James day 5 box office collection: 'ಜೇಮ್ಸ್' 5ನೇ ದಿನದ ಕಲೆಕ್ಷನ್ ಲೆಕ್ಕಾಚಾರವೇನು?

'ಜೇಮ್ಸ್' ಸಿನಿಮಾ ಮಾರ್ಚ್ 17ರಂದು ತೆರೆಕಂಡ ದಿನದಿಂದ ವರ್ಲ್ಡ್ ವೈಡ್ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯ, ಹೊರ ರಾಜ್ಯ ಮತ್ತೆ ಬೇರೆ ಬೇರೆ ದೇಶಗಳಲ್ಲಿ ಪುನೀತ್ ಅಭಿನಯದ 'ಜೇಮ್ಸ್' ಸಿನಿಮಾ ರಿಲೀಸ್ ಆಗಿದ್ದು ಕಲೆಕ್ಷನ್ ವಿಚಾರದಲ್ಲಿ ಭಾರೀ ಸದ್ದು ಮಾಡಿದೆ.

'ಜೇಮ್ಸ್' ಸಿನಿಮಾದ ಡೇ ಒನ್ ಕಲೆಕ್ಷನ್‌ ನಿಂದ ಹಿಡಿದು ಇಲ್ಲಿಯವರೆಗೂ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಕಣ್ಣಿಟ್ಟಿರುವ ಸಿನಿಮಾ ಮಂದಿ ಭಾರಿ ಕೌತುಕದಿಂದ 'ಜೇಮ್ಸ್' ಕಲೆಕ್ಷನ್ ಬಗ್ಗೆ ಮಾತನಾಡುತ್ತಿದ್ದಾರೆ.

ಹೌದು ರಿಲೀಸ್‌ಗೂ ಮುನ್ನವೇ 'ಜೇಮ್ಸ್' ಚಿತ್ರದ ಥಿಯೇಟರ್ ಲಿಸ್ಟ್, ಶೋ ಲಿಸ್ಟ್ ನೋಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈ ಊಹೆಗೂ ಮೀರಿ 'ಜೇಮ್ಸ್' ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ. ಹಾಗಿದ್ದರೆ, ಜೇಮ್ಸ್ ಸಿನಿಮಾದ ಐದನೇ ದಿನದ ಕಲೆಕ್ಷನ್ ಎಷ್ಟು? ಮೊದಲ ನಾಲ್ಕು ದಿನ ಎಷ್ಟು ಗಳಿಕೆ ಕಂಡಿದೆ? ಅನ್ನುವುದರ ಡಿಟೈಲ್ಸ್ ಇಲ್ಲಿದೆ.

ಕರ್ನಾಟಕದಲ್ಲಿ 'ಜೇಮ್ಸ್' ಕಲೆಕ್ಷನ್ ಎಷ್ಟು

ಕರ್ನಾಟಕದಲ್ಲಿ 'ಜೇಮ್ಸ್' ಕಲೆಕ್ಷನ್ ಎಷ್ಟು

ಚಿತ್ರ ರಿಲೀಸ್‌ ಆದ ದಿನ ಅಂದರೆ ಮಾರ್ಚ್ 17ರಂದು 'ಜೇಮ್ಸ್' ಸಿನಿಮಾದ ಕಲೆಕ್ಷನ್ ಕರ್ನಾಟಕದಲ್ಲಿ 20.3 ಕೋಟಿ ಎಂಬ ವರದಿ ಬಂದಿತ್ತು. ಎರಡನೇ ದಿನದ ಲೆಕ್ಕಾಚಾರ ಕೂಡ ಭಾರೀ ಸುದ್ದಿಯಾಗಿತ್ತು. ಇದೀಗ ಜೇಮ್ಸ್ ರಿಲೀಸ್ ಆಗಿ ಐದು ದಿನ ಪೂರೈಸಿದ್ದು, ಒಟ್ಟಾರೆ ಕಲೆಕ್ಷನ್ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಹಾಗಿದ್ರೆ 'ಜೇಮ್ಸ್' ಸಿನಿಮಾದ ಐದನೇ ದಿನದ ಕಲೆಕ್ಷನ್ ನೋಡುವ ಮೊದಲು ಕರ್ನಾಟಕದಲ್ಲಿ ಜೇಮ್ಸ್ ಚಿತ್ರದ ಕಲೆಕ್ಷನ್ ಇಲ್ಲಿಯವರೆಗೂ ಎಷ್ಟಾಗಿದೆ ಎಂಬ ಬಗ್ಗೆ ಒಮ್ಮೆ ನೋಡೋಣ.

'ಜೇಮ್ಸ್' 5 ದಿನದ ಕಲೆಕ್ಷನ್ ಎಷ್ಟು?

'ಜೇಮ್ಸ್' 5 ದಿನದ ಕಲೆಕ್ಷನ್ ಎಷ್ಟು?

'ಜೇಮ್ಸ್' ಸಿನಿಮಾದ ಡೇ 1 ನಿಂದ ಡೇ 5 ವರೆಗಿನ ಕರ್ನಾಟಕದ ಲೆಕ್ಕಾಚಾರ ಈ ಕೆಳಕಂಡಂತೆ ಇದೆ. ಮೊದಲ ನಾಲ್ಕು ದಿನ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ಸಿಕ್ಕಾಪಟ್ಟೆ ಕಲೆಕ್ಷನ್ ಕಂಡಿದೆ.

ಮೊದಲ ದಿನ: Rs 20.3 ಕೋಟಿ ( ಕರ್ನಾಟಕ)

2ನೇ ದಿನ : Rs 8.89 ಕೋಟಿ ( ಕರ್ನಾಟಕ)

3ನೇ ದಿನ : Rs 9.09 ಕೋಟಿ ( ಕರ್ನಾಟಕ)

4ನೇ ದಿನ : Rs 10.98 ಕೋಟಿ (ಕರ್ನಾಟಕ)

5ನೇ ದಿನ : Rs 5 ಕೋಟಿ (ಕರ್ನಾಟಕ)

ಒಟ್ಟು ಕಲೆಕ್ಷನ್: Rs 54.26 ಕೋಟಿ (ಕರ್ನಾಟಕ)

5ನೇ ದಿನದ ಲೆಕ್ಕಾಚಾರ ಏನಾಯ್ತು ?

5ನೇ ದಿನದ ಲೆಕ್ಕಾಚಾರ ಏನಾಯ್ತು ?

'ಜೇಮ್ಸ್' ರಿಲೀಸ್ ಆಗಿ ನಾಲ್ಕನೇ ದಿನದವರೆಗೂ ಕಲೆಕ್ಷನ್‌ನಲ್ಲಿ ತುಂಬ ಉತ್ತಮವಾಗಿತ್ತು. ಕಲೆಕ್ಷನ್ ವಿಚಾರದಲ್ಲಿ 'ಜೇಮ್ಸ್' ಮ್ಯಾಜಿಕ್ ಮಾಡಿತ್ತು. ವಾರಾಂತ್ಯ ಕಳೆದ ನಂತರವೂ ತನ್ನ ಚಾರ್ಮ್ ಕಳೆದುಕೊಳ್ಳದ ಜೇಮ್ಸ್ ಈಗಲೂ ವೀಕ್ಷಕರಿಂದ ಉತ್ತಮ ಪ್ರಶಂಸೆ ಜೊತೆಗೆ ಥಿಯೇಟರ್‌ ಕೂಡ ಹೌಸ್ ಫುಲ್ ಆಗುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾಗಿರೋದು 'ಜೇಮ್ಸ್' 5ನೇ ಸಿನಿಮಾದ ಕಲೆಕ್ಷನ್. ಎಸ್.. ಜೇಮ್ಸ್ ಚಿತ್ರದ ಗಳಿಕೆ ಐದನೇ ದಿನಕ್ಕೆ ಕೊಂಚ ಕಮ್ಮಿ ಆಗಿದೆ. ಸೋಮವಾರ (ಮಾರ್ಚ್21) ಕೇವಲ 5 ಕೋಟಿ ಕಲೆಕ್ಷನ್ ಮಾಡಿದೆ. ಈ ಲೆಕ್ಕಾಚಾರ ನೋಡುಗರ ತಲೆಕೆಡಿಸುವಂತೆ ಮಾಡಿದೆ. ವಾರದ ಆರಂಭದಲ್ಲಿ ಇದು ಉತ್ತಮ ಕಲೆಕ್ಷನ್ ಎನ್ನಬಹುದು. ಈ ಮೂಲಕ ಕರ್ನಾಟಕದಲ್ಲಿ 'ಜೇಮ್ಸ್' ಚಿತ್ರದ ಒಟ್ಟು ಕಲೆಕ್ಷನ್ 54.26 ಕೋಟಿ.

ಕೇಕ್ ಕತ್ತರಿಸಿ ಸಂಭ್ರಮಿಸಿದ ಫ್ಯಾನ್ಸ್

ಕೇಕ್ ಕತ್ತರಿಸಿ ಸಂಭ್ರಮಿಸಿದ ಫ್ಯಾನ್ಸ್

ಇದು ಕೇವಲ ಥಿಯೇಟರ್ ಲೆಕ್ಕಾಚಾರವಷ್ಟೆ. ಸ್ಯಾಟಲೈಟ್ ರೈಟ್ಸ್, ಒಟಿಟಿ ರೈಟ್ಸ್‌ಗಳು ಸೇರಿದರೆ ಕಲೆಕ್ಷನ್ ಲೆಕ್ಕಾಚಾರ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ಜೇಮ್ಸ್ ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್ 100 ಕೋಟಿ ದಾಟಿದೆ. ಈ ಬಗ್ಗೆ ಸ್ವತಃ ಚಿತ್ರ ನಿರ್ಮಾಪಕ ಕಿಶೋರ್ ಪಾತಿಕೊಂಡ ಮಾಹಿತಿ ನೀಡಿದ್ದಾರೆ. ಸಾಕಷ್ಟು ಕಡೆಗಳಲ್ಲಿ 'ಜೇಮ್ಸ್' ಸಿನಿಮಾ 100 ಕೋಟಿ ಕ್ಲಬ್ ಸೇರಿದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಹೀಗೆ ಜೇಮ್ಸ್ ಸಿನಿಮಾ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

More from Filmibeat

English summary
Puneeth Rajkumar James film 5th day collection is down here is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X