ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಪಕ್ಕಾ!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ನೆನಪು ಮಾತ್ರ ಕನ್ನಡ ಚಿತ್ರರಂಗದ ಪುನೀತ್ ರಾಜಕುಮಾರನ ಕಳೆದು ಕೊಂಡು ಶೋಕಸಾಗರದಲ್ಲಿ ಮುಳುಗಿದೆ.
ಕರುನಾಡಿನ ಪ್ರತಿಯೊಂದು ಮನೆಯಲ್ಲೂ ಕೂಡ ಸೂತಕದ ಛಾಯೆ ಸೃಷ್ಟಿಯಾಗಿದೆ. ಸದಾ ನಗುಮುಖದಿಂದಲೇ ಮಾತನಾಡುತ್ತಿದ್ದ ಅಪ್ಪು ಅವರ ನಗು ಮುಖ ಇನ್ನು ನೆನಪು ಮಾತ್ರ. ಅಪ್ಪು ಅವರ ನಗು ಮುಖವನ್ನು ಮರೆಯುವುದು ಯಾರಿಂದಲೂ ಸಾಧ್ಯವಿಲ್ಲ. ಸದ್ಯ ಅಂತಿಮ ದರ್ಶನ ಪಡೆದು ಕೊಳ್ಳಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಕಂಠೀರವ ಸ್ಟೇಡಿಯಂನತ್ತ ಸಾಗುತ್ತಿದ್ದಾರೆ. ಸಿನಿಮಾ ತಾರೆಯರೂ ಆಗಮಿಸಿ ಕೊನೆಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.
ಚಿತ್ರರಂಗದಲ್ಲಿ ಅಪ್ಪು ಬಹು ಬೇಡಿಕೆಯ ನಟನಾಗಿದ್ದರು. ಅವರು ಮಾಡಿದ ಪ್ರತಿ ಸಿನಿಮಾ ಕೂಡ ಒಂದೊಂದು ವಿಶೇಷತೆಯಿಂದ ಹಿಟ್ ಲಿಸ್ಟ್‌ಗೆ ಸೇರುತ್ತಾ ಇತ್ತು. ಬಾಕ್ಸಾಫೀಸ್‌ನಲ್ಲಿ ಸೋಲದ ಅಪ್ಪು ವಿಧಿಯ ಮುಂದೆ ಸೋತು ಸುಮ್ಮನೆ ಮಲಗಿದ್ದಾರೆ.

ಅಪ್ಪು ಕಾಲ್‌ಶೀಟ್ ಪಡೆಯಲು ನಿರ್ಮಾಪಕರುಗಳು ಕಾಯುತ್ತಿದ್ದರು. ಆದರೆ ಅಪ್ಪು ಅಗಲಿಕೆಗೂ ಮುನ್ನ ಹಲವಾರು ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಕೊನೆಯದಾಗಿ ಅಪ್ಪು ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಜೇಮ್ಸ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಜೇಮ್ಸ್ ತಯಾರಾಗುತ್ತಿತ್ತು. ಚಿತ್ರ ಪೂರ್ಣಗೊಳ್ಳುವ ಮುನ್ನವೇ ಪುನೀತ್ ರಾಜಕುಮಾರ್ ಇಹ ಲೋಕವನ್ನು ತ್ಯಜಿಸಿದ್ದಾರೆ.
ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಇದೆ. ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಆಗಿರೋ ಫೊಟೋಗಳು ಕೂಡ ಅದನ್ನೇ ಹೇಳುತ್ತಿವೆ.
ಈಗಾಗಲೇ ಚಿತ್ರದ 75 ಪರ್ಸೆಂಟ್ ಚಿತ್ರೀಕರಣ ಮುಗಿದಿದೆ. ಇನ್ನು 25 ಪರ್ಸೆಂಟು ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸದ್ಯಕ್ಕೆ ಶೆಡ್ಯೂಲ್ ಬ್ರೇಕ್ ಆಗಿರುವ ಕಾರಣಕ್ಕೆ ಪುನೀತ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರಲಿಲ್ಲ. ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿತ್ತು. ಆದ್ರೆ ಸಿನಿಮಾವನ್ನು ಪೂರ್ಣ ಮಾಡದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಈ ಚಿತ್ರದ ಡಬ್ಬಿಂಗ್ ಕೂಡ ಹಾಗೆಯೇ ಉಳಿದು ಬಿಟ್ಟಿದೆ.

ಆದರೆ ಚಿತ್ರತಂಡ ಜೇಮ್ಸ್ ಸಿನಿಮಾವನ್ನು ಹೊರ ತರುವ ಭರವಸೆಯನ್ನು ನೀಡಿದೆ. ಇದು ಪುನೀತ್ ರಾಜಕುಮಾರ್ ಅಭಿನಯದ ಕಟ್ಟಕಡೆಯ ಸಿನಿಮಾ. ಹಾಗಾಗಿ ಈ ಸಿನಿಮಾವನ್ನು ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್ ಇಲ್ಲ ಅಂದರೆ ನಿರಾಸೆ ಆಗೋದು ಕಂಡಿತ. ಆದ್ರೆ ಆ ನಿರಾಸೆಯನ್ನು ಮಾಡಲು ಚಿತ್ರ ತಂಡ ಸಿದ್ಧವಿಲ್ಲ. ಈ ಚಿತ್ರವನ್ನು ತೆರೆಗೆ ತರುವುದು ಎಷ್ಟು ಮುಖ್ಯ ಎನ್ನುವುದು ಚಿತ್ರತಂಡದ ಅರಿವಿದೆ. ಹಾಗಾಗಿ ಚಿತ್ರತಂಡ ಈ ಸಿನಿಮಾವನ್ನು ರಿಲೀಸ್ ಮಾಡುವಂತಹ ಭರವಸೆಯನ್ನು ನೀಡಿದೆ.


Click it and Unblock the Notifications











