For Quick Alerts
  ALLOW NOTIFICATIONS  
  For Daily Alerts

  ಹೊಸಪೇಟೆಗೆ ಎಂಟ್ರಿಕೊಟ್ಟ ಜೇಮ್ಸ್: ಅಪ್ಪು ನೋಡಲು ಬಂದ ಅಭಿಮಾನಿಗಳು

  By ಬಳ್ಳಾರಿ ಪ್ರತಿನಿಧಿ
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ಇಂದಿನಿಂದ ಆರಂಭವಾಗುತ್ತಿದೆ. ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಇಂದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  Recommended Video

  ಜೇಮ್ಸ್ ಚಿತ್ರದ ಶೂಟಿಂಗ್ ಗಾಗಿ ಹೊಸಪೇಟೆಗೆ ಪುನೀತ್ ರಾಜಕುಮಾರ್ | Filmibeat Kannada

  ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ ಚಿತ್ರ ಜೇಮ್ಸ್ ಚಿತ್ರೀಕರಣ ನಡೆಯುತ್ತಿದೆ. ಇಂದು ಸಂಜೆ ಹೊತ್ತಿಗೆ ಪುನೀತ್ ರಾಜ್ ಕುಮಾರ್ ಕಮಲಾಪುರದ ಬಳಿಯ ಆರೇಂಜ್ ಕೌಂಟಿಗೆ ಆಗಮಿಸಿದ್ದಾರೆ.

  'ಜೇಮ್ಸ್' ಸಿನಿಮಾ: ಪುನೀತ್ ಚಿತ್ರಕ್ಕೆ ಇಬ್ಬರು ಸ್ಟಾರ್ ಕಲಾವಿದರ ಎಂಟ್ರಿ'ಜೇಮ್ಸ್' ಸಿನಿಮಾ: ಪುನೀತ್ ಚಿತ್ರಕ್ಕೆ ಇಬ್ಬರು ಸ್ಟಾರ್ ಕಲಾವಿದರ ಎಂಟ್ರಿ

  ಮೊದಲು ನಾಲ್ಕು ದಿನ ರೆಸಾರ್ಟ್ ನಲ್ಲಿ ಶೂಟಿಂಗ್ ನಡೆಯಲಿದೆ. ನಂತರ ಗಂಗಾವತಿ ಬಳಿ ಚಿತ್ರೀಕರಣ ಮಾಡಲಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ ಗಂಗಾವತಿಯಲ್ಲಿ ಭವ್ಯ ಸೆಟ್ ಹಾಕಲಾಗಿದೆ. ಅಲ್ಲಿ ತೆಲುಗು ನಟ ಶ್ರೀಕಾಂತ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಜೇಮ್ಸ್ ಚಿತ್ರೀಕರಣ ಹಿನ್ನೆಲೆ ಹತ್ತು ದಿನಗಳವರೆಗೆ ಹೊಸಪೇಟೆಯಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಪುನೀತ್ ರಾಜ್ ಆಗಮಿಸಿರುವ ಸುದ್ದಿ ತಿಳಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಉಡುಗೊರೆ ನೀಡಿ ಸಂತಸ ಪಟ್ಟರು.

  ಚೇತನ್ ಕುಮಾರ್ ನಿರ್ದೇಶನದ ಚಿತ್ರವನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿದ್ದಾರೆ. ಕಿಶೋರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ರಿರುವ ಮೊದಲ ಚಿತ್ರ ಇದಾಗಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

  English summary
  Kannada actor Puneeth Rajkumar starrer James Movie Resumes Shooting from Today at Bellary.
  Thursday, October 15, 2020, 9:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X