ಅಪ್ಪು ಬಾಯಲ್ಲಿ ಬಂತು 'ಜೇಮ್ಸ್' ಚಿತ್ರದ ಮೊದಲ ಡೈಲಾಗ್
'ಜೇಮ್ಸ್' ಸಿನಿಮಾದ ಮುಹೂರ್ತ ಕಾರ್ಯಕ್ರಮ ನಿನ್ನೆ (ಜನವರಿ 20) ಅದ್ದೂರಿಯಾಗಿ ನಡೆದಿದೆ. ಶ್ರೀ ಬಾಲಾಂಜನೇಯ ದೇವಸ್ಥಾನದಲ್ಲಿ ಸಿನಿಮಾ ಶುಭಾರಂಭವಾಗಿದೆ.
ಸಿನಿಮಾದ ಮೊದಲ ಶಾಟ್ ನಲ್ಲಿ ಪುನೀತ್ ಚಿತ್ರದ ಡೈಲಾಗ್ ಹೇಳಿದ್ದಾರೆ. ''ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ... ನಮಗೆ ನಾವೇ ಹೆಸರು ಮಾಡ್ಕೋಂಡ್ರೆ ಬೇಡಿಕೆ...'' ಎಂದು ಅಪ್ಪು ಪವರ್ ಫುಲ್ ಡೈಲಾಗ್ ಹೊಡೆದಿದ್ದಾರೆ.
ಈ ಡೈಲಾಗ್ 'ಜೇಮ್ಸ್' ಸಿನಿಮಾದ ಪೋಸ್ಟರ್ ನಲ್ಲಿ ಬಹಳ ದಿನಗಳಿಂದ ಇತ್ತು. ಆದರೆ, ಇದೀಗ ಪುನೀತ್ ಬಾಯಲ್ಲೇ ಅಭಿಮಾನಿಗಳು ಈ ಡೈಲಾಗ್ ಕೇಳಿದ್ದಾರೆ. ಸಿನಿಮಾದ ಮೊದಲ ಡೈಲಾಗ್ ಇದಾಗಿದ್ದು, ಜೇಮ್ಸ್ ಪಾತ್ರದ ಗತ್ತನ್ನು ಹೇಳಿದೆ.

ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ. ಪುನೀತ್ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಪುನೀತ್ ಈ ಹಿಂದೆ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಇಲ್ಲಿ ನಟಿಸುತ್ತಿದ್ದಾರಂತೆ.
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಯೋಜನೆ ಇದೆಯಂತೆ. ಕರ್ನಾಟಕ ಹಾಗೂ ವಿದೇಶದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.
ಕಿಶೋರ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಜೇಮ್ಸ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ.


Click it and Unblock the Notifications











