ಜೇಮ್ಸ್ ರಿಲೀಸ್‌ಗೂ ಮುನ್ನ ಮತ್ತೊಂದು ಸರ್ಪ್ರೈಸ್!

ಜೇಮ್ಸ್... ಜೇಮ್ಸ್... ಜೇಮ್ಸ್ ಸದ್ಯ‌ ಎಲ್ಲೆಲ್ಲೂ ಜೇಮ್ಸ್ ಚಿತ್ರದ್ದೇ ಸುದ್ದಿ. ಜೇಮ್ಸ್ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾ ನೋಡುವ ನಿರೀಕ್ಷೆ, ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಜೇಮ್ಸ್ ಮೂಲಕ ಪುನೀತ್ ಅವರನ್ನು ಕಣ್ತುಂಬಿಕೊಳ್ಳಲು ಕರುನಾಡು ಕಾಯುತ್ತಿದೆ‌. ಈ ಚಿತ್ರದಲ್ಲಿ ಅಪ್ಪು ಹೇಗೆ ಕಾಣಿಸಿಕೊಳ್ಳಲಿದ್ದಾರೆ, ಎನ್ನುವುದು ಈಗಾಗಲೇ ರಿವೀಲ್ ಆಗಿರುವ ಫೋಟೋಗಳ ಮೂಲಕ ಗೊತ್ತಾಗಿದೆ. ಹಾಗಾಗಿ ಜೊತೆಗೆ ಪ್ರಮೋಷನ್ ಹಾಡಿನಲ್ಲಿ ಅಪ್ಪು ಡ್ಯಾನ್ಸ್ ಪರಿಯನ್ನು ಸಣ್ಣದಾಗಿ ಪರಿಚಯಿಸಲಾಗಿದೆ.

ಚಿತ್ರ ರಿಲೀಸ್‌ಗೂ‌ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಗಳನ್ನು ಕೊಡುತ್ತಿದೆ. ಇನ್ನು ಚಿತ್ರದ ಇಂಟ್ರೊಡಕ್ಷನ್ ಹಾಡನ್ನು ರಿಲೀಸ್ ಮಾಡಲು ಮುಂದಾಗಿದೆ. ಇದೇ ಮಾರ್ಚ್ 11ಕ್ಕೆ 'ಜೇಮ್ಸ್' ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗುತ್ತಿದೆ‌. ಅಪ್ಪು ಡಾನ್ಸ್ ನೋಡಲು ಅಭಿಮಾನಿ ಬಳಗ ಕಾತರವಾಗಿದೆ. ಇಂಟ್ರೊಡಕ್ಷನ್ ಹಾಡು ಎಂದರೆ ಅಲ್ಲಿ ಅಪ್ಪು ಅವರ ಅದ್ದೂರಿ ಡಾನ್ಸ್ ಇರುತ್ತೆ. ಜೊತೆಗೆ ಭಿನ್ನ, ವಿಭಿನ್ನ ಸ್ಟೆಪ್ಸ್ ಇರುತ್ತೆ. ಹಾಗಾಗಿ ಈ ಹೀರೋ ಇಂಟ್ರೊಡಕ್ಷನ್ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಚಂದನ್ ಶೆಟ್ಟಿ ಇತ್ತೀಚೆಗೆ ಇದೇ ಹಾಡಿನ ಎರಡು ಸಾಲುಗಳನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೇಳೋಕೆ ಹಾಡಿನ ಲೈನ್ಸ್ ಅಷ್ಟೇ ಪವರ್ ಫುಲ್ ಎನಿಸುತ್ತೆ. ಇದೇ ಮಾರ್ಚ್ 17 ಜೇಮ್ಸ್ ತೆರೆಗೆ ಬರುತ್ತಿದೆ. ಅಂದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಕೂಡ. ಜೇಮ್ಸ್ ಜಾತ್ರೆ ಜೊತೆಗೆ ಅಪ್ಪು ಹುಟ್ಟುಹಬ್ಬವನ್ನು ಅದ್ದೂರಿಯಾಗಿ, ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

James Movie Intro Song Will Out On March 11th

ಜೇಮ್ಸ್' ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಹೊರಪಡಿಸಿ, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಹೊಸಪೇಟೆ, ಬಳ್ಳಾರಿಯಿಂದ ಹಿಡಿದು ಚಿತ್ರದುರ್ಗ, ಉತ್ತರ ಕರ್ನಾಟಕ, ಶಿವಮೊಗ್ಗ, ಸೇರಿದಂತೆ ತಾಲೂಕು ಸೆಂಟರ್‌ಗಳಲ್ಲೂ 'ಜೇಮ್ಸ್' ರಿಲೀಸ್ ಆಗಲಿದೆ. ರಿಲೀಸ್‌ಗೆ ಇನ್ನು 11 ದಿನಗಳು ಇದ್ದು, ಥಿಯೇಟರ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಯೂರೋಪ್‌ನಲ್ಲಿ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ರಿಲೀಸ್ ಆಗಿದೆ. ಕರ್ನಾಟಕದಲ್ಲೂ ಮೊದಲ ಹಂತದ ಥಿಯೇಟರ್‌ ಲಿಸ್ಟ್ ಕೂಡ ರಿಲೀಸ್ ಆಗಿದೆ. ಸದ್ಯ ಕರ್ನಾಟಕದಲ್ಲೂ ಸುಮಾರು 400ಕ್ಕೂಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಅಪ್ಪು ಅಬ್ಬರಿಸಲಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು 'ಜೇಮ್ಸ್' ಸಿನಿಮಾ ಬಿಡುಗಡೆ ಹಾಗೂ ಅಪ್ಪು ಹುಟ್ಟುಹಬ್ಬದ ಅಂಗವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ, ಪ್ರಸನ್ನ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ವೀರೇಶ್ ಹಾಗೂ ಪ್ರಸನ್ನ ಚಿತ್ರಮಂದಿರಕ್ಕೆ ಒಂದು ಹೆಲಿಕಾಪ್ಟರ್ ಹಾಗೂ ಕಂಠೀರವ ಸ್ಟುಡಿಯೋ ಮತ್ತೊಂದು ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಯನ್ನು ಸುರಿಸಲಿದ್ದಾರೆ. ಈ ಎರಡು ಚಾಪರ್‌ಗಳಿಗೆ ಅಭಿಮಾನಿಗಳು 7 ರಿಂದ 8 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರಂತೆ.

More from Filmibeat

English summary
Puneeth Rajkumar StarrerJames Movie Intro Song Will Out On March 11th,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X