'ಜೇಮ್ಸ್' ಚಿತ್ರದ ಮಧ್ಯರಾತ್ರಿ ಶೋಗಳು ರದ್ದು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು 'ಜೇಮ್ಸ್' ಚಿತ್ರವನ್ನು ನೋಡಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ ಇದ್ದಾರೆ. ಬೆಳ್ಳಿತೆರೆ ಮೇಲೆ ಪುನೀತ್ ರಾಜ್‌ಕುಮಾರ್‌ರನ್ನು ಯಾವಾಗ ಕಣ್ತುಂಬಿ ಕೊಳ್ಳುತ್ತೇವೋ ಎಂದು ಕಾಯುತ್ತಿದ್ದರು. 'ಜೇಮ್ಸ್' ರಿಲೀಸ್‌ಗೆ ಕೆಲವೇ ಗಂಟೆಗಳು ಬಾಕಿ ಇದೆ. ಅಭಿಮಾನಿಗಳು ಮಧ್ಯರಾತ್ರಿ ಶೋಗಳಿಗಾಗಿ ಕಾಯುತ್ತಾ ಇದ್ದರು.

'ಜೇಮ್ಸ್' ಸಿನಿಮಾವನ್ನು ಮಧ್ಯರಾತ್ರಿ ನೋಡಲು ಅಭಿಮಾನಿಗಳಿಗೆ ಸಾಧ್ಯ ಆಗುತ್ತಿಲ್ಲ. ಇದಕ್ಕೆ ಕಾರಣ ರಾಜ್ಯದಲ್ಲಿ ಜಾರಿ ಆಗಿರುವ 144 ಸೆಕ್ಷೆನ್. 144 ಸೆಕ್ಷೆನ್ ಜಾರಿ ಇರುವ ಕಾರಣಕ್ಕೆ 'ಜೇಮ್ಸ್' ಚಿತ್ರದ ಶೋಗಳು ರದ್ದಾಗಿವೆ. ಇದರಿಂದ ಎಲ್ಲೆಲ್ಲಿ ಮಧ್ಯ ರಾತ್ರಿಯ ಶೋಗಳಿತ್ತೋ ಅಲ್ಲೆಲ್ಲ ವಿಶೇಷ ಶೋಗಳಿಗೆ ಬ್ರೇಕ್ ಬಿದ್ದಿದೆ.

ಇನ್ನು ಮಧ್ಯರಾತ್ರಿ 1:30ಕ್ಕೆ ಆರಂಭವಾಗ ಬೇಕಿದ್ದ ಶೋ ಗಳು ಕ್ಯಾನ್ಸಲ್ ಆಗಿವೆ. ಆದ್ದರಿಂದ ಬೆಳಗ್ಗೆ 5 ಗಂಟೆಯ ನಂತರದ ಶೋಗಳು ಶುರುವಾಗಲಿವೆ. ಇನ್ನು ಹಿಜಾಬ್ ವಿಚಾರವಾಗಿ ಕೆಲವು ಮುಸ್ಲಿಂ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿವೆ. ಜೊತೆಗೆ ಪ್ರತಿಭಟನೆಗೆ ಮುಂದಾಗಿವೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಸರ್ಕಾರ ಬೆಂಗಳೂರು ಹಾಗೂ ಕೆಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದೆ. ಈ ಕಾರಣಕ್ಕೆ ಮಧ್ಯರಾತ್ರಿ ಶೋಗಳನ್ನು ಕ್ಯಾನ್ಸಲ್​ ಮಾಡಲಾಗಿದೆ. ಈಗಾಗಲೇ ತಡರಾತ್ರಿ ಶೋಗಳು ಬುಕ್​ ಆಗಿದ್ದು, ಅಭಿಮಾನಿಗಳು 'ಜೇಮ್ಸ್'​ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.

James Movie Mid Night Shows Got Cancel In Karnataka

ನಾಳೆ (ಮಾರ್ಚ್ 17) ಜೇಮ್ಸ್ ರಿಲೀಸ್ ಆಗುವ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ, ಹೌಸ್ ಪುಲ್ ಬೋರ್ಡ್ ಬೀಳೋದು ಪಕ್ಕಾ. ಪುನೀತ್ ರಾಜ್‌ಕುಮಾರ್ 'ಜೇಮ್ಸ್' ರೂಪದಲ್ಲಿ ರಾರಾಜಿಸುತ್ತಾರೆ. ಆದರೆ, ಇದೀಗ ಅಪ್ಪು ಅಭಿಮಾನಿಗಳಿಗೆ ಈ ಒಂದು ವಿಚಾರ ಬೇಸರ ಮೂಡಿಸಿದೆ. ಯಾಕೆಂದರೆ, ಕೇವಲ ರಾತ್ರಿ ಶೋ ರದ್ದಾಗಿರುವುದು ಮಾತ್ರ ಅಲ್ಲ. ಅಭಿಮಾನಿಗಳು ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮಗಳು ಕೂಡ ರದ್ದಾಗಿವೆ.

ಹಾಗಾಗಿ ಅಭಿಮಾನಿಗಳು ಹಾಕಿಕೊಂಡಿದ್ದ ಎಲ್ಲಾ ಯೋಜನೆಗಳು ಈಗ ಕೈ ಬಿಡುವಂತೆ ಆಗಿದೆ. ಇದರಿಂದ ಅಪ್ಪು ಫ್ಯಾನ್ಸ್‌ಗೆ ಅತಿಯಾದ ಬೇಸರ ಆಗಿದೆ. ಆದರೂ ಮುಂಜಾನೆ ಆರು ಗಂಟೆಗೆ ತೆರೆಮೇಲೆ ಅಪ್ಪು ಬರಮಾಡಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ.

More from Filmibeat

English summary
James Movie Mid Night Shows Got Cancel In Karnataka, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X