ಇದೇ ಭಾನುವಾರ ಲಾಂಚ್ ಆಗ್ತಿದೆ 'ಜೇಮ್ಸ್' ಸಿನಿಮಾ
ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ 'ಜೇಮ್ಸ್' ಇದೇ ಭಾನುವಾರ ಲಾಂಚ್ ಆಗುತ್ತಿದೆ. ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಸಿನಿಮಾ ಶುಭರಂಭವಾಗುತ್ತಿದೆ.
ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯ ದೇವಸಂದ್ರ ಲೇ ಔಟ್, ರಾಮಯ್ಯ ಆಸ್ಪತ್ರೆ ಎದುರು ಬೆಳಗ್ಗೆ 9 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಿದೆ.
ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ 4ನೇ ಸಿನಿಮಾ. ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಸಿನಿಮಾಗೆ ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿಶೋರ್ ಪ್ರೊಡಕ್ಷನ್ಸ್ ಸಿನಿಮಾದ ನಿರ್ಮಾಣ ಮಾಡುತ್ತಿದೆ.

ಸದ್ಯ 'ಯುವರತ್ನ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಬ್ಯುಸಿ ಇದ್ದಾರೆ. ಈ ಸಿನಿಮಾ ಇದೇ ವರ್ಷ ಬಿಡುಗಡೆ ಆಗುತ್ತಿದೆ. ಈ ಚಿತ್ರದ ನಂತರ 'ಜೇಮ್ಸ್' ಸಿನಿಮಾ ಬರುತ್ತದೆ. 'ಜೇಮ್ಸ್' ಟೈಟಲ್ ಈಗಾಗಲೇ ದೊಡ್ಡ ಕುತೂಹಲ ಮೂಡಿಸಿದೆ.
ಈ ಹಿಂದೆಯೇ ಸಿನಿಮಾದ ಸಣ್ಣ ಟೀಸರ್ ವೊಂದು ಬಿಡುಗಡೆಯಾಗದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. 'ಜೇಮ್ಸ್' ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.


Click it and Unblock the Notifications











