ಜೇಮ್ಸ್ ನಿರ್ಮಾಪಕ ಕಿಶೋರ್ ಪಾತಿಕೊಂಡ ಆರೋಗ್ಯದಲ್ಲಿ ಚೇತರಿಕೆ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕೋಮಾದಲ್ಲಿದ್ದಾರೆ. ನಿನ್ನೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಇಂದು ಅವರು ತುಸು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಕಿಶೋರ್ ಪತ್ತಿಕೊಂಡ ಅವರನ್ನು ದಾಖಲಿಸಲಾಗಿತ್ತು. ಈಗ ಗುಡ್ ನ್ಯೂಸ್ ಸಿಕ್ಕಿದೆ. ಕಿಶೋರ್ ಪತ್ತಿಕೊಂಡ ಅವರಿಗೆ ಮೆದುಳಿನ ಆಪರೇಷನ್ ಆಗಿದ್ದು, ಕಿಶೋರ್ ಔಟ್ ಆಫ್ ಡೇಂಜರ್ ಎಂದು ಗೊತ್ತಾಗಿದೆ.

ಸದ್ಯ ಕಿಶೋರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಗಂಭೀರ ಸಮಸ್ಯೆಯಿಂದ ಪಾರಾಗಿದ್ದಾರೆ. ಇನ್ನು ಹೆಚ್ಚಿನ ಆತಂಕ ಪಡಬೇಕಾಗಿಲ್ಲ. ಶಸ್ತ್ರಚಿಕಿತ್ಸೆಯ ಬಳಿಕ ಕಿಶೋರ್ ಪತ್ತಿಕೊಂಡ ಚೇತರಿಸಿಕೊಳ್ಳುತ್ತಿದ್ದಾರೆ.

James Movie Producer Kishore Pathikonda Is Out Of Danger

ಕಿಶೋರ್ ಅವರು ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಪುನೀತ್ ಎಂದರೆ ಅಪಾರ ಅಭಿಮಾನ ಹೊಂದಿದ್ದರು. ಹೊಸಪೇಟೆಯಲ್ಲಿ ಥಿಯೇಟರ್ ಮಾಲೀಕರಾಗಿದ್ದ ಕಿಶೋರ್ ಅವರಿಗೆ ಅಪ್ಪುಗಾಗಿ ಸಿನಿಮಾ ಮಾಡುವ ಕನಸಿತ್ತು. ಅದನ್ನು‌ 'ಜೇಮ್ಸ್' ಚಿತ್ರದ ಮೂಲಕ ಈಡೇರಿಸಿಕೊಂಡರು.

ಪುನೀತ್ ಅಗಲಿಕೆ ನೋವಿನಲ್ಲಿಯೇ ಸಿನಿಮಾ ಹಿಟ್ ಆಗಿತ್ತು. 100 ಕೋಟಿ ಕ್ಲಬ್ ಸೇರಿತ್ತು. ಅದಕ್ಕೂ ಮೊದಲು ಕಿಶೋರ್ ಪತ್ತಿಕೊಂಡ ಅವರ ಕುಟುಂಬ ಶಿವಣ್ಣನವರ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ನಿರ್ಮಾಣ ಮಾಡಿತ್ತು.

James Movie Producer Kishore Pathikonda Is Out Of Danger

ಇದಾದ ನಂತರ ರಾಮ್ ಕುಮಾರ್ ಪುತ್ರ ಧಿರೇನ್ ಅವರಿಗಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದರು ಕಿಶೋರ್ ಪತ್ತಿಕೊಂಡ. ಇನ್ನೂ ಹಲವು ಸಿನಿಮಾಗಳನ್ನು ಮಾಡುವ ಯೋಜನೆಯಲ್ಲಿ ಇದ್ದಾರೆ ಕಿಶೋರ್ ಪಾತಿಕೊಂಡ. ಅವರು ಬೇಗಗುಣ ಮುಖರಾಗಿ ಬರಲಿ ಎಂದು ಅಭಿಮಾನಿಗಳು, ಚಿತ್ರರಂಗ ಪ್ರಾರ್ಥಿಸುತ್ತಿದೆ.

More from Filmibeat

English summary
James Movie Producer Kishore Pathikonda Is Out Of Danger, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X