For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್ ಬಾಂಡ್ ಸೀರಿಸ್ ನ 25ನೇ ಸಿನಿಮಾ ಅನೌನ್ಸ್

  |

  ಹಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಜೇಮ್ಸ್ ಬಾಂಡ್ ಸೀರಿಸ್ ಈಗ ಮತ್ತೆ ಬರುತ್ತದೆ. ಈ ಸರಣಿಯ 25ನೇ ಸಿನಿಮಾ ಇದೀಗ ಘೋಷಣೆ ಆಗಿದೆ. ಈ ಸಿನಿಮಾಗೆ 'ನೋ ಟೈಮ್ ಟು ಡೈ' ಎಂದು ಹೆಸರಿಡಲಾಗಿದೆ.

  'ನೋ ಟೈಮ್ ಟು ಡೈ' ಚಿತ್ರದಲ್ಲಿಯೂ ನಾಯಕನಾಗಿ ಡೇನಿಯಲ್ ಕ್ರೇಗ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ನಟರಾದ ರೆಮಿ ಮೆಲಿಕ್, ಲಶಾನಾ ಲಿಂಚ್, ರಾರಿ ಕಿನಿಯರ್, ಡೇವಿಡ್ ಬೆನ್ ಸ್ಸಲಾ, ಬೆಸ್ ವಿಶಾ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

  12 ವರ್ಷಗಳ ಡೇಟಿಂಗ್ ನಂತರ ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್' 12 ವರ್ಷಗಳ ಡೇಟಿಂಗ್ ನಂತರ ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್'

  ಡೇನಿಯಲ್ ಕ್ರೇಗ್ ಈ ಚಿತ್ರದಲ್ಲಿಯೂ ಪತ್ತೆದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾರಿ ಪುಕನಗ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 30 ಸೆಕೆಂಡ್ ನ ಟೀಸರ್ ಬಿಡುಗಡೆ ಆಗಿದ್ದು, ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಈ ಹಿಂದೆಯೇ ಚಿತ್ರದ ಹೆಸರನ್ನು ಘೋಷಣೆ ಮಾಡಬೇಕಿತ್ತು. ಆದರೆ, ಚಿತ್ರತಂಡದ ಸಿಬ್ಬಂದಿಗಳು ಗಾಯಗೊಂಡಿದ್ದ ಕಾರಣ ಟೈಟಲ್ ಲಾಂಚ್ ಮುಂದಕ್ಕೆ ಹಾಕಲಾಗಿತ್ತು. ಆ ಕಾರಣ ಚಿತ್ರದ ಫಸ್ಟ್ ಲುಕ್ ಬಂದು ಎರಡು ತಿಂಗಳ ನಂತರ ಟೈಟಲ್ ಹೊರಬಂದಿದೆ.

  'ಅವತಾರ್' ಚಿತ್ರಕ್ಕೆ ಟೈಟಲ್ ಕೊಟ್ಟಿದ್ದೇ ಈ ಬಾಲಿವುಡ್ ನಟನಂತೆ.! 'ಅವತಾರ್' ಚಿತ್ರಕ್ಕೆ ಟೈಟಲ್ ಕೊಟ್ಟಿದ್ದೇ ಈ ಬಾಲಿವುಡ್ ನಟನಂತೆ.!

  ಅಂದಹಾಗೆ, ಜೇಮ್ಸ್ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಮ್ ಟು ಡೈ' 2020 ರಲ್ಲಿ ಬಿಡುಗಡೆ ಆಗಲಿದೆ. ಲಂಡನ್ ನಲ್ಲಿ ಏಪ್ರಿಲ್ 3 ರಂದು ಹಾಗೂ ಅಮೆರಿಕಾದಲ್ಲಿ ಏಪ್ರಿಲ್ 8 ರಂದು ಚಿತ್ರ ತೆರೆಗೆ ಬರಲಿದೆ.

  English summary
  James Bond series 25th movie titeld as 'No Time To Die'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X