James Piracy: 'ಜೇಮ್ಸ್'ಗೂ ಪೈರಸಿ ಕಾಟ: ಅಭಿಮಾನಿಗಳಿಂದ ಅಭಿಯಾನ!

ಸಿನಿಮಾಗಳು ಅಂತೂ ಇಂತೂ ಶೂಟಿಂಗ್ ಮುಗಿಸಿ ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅಂತ ಎಲ್ಲ ತಯಾರಿ ನಡೆಸಿದಾಗ, ಚಿತ್ರತಂಡಗಳಿಗೆ ಎದುರಾಗುವ ದೊಡ್ಡ ಸವಾಲು ಎಂದರೆ ಅದು ಪೈರಸಿ. ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಪೈರಸಿ ಎನ್ನುವ ಭೂತ ಚಿತ್ರಗಳ ಬೆನ್ನೇರಿ ಕಾಡುತ್ತದೆ. ಇದು ಮೊದಲಿನಿಂದಲೂ ಕೂಡ ಸಿನಿಮಾ ಮಂದಿಗೆ ದೊಡ್ಡ ತಲೆ ನೋವು ಆಗಿದೆ.

ಪೈರಸಿ ವಿರುದ್ಧ ಹಲವಾರು ಸಿನಿಮಾ ತಂಡಗಳು ಸಾಕಷ್ಟು ಕ್ರಮ ತೆಗೆದುಕೊಂಡಿವೆ. ಆದರೂ ಕೂಡ ಸಿನಿಮಾಗಳಿಗೆ ಪೈರಸಿ ಕಾಟ ತಪ್ಪಿಲ್ಲ. ಈಗ ಕೊರೊನಾ ಬಳಿಕ ಸಿನಿಮಾ ತಂಡಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಇದರ ನಡುವೆ ಪೈರಸಿ ಕುಡ ಬಂದಪ್ಪಳಿಸಿದರೆ ಅದು ಚಿತ್ರಕ್ಕೆ ಭಾರಿ ಹೊಡೆತ ನೀಡಲಿದೆ.

ಸದ್ಯ ರಿಲೀಸ್ ಆಗುತ್ತಿರುವ ಪುನೀತ್‌ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಈ ಚಿತ್ರಕ್ಕೂ ಕೂಡ ಈಗ ಪೈರಸಿ ಭಯ ಶುರುವಾಗಿದೆ. ಪುನೀತ್ ರಾಜ್‌ಕುಮಾರ್‌ಗಾಗಿ 'ಜೇಮ್ಸ್' ಚಿತ್ರದ ಜೊತೆಗೆ ಮತ್ಯಾವ ಸಿನಿಮಾ ಕೂಡ ರಿಲೀಸ್ ಆಗುತ್ತಿಲ್ಲ. ಆದರೆ ಸಿನಿಮಾ ಪೈರಸಿ ಆದರೆ ಅದು ದುರಂತವೇ ಸರಿ.

'ಜೇಮ್ಸ್‌'ಗೂ ಎದುರಾಗುತ್ತಾ ಪೈರಸಿ ಕಾಟ?

'ಜೇಮ್ಸ್‌'ಗೂ ಎದುರಾಗುತ್ತಾ ಪೈರಸಿ ಕಾಟ?

'ಜೇಮ್ಸ್' ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಸಿದ್ದರಾಗಿದ್ದಾರೆ. ಆದರೆ ಸಿನಿಮಾ ತಂಡಕ್ಕೆ ಈಗ ಹೊಸ ಟೆನ್ಷನ್ ಶುರುವಾಗಿದೆ. ಸಿನಿಮಾ ರಿಲೀಸ್ ಆಗುವ ಖುಷಿ ಒಂದು ಕಡೆ ಆದರೆ, ಸಿನಿಮಾ ಪೈರಸಿ ಆಗುವ ಆತಂಕ ಮತ್ತೊಂದು ಕಡೆಗೆ. ಹಾಗಾಗಿ ಚಿತ್ರ ರಿಲೀಸ್‌ಗೂ ಮೊದಲೆ ಸಿನಿಮಾವನ್ನು ಪೈರಸಿ ಮಾಡದಂತೆ ಮನವಿ ಮಾಡಲಾಗುತ್ತಿದೆ.

ಪೈರಸಿ ಮಾಡಬೇಡಿ ಎಂದ ಅಭಿಮಾನಿಗಳು!

ಪೈರಸಿ ಮಾಡಬೇಡಿ ಎಂದ ಅಭಿಮಾನಿಗಳು!

'ಜೇಮ್ಸ್' ಸಿನಿಮಾ ಪೈರಸಿ ಮಾಡದಂತೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. 'ಜೇಮ್ಸ್' ಸಿನಿಮಾವನ್ನು ಪೈರಸಿ ಮಾಡಬೇಡಿ, ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿ ಸಂಭ್ರಮಿಸೋಣ ಎಂದು ಕೇಳಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ಪೈರಸಿ ಮಾಡಬೇಡಿ ಎಂದಿದ್ದಾರೆ.

ಪೈರಸಿಗೆ ಬಲಿಯಾಗುತ್ತಿರುವ ಅನೇಕ ಚಿತ್ರಗಳು!

ಪೈರಸಿಗೆ ಬಲಿಯಾಗುತ್ತಿರುವ ಅನೇಕ ಚಿತ್ರಗಳು!

ಸಿನಿಮಾ ಪೈರಸಿ ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತದೆ. ಇದರಿಂದ ಚಿತ್ರದ ಗಳಿಕೆ ಮೇಲೆ ಹೊಡೆತ ಬೀಳುತ್ತದೆ. ಪೈರಸಿಯಿಂದ ಹಲವಾರು ಸಿನಿಮಾಗಳು ನಲುಗಿ ಹೋಗಿವೆ. ಇತ್ತೀಚೆಗೆ ಕನ್ನಡದಲ್ಲಿ ಬಂದ 'ಏಕ್‌ ಲವ್ ಯಾ' ಸಿನಿಮಾಗೂ ಪೈರಸಿ ಕಾಟ ಕೊಟ್ಟಿತ್ತು. ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಂಡಿತ್ತು ಚಿತ್ರತಂಡ. ಈ ವಿಚಾರದಲ್ಲಿ ನಿರ್ದೇಶಕ ಪ್ರೇಮ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಆದರೆ ಅಷ್ಟರಲ್ಲಿ ಪೈರಸಿ ಆಗಿದ್ದ ಸಿನಿಮಾ ಪ್ರತಿ ಹಲವರಿಗೆ ತಲುಪಿ ಬಿಟ್ಟಿತ್ತು.

ಪೈರಸಿ ಕಾಟ ತಪ್ಪೋದು ಯಾವಾಗ?

ಪೈರಸಿ ಕಾಟ ತಪ್ಪೋದು ಯಾವಾಗ?

ಸಿನಿಮಾಗಳಿಗೆ ಪೈರಸಿ ದೊಡ್ಡ ಪಿಡುಗಾಗಿ ಕಾಡುತ್ತಲಿದೆ. ಸಾಕಷ್ಟು ಸಿನಿಮಾಗಳು ಇದ್ದಕ್ಕೆ ಬಲಿಯಾಗಿವೆ. ತಮಿಳು, ತೆಲುಗು ಸಿನಿಮಾಗಳಿಗೂ ಇದು ದೊಡ್ಡ ತಲೆನೋವಾಗಿದೆ. ಆದರೆ ಸದ್ಯಕ್ಕೆ ಈ ಪೈರಸಿ ಕಾಟ ತಪ್ಪುವಂತೆ ಕಾಣುತ್ತಾ ಇಲ್ಲ. ಯಾಕೆಂದರೆ ಹಲವು ಬಾರಿ ಹಲವು ಸಿನಿಮಾ ತಂಡಗಳು ಈ ವಿಚಾರದಲ್ಲಿ ಸೈಬರ್ ಕ್ರೈಮ್ ಠಾಣೆಯ ಮೊರೆ ಹೋಗಿವೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ಪೈರಸಿ ಕಾಟ ಎದುರಾಗುತ್ತಲೇ ಇದೆ. ಹಾಗಾಗಿ ಅಪ್ಪು ಅಭಿಮಾನಿಗಳು ಬಹಿರಂಗವಾಗಿ 'ಜೇಮ್ಸ್' ಪೈರಸಿ ಮಾಡಬೇಡಿ ಎಂದು ಕೇಳಿಕೊಳ್ಳುತ್ತಾ ಇದ್ದಾರೆ.

More from Filmibeat

English summary
Puneeth Rajkumar Fans Request Not To Release Piracy Copy of James Movie To Respect Puneeth Rajkumar,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X