು ಹಾಗೂ ಈ ಕುರಿತು ಪರಭಾಷಾ ಅಭಿಮಾನಿಗಳು ಗೇಲಿಯನ್ನೂ ಸಹ ಮಾಡುತ್ತಿದ್ದರು. ಆದರೆ ಈ ವರ್ಷ ಕನ್ನಡ ಚಿತ್ರರಂಗ ಒಟ್ಟು ಐದು ನೂರು ಕೋಟಿ ಚಿತ್ರಗಳನ್ನು ನೀಡುವುದರ ಮೂಲಕ ಅಬ್ಬರಿಸಿದೆ. ಮೊದಲಿಗೆ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಮೂಲಕ ವರ್ಷದ ಮೊದಲ ಶತಕ ಬಾರಿಸಿದ ಕನ್ನಡ ಚಿತ್ರರಂಗ ನಂತರ ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಕಾಂತಾರ ಚಿತ್ರಗಳು ಸಹ ನೂರು ಕೋಟಿಗಿಂತ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾದವು.

2. ಸಾವಿರ ಕೋಟಿ ಕಲೆಕ್ಷನ್!
ಮೊದಲೇ ಹೇಳಿದಂತೆ ಕನ್ನಡ ಚಿತ್ರಗಳು ನೂರು ಕೋಟಿ ಗಳಿಸುವುದೂ ಸಹ ಕಷ್ಟ ಎಂಬ ಅಭಿಪ್ರಾಯವಿತ್ತು. ಕೆಜಿಎಫ್ ಚಾಪ್ಟರ್ 2 ಬರೋಬ್ಬರಿ 1250 ಕೋಟಿ ಗಳಿಸುವ ಮೂಲಕ ಈ ವರ್ಷ ಭಾರತದಲ್ಲ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡು ಟೀಕಾಕಾರರೂ ಸಹ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಹೊಗಳುವಂತೆ ಮಾಡಿದೆ.

3. ಐಎಂಡಿಬಿ ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೇಲುಗೈ
ಇನ್ನು ಐಎಂಡಿಬಿ ಬಿಡುಗಡೆಗೊಳಿಸಿದ ವರ್ಷದ ಜನಪ್ರಿಯ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಕನ್ನಡದ ಕೆಜಿಎಫ್ ಚಾಪ್ಟರ್ 2, ಕಾಂತಾರ ಹಾಗೂ 777 ಚಾರ್ಲಿ ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಮೂಲಕ ಈ ವರ್ಷ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಂಡ ಚಿತ್ರರಂಗ ಎಂಬ ದಾಖಲೆಯನ್ನು ಕನ್ನಡ ಚಿತ್ರರಂಗ ಬರೆದಿದೆ.

4. ಅತಿಹೆಚ್ಚು ಜನರಿಂದ ವೀಕ್ಷಣೆ
ಇನ್ನು ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಅತಿಹೆಚ್ಚು ಟಿಕೆಟ್ ಮಾರಾಟವಾದದ್ದು ಕನ್ನಡ ಚಿತ್ರಗಳದ್ದು. ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳ ಟಿಕೆಟ್‌ಗಳು ಹೆಚ್ಚೆಚ್ಚು ಮಾರಾಟವಾಗಿ ದಾಖಲೆಗೆ ಕಾರಣವಾಗಿವೆ.

5. ಕಿಚ್ಚ - ದರ್ಶನ್ ಒಂದಾಗಿದ್ದು
ಬಾಕ್ಸ್ ಆಫೀಸ್, ಚಿತ್ರಗಳ ಯಶಸ್ಸು ಮಾತ್ರವಲ್ಲದೇ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರು ಸಹ ಹಲವು ವರ್ಷಗಳ ಬಳಿಕ ಮಾತನಾಡಿದ್ದು ಈ ವರ್ಷದ ಮತ್ತೊಂದು ಖುಷಿಯ ಸಂಗತಿ ಎನ್ನಬಹುದು. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದದ್ದರ ಬಗ್ಗೆ ಟ್ವೀಟ್ ಮಾಡಿದ್ದ ಸುದೀಪ್ ದರ್ಶನ್ ಪರ ಮಾತನಾಡಿದ್ದರು ಹಾಗೂ ಇದಕ್ಕೆ ದರ್ಶನ್ ಪ್ರತಿಕ್ರಿಯಿಸಿದ್ದರು. ಹೀಗೆ ಇಬ್ಬರೂ ಹಲವಾರು ವರ್ಷಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದನ್ನು ಕಂಡ ಸಿನಿ ರಸಿಕರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ 2022 ನಿಜಕ್ಕೂ ಗೋಲ್ಡನ್ ಇಯರ್ ಎಂದಿದ್ದರು.