For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಜೇಮ್ಸ್' ಸಿನಿಮಾ: ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿನಿಮಾತಂಡ ಎಚ್ಚರಿಕೆ ನೀಡಿದ್ದೇಕೆ?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಜೇಮ್ಸ್ ಚಿತ್ರೀಕರಣ ಹೊಸಪೇಟೆಯಲ್ಲಿ ನಡೆಯುತ್ತಿದೆ. ಸುಮಾರು ಒಂದು ವಾರದಿಂದ ಬಳ್ಳಾರಿಯಲ್ಲಿ ಬೀಡುಬಿಟ್ಟಿರುವ ಸಿನಿಮಾತಂಡ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುತ್ತಿದೆ.

  ಅಂದ್ಹಾಗೆ ಪುನೀತ್ ಹೊಸಪೇಟೆಯಲ್ಲಿರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ಚಿತ್ರೀಕರಣದ ಫೋಟೋಗಳು ಸಹ ಹರಿದಾಡುತ್ತಿವೆ. ಚಿತ್ರೀಕರಣ ಪ್ರಮುಖ ದೃಶ್ಯಗಳು ಲೀಕ್ ಆಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಹಾಗಾಗಿ ಸಿನಿಮಾತಂಡ ಅಭಿಮಾನಿಗಳಲ್ಲಿ ಮತ್ತು ಚಿತ್ರೀಕರಣ ದೃಶ್ಯ ಸೆರೆಹಿಡಿದು ಲೀಕ್ ಮಾಡುತ್ತಿರುವವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ..

  ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್

  ಚಿತ್ರದ ತುಣುಕುಗಳನ್ನು ಸೆರೆಹಿಡಿದು ಲೀಕ್ ಮಾಡುವವರಿಗೆ ಎಚ್ಚರಿಕೆ

  ಚಿತ್ರದ ತುಣುಕುಗಳನ್ನು ಸೆರೆಹಿಡಿದು ಲೀಕ್ ಮಾಡುವವರಿಗೆ ಎಚ್ಚರಿಕೆ

  ಈ ಬಗ್ಗೆ ಜೇಮ್ಸ್ ತಂಡ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆಯ ಪತ್ರ ರವಾನಿಸಿದೆ. 'ಜೇಮ್ಸ್ ಚಿತ್ರದ ಚಿತ್ರೀಕರಣದ ತುಣುಕುಗಳನ್ನು ದಯವಿಟ್ಟು ಯಾರು ಚಿತ್ರೀಕರಿಸಬೇಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಅಂತವರ ವಿರುದ್ಧ ಅಗತ್ಯಬಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.' ಎಂದು ಹೇಳಿದ್ದಾರೆ.

  ಪುನೀತ್ ನೋಡಲು ಧಾವಿಸುತ್ತಿರುವ ಅಭಿಮಾನಿಗಳು

  ಪುನೀತ್ ನೋಡಲು ಧಾವಿಸುತ್ತಿರುವ ಅಭಿಮಾನಿಗಳು

  ಚಿತ್ರತಂಡದ ಮನವಿಯನ್ನು ಮೀರಿ ಸಿನಿಮಾದ ಚಿತ್ರೀಕರಣದ ತುಣುಕುಗಳನ್ನು ಹರಿಬಿಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತೆ. ಚಿತ್ರದ ಸಾಕಷ್ಟು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದ್ಹಾಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ನೋಡಲು ಧಾವಿಸುತ್ತಿದ್ದಾರೆ. ಇದರಿಂದ ಚಿತ್ರೀಕರಣಕ್ಕೆ ಸಮಸ್ಯೆ ಆದ ಪ್ರಸಂಗವೂ ನಡೆದಿದೆ, ಸ್ವತಃ ಪುನೀತ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಸಮಾಧಾನ ಪಡಿಸಿದ್ದಾರೆ.

  ಮನೆಗೆ ಭೇಟಿ ಕೊಟ್ಟ ಪುನೀತ್ ರಾಜ್‌ಕುಮಾರ್ ಗೆ ಗದೆ ಕೊಟ್ಟ ಸಚಿವಮನೆಗೆ ಭೇಟಿ ಕೊಟ್ಟ ಪುನೀತ್ ರಾಜ್‌ಕುಮಾರ್ ಗೆ ಗದೆ ಕೊಟ್ಟ ಸಚಿವ

  ಸಚಿವ ಆನಂದ್ ಸಿಂಗ್ ಮನೆಗೆ ಪುನೀತ್ ಭೇಟಿ

  ಸಚಿವ ಆನಂದ್ ಸಿಂಗ್ ಮನೆಗೆ ಪುನೀತ್ ಭೇಟಿ

  ಪುನೀತ್ ರಾಜ್‌ಕುಮಾರ್ ಚಿತ್ರೀಕರಣದ ನಡುವೆಯೂ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಹೊಸಪೇಟೆಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪುನೀತ್ ರನ್ನು ಆದರದಿಂದ ಸ್ವಾಗತಿಸಿದ ಸಚಿವ ಆನಂದ್ ಸಿಂಗ್, ಪುನೀತ್ ರಾಜ್‌ಕುಮಾರ್ ಅವರಿಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ ಸನ್ಮಾನಿಸಿದ್ದಾರೆ. ಸಚಿವರ ಕುಟುಂಬದೊಂದಿಗೆ ಪುನೀತ್ ರಾಜ್‌ಕುಮಾರ್ ಉಪಹಾರ ಸೇವಿಸಿದರು. ಈ ಸಮಯ ಸಾರಿಗೆ ಸಚಿವ ಲಕ್ಷ್ಮಣ ಸವಧಿ ಸಹ ಹಾಜರಿದ್ದರು.

  ತುಂಗಾಭದ್ರಾ ಡ್ಯಾಮ್ ಗೆ ಪುನೀತ್ ಭೇಟಿ

  ತುಂಗಾಭದ್ರಾ ಡ್ಯಾಮ್ ಗೆ ಪುನೀತ್ ಭೇಟಿ

  ಇನ್ನೂ ಪವರ್ ಸ್ಟಾರ್ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಸುಂದರ ತಾಣಗಳನ್ನು ನೋಡಿ ಸಂತಸಪಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪುನೀತ್ ರಾಜ್‌ಕುಮಾರ್ ಗೆಳೆಯರೊಂದಿಗೆ ಸೇರಿ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ್ದರು. ಪುನೀತ್, ಟಿಬಿ ಡ್ಯಾಂ ಗೆ ಭೇಟಿ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.

  English summary
  Puneeth Rajkumar starrer James movie team requests don't upload videos of james shooting on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X