twitter
    For Quick Alerts
    ALLOW NOTIFICATIONS  
    For Daily Alerts

    James IMDB Rating: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹಿಂದಿಕ್ಕಿದ ಕನ್ನಡದ 'ಜೇಮ್ಸ್'

    |

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಭಾರತದಾದ್ಯಂತ ಬಹಳ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. 200 ಕೋಟಿ ಕಲೆಕ್ಷನ್‌ ಸಮೀಪಕ್ಕೆ ಬಂದು ನಿಂತಿದೆ.

    Recommended Video

    James ' ದಿ ಕಾಶ್ಮೀರ್ ಫೈಲ್ಸ್' ರೆಕಾರ್ಡ್ ಬ್ರೇಕ್ ಮಾಡಿದ 'ಜೇಮ್ಸ್' ಸಿನಿಮಾ James Movie New Record

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲಿಯೇ ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ತೆರೆ ಕಂಡಿತು. 'ಜೇಮ್ಸ್' ತೆರೆಗಪ್ಪಳಿಸಿದ ಬಳಿಕ ಬೆಂಗಳೂರಿನಲ್ಲಿ 'ದಿ ಕಾಶ್ಮೀರ್ ಫೈಲ್ಸ್'ನ ಅಬ್ಬರ ತುಸು ಮಟ್ಟಿಗೆ ಕಡಿಮೆಯಾಯಿತು.

    James Day 3 Box office:'ಜೇಮ್ಸ್' 3ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ವಿವರJames Day 3 Box office:'ಜೇಮ್ಸ್' 3ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ವಿವರ

    ಆದರೆ 'ದಿ ಕಾಶ್ಮೀರ್ ಫೈಲ್ಸ್' ಹಾಗೂ 'ಜೇಮ್ಸ್' ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾದವು. 'ರಾಷ್ಟ್ರೀಯತೆ ಮುಖ್ಯ ಹಾಗಾಗಿ 'ದಿ ಕಾಶ್ಮೀರ್ ಫೈಲ್ಸ್' ನೋಡುತ್ತೇವೆಂದು ಒಂದು ಬಣ ಪೋಸ್ಟ್‌ಗಳನ್ನು ಹಾಕಿದರೆ ದೇವರಂತಹಾ ಮನುಷ್ಯ ಪುನೀತ್‌ಗಾಗಿ ಕನ್ನಡ ಸಿನಿಮಾ 'ಜೇಮ್ಸ್' ನೋಡುತ್ತೇವೆಂದು ಮತ್ತೊಂದು ಬಣ ಪ್ರತಿಕ್ರಿಯೆ ನೀಡಿತು. ಇಬ್ಬರ ನಡುವಣ ಸಾಮಾಜಿಕ ಜಾಲತಾಣ ಚರ್ಚೆ ಜಾರಿಯಲ್ಲಿರುವಾಗಲೇ ಸದ್ದಿಲ್ಲದೆ 'ಜೇಮ್ಸ್' ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಹಿಂದಿಕ್ಕಿದೆ ಅದೂ ಐಎಂಡಿಬಿ ರೇಟಿಂಗ್ಸ್ ವಿಚಾರದಲ್ಲಿ.

    James Movie Beaten The Kashmir Files Movie In IMDB Rating

    'ಜೇಮ್ಸ್' ಸಿನಿಮಾ ಐಎಂಡಿಬಿ ರೇಟಿಂಗ್ಸ್‌ನಲ್ಲಿ 10 ಕ್ಕೆ 9.9 ಅಂಕ ಪಡೆದುಕೊಂಡಿದೆ. ಅದೇ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ 8.3 ರೇಟಿಂಗ್ಸ್ ನೀಡಲಾಗಿದೆ. ಹೆಚ್ಚು ರೇಟಿಂಗ್ಸ್ ಇರುವ ಸಿನಿಮಾಗಳ ಕಡೆಗೆ ಪ್ರೇಕ್ಷಕರು ಹೆಚ್ಚು ಆಸಕ್ತಿವಹಿಸುತ್ತಾರೆ. ಅಲ್ಲದೆ ಐಎಂಡಿಬಿಯಲ್ಲಿ ಸಿನಿಮಾ ವೀಕ್ಷಕರು ರೇಟಿಂಗ್ಸ್ ನೀಡಬಹುದಾದ ಕಾರಣ ಅಪ್ಪು ಅಭಿಮಾನಿಗಳು ಸತತವಾಗಿ ಹೆಚ್ಚಿನ ಸಂಖ್ಯೆಯ ರೇಟಿಂಗ್ಸ್ ನೀಡಿರುವ ಕಾರಣ ಸಿನಿಮಾದ ಐಎಂಡಿಬಿ ರೇಟಿಂಗ್ ಹೆಚ್ಚಾಗಿದೆ.

    Jr.NTR about Puneeth: ಪುನೀತ್ ಸರ್ ಇಲ್ಲ ಅಂತ ನಾನು ಅಳುವುದಿಲ್ಲ ಎಂದ ಜೂ.ಎನ್‌ಟಿಆರ್ Jr.NTR about Puneeth: ಪುನೀತ್ ಸರ್ ಇಲ್ಲ ಅಂತ ನಾನು ಅಳುವುದಿಲ್ಲ ಎಂದ ಜೂ.ಎನ್‌ಟಿಆರ್

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆ ಆದ ಕೆಲವು ದಿನಗಳಲ್ಲಿ ಅದರ ರೇಟಿಂಗ್ ಸಹ ಉತ್ತಮವಾಗಿತ್ತು, ಆ ನಂತರ ಸತತವಾಗಿ ಸಿನಿಮಾದ ರೇಟಿಂಗ್ ಕುಸಿಯುತ್ತಾ ಸಾಗಿತು. ಈ ಬಗ್ಗೆ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದ ಐಎಂಡಿಬಿ ರೇಟಿಂಗ್ ಹೆಚ್ಚು ಮಾಡಲು ಕೆಲವು ಸಂಘಗಳು ಸಾಮಾಜಿಕ ಜಾಲತಾಣದ ಮೂಲಕ ಕರೆ ಸಹ ನೀಡಿದವು ಆದರೂ ಸಿನಿಮಾದ ಪ್ರಸ್ತುತ ರೇಟಿಂಗ್ 8.3 ನಲ್ಲಿದೆ.

    ಇನ್ನು 'ಜೇಮ್ಸ್' ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿದೆ. ಮೊದಲ ದಿನವೇ ಅಂದಾಜು 35 ಕೋಟಿ ರುಪಾಯಿ ಗಳಿಸಿದ್ದ ಸಿನಿಮಾ, ಎರಡನೇ ದಿನ 18 ಕೋಟಿ, ಬಳಿಕ ಮೂರನೇ ದಿನ 9 ಕೋಟಿ ಹಣವನ್ನು ಸಿನಿಮಾ ಗಳಿಸಿದೆ. ಆ ಮೂಲಕ ಸಿನಿಮಾವು ನಿಧಾನಕ್ಕೆ 100 ಕೋಟಿ ಕ್ಲಬ್‌ನತ್ತ ಸಾಗುತ್ತಿದೆ. ಡಿಜಿಟಲ್ ಹಕ್ಕು, ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳು ಹಾಗೂ ಚಿತ್ರಮಂದಿರ ಕಲೆಕ್ಷನ್ ಅನ್ನು ಒಟ್ಟಿಗೆ ಸೇರಿಸಿದರೆ ಸಿನಿಮಾದ ಕಲೆಕ್ಷನ್ ಈಗಾಗಲೇ 100 ಕೋಟಿ ದಾಟಿದೆ.

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಸಹ ಈ ವರ್ಷದ ಈವರೆಗಿನ ದೊಡ್ಡ ಹಿಟ್ ಎನಿಸಿಕೊಂಡಿದ್ದು ಸಿನಿಮಾದ ಚಿತ್ರಮಂದಿರದ ಕಲೆಕ್ಷನ್ ಈಗಾಗಲೇ 100 ಕೋಟಿ ದಾಟಿ 200 ಕೋಟಿ ಕಲೆಕ್ಷನ್ ಕಡೆಗೆ ದಾಪುಗಾಲಿಟ್ಟಿದೆ. ಸಿನಿಮಾಕ್ಕೆ ಬಿಜೆಪಿ ಸರ್ಕಾರಗಳಿರುವ ರಾಜ್ಯದಿಂದ ತೆರಿಗೆ ವಿನಾಯಿತಿ ಸಹ ಸಿಕ್ಕಿರುವುದು ವರವಾಗಿ ಪರಿಣಮಿಸಿದೆ. ಹಾಗೂ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಇತರೆ ಬಲಪಂಥೀಯ ಸಂಘಟನೆಗಳ ಬೆಂಬಲವೂ ಸಿನಿಮಾಕ್ಕೆ ದೊರಕಿರುವ ಕಾರಣಕ್ಕೆ ಸಿನಿಮಾ ದೊಡ್ಡ ಹಿಟ್ ಆಗಿದೆ. ಎಲ್ಲದಕ್ಕಿಂತಲೂ ಪ್ರಮುಖವಾಗಿ ಸ್ವತಃ ಪ್ರಧಾನಿ ಮೋದಿಯೇ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬೆಂಬಲಕ್ಕೆ ನಿಂತಿರುವುದು ಅದರ ಯಶಸ್ಸಿನ ಪ್ರಮುಖ ಕಾರಣವಾಗಿದೆ.

    English summary
    Puneeth Rajkumar starer James movie beaten Hindi movie The Kashmir Files movie in IMDb rating.
    Monday, March 21, 2022, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X