twitter
    For Quick Alerts
    ALLOW NOTIFICATIONS  
    For Daily Alerts

    James: 'ಜೇಮ್ಸ್'ನಲ್ಲಿ ಪುನೀತ್ ರಾಜ್‌ಕುಮಾರ್ ಮರುಸೃಷ್ಟಿ: ಗೆದ್ದ ಚಿತ್ರತಂಡ!

    |

    ಸದ್ಯ ಎಲ್ಲೆಲ್ಲೂ 'ಜೇಮ್ಸ್' ಚಿತ್ರದ್ದೇ ಹವಾ. 'ಜೇಮ್ಸ್' ಸಿನಿಮಾ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಹಾಗೆ ಮಾಡಲಾಗಿದೆ. ಸಿನಿಮಾವನ್ನು ಪೂರ್ಣ ಮಾಡದೇ ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದರು. ಇದು ಅವರ ಕೊನೆಯ ಸಿನಿಮಾ ಆದ ಕಾರಣ, ಚಿತ್ರತಂಡದ ಮೇಲೆ ದೊಡ್ಡ ಜವಾಬ್ದಾರಿ ಇತ್ತು. ಅಪ್ಪು ಇಲ್ಲದೇ ನಿಂತಿದ್ದ 'ಜೇಮ್ಸ್' ಸಿನಿಮಾವನ್ನು ಹೇಗಾದರೂ ಮಾಡಿ, ಪೂರ್ಣ ಪ್ರಮಾಣದ ಸಿನಿಮಾವನ್ನು ತೆರೆಗೆ ತರುವ ಚಾಲೆಂಜ್ ಚಿತ್ರತಂಡಕ್ಕೆ ಎದುರಾಗಿತ್ತು.

    ಅಲ್ಲದೇ ಅಪ್ಪು ಆಸೆಯಂತೆ ಸಿನಿಮಾವನ್ನು ಅವರ ಹುಟ್ಟುಹಬ್ಬದಂದೇ ಮಾರ್ಚ್ 17ಕ್ಕೆ ರಿಲೀಸ್ ಮಾಡುವುದು ಕೂಡ ಮುಖ್ಯ ಆಗಿತ್ತು. ಇಷ್ಟೇ ಚಾಲೆಂಜ್‌ಗಳನ್ನು ಎದುರಿಸಿ, ಸಿನಿಮಾ ರಿಲೀಸ್ ಆದ ಮೇಲೆ ಉತ್ತಮ ಸಿನಿಮಾ ಎನಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಯಾಕೆಂದರೆ ಎಲ್ಲಾ ಇದ್ದು ಸಿನಿಮಾ ಮಾಡಿ ಸೈ ಎನಿಸಿಕೊಳ್ಳುದೇ ಕಷ್ಟಕರ. ಹಾಗಿದ್ದಾಗ ಚಿತ್ರದ ಆಧಾರ ನಾಯಕನೇ ಇಲ್ಲ ಎಂದ ಮೇಲೆ ಸಿನಿಮಾ ಮಾಡುದಾದರೂ ಹೇಗೆ ಅಲ್ವಾ.?

    James: ರಾಜ್‌ಕುಮಾರ್-ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾದಲ್ಲಿದೆ ಒಂದೇ ರೀತಿಯ ಸಂದೇಶJames: ರಾಜ್‌ಕುಮಾರ್-ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾದಲ್ಲಿದೆ ಒಂದೇ ರೀತಿಯ ಸಂದೇಶ

    ಒಂದು ಕಡೆ ಅಪ್ಪು ಇಲ್ಲ ಎನ್ನುವ ನೋವಿದ್ದರೂ ಸಿನಿಮಾ ತಂಡ 'ಜೇಮ್ಸ್' ಚಿತ್ರವನ್ನು ಎಷ್ಟು ನಿಗಾವಹಿಸಿ ಮಾಡಿದ್ದಾರೆ ಎನ್ನುವುದು ತೆರೆಯ ಮೇಲೆ ಕಾಣುತ್ತೆ. ಈಗ ತಂತ್ರಜ್ಞಾನಕ್ಕೆ ಕೊರತೆ ಇಲ್ಲ. ಸಿನಿಮಾ ಪರದೆ ಮೇಲೆ ಯಾರನ್ನು ಬೇಕಾದರೂ ಹೇಗೆ ಬೇಕಾದರೂ ಸೃಷ್ಟಿ ಮಾಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಆದರೆ ಸಿನಿಮಾದಲ್ಲಿ ಮಾಡಿದ ಪ್ರಯೋಗ ನೋಡಿ ಜನರು ಒಪ್ಪಿಕೊಳ್ಳಬೇಕಲ್ಲ. ಈ ವಿಚಾರದಲ್ಲಿ 'ಜೇಮ್ಸ್' ಚಿತ್ರ ಗೆದ್ದಿದೆ.

    Shivarajkumar Cried: ತಮ್ಮನ 'ಜೇಮ್ಸ್' ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣShivarajkumar Cried: ತಮ್ಮನ 'ಜೇಮ್ಸ್' ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    'ಜೇಮ್ಸ್' ಚಿತ್ರತಂಡದ ಪ್ರಯತ್ನಕ್ಕೆ ಸಿಕ್ಕಿತು ಫಲ!

    'ಜೇಮ್ಸ್' ಚಿತ್ರತಂಡದ ಪ್ರಯತ್ನಕ್ಕೆ ಸಿಕ್ಕಿತು ಫಲ!

    ಪುನೀತ್‌ ರಾಜ್‌ಕುಮಾರ್ ನಿಧನದ ನಂತರ ಚಿತ್ರದ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಆದರೆ ಅಪ್ಪು ಇಲ್ಲದೇ ಆ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. ಅಪ್ಪು ಪಾತ್ರಕ್ಕೆ ಯಾವುದೇ ರೀತಿಯ ಧಕ್ಕೆ ಬಾರದ ಹಾಗೆ ಸಿನಿಮಾ ತಂಡ ತಂತ್ರಜ್ಞಾನ ಬಳಸಿ, ಪುನೀತ್ ರಾಜ್‌ಕುಮಾರ್ ಅವರನ್ನು ಮರುಸೃಷ್ಟಿ ಮಾಡಲಾಗಿದೆ. ಆ ದೃಶ್ಯಗಳಿಗೆ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿ ಆಗಿವೆ.

    ರೋಚಕ ಫೈಟ್ ದೃಶ್ಯದಲ್ಲಿ ಅಪ್ಪು ಮರುಸೃಷ್ಟಿ!

    ರೋಚಕ ಫೈಟ್ ದೃಶ್ಯದಲ್ಲಿ ಅಪ್ಪು ಮರುಸೃಷ್ಟಿ!

    'ಜೇಮ್ಸ್' ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಆ್ಯಕ್ಷನ್‌ಗಳೇ ಹೈಟೈಲ್. ಈ ಚಿತ್ರದಲ್ಲಿ ಅಪ್ಪು ಫೈಟ್ ಮಾಡೋದನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಒಂದು ಫೈಟ್ ದೃಶ್ಯವನ್ನು ಅಪ್ಪು ಇಲ್ಲದೇ ಮಾಡಿ ಮುಗಿಸಿದೆ. ಹಾಗಂತ ಫೈಟ್‌ ಅನ್ನು ಸರಳವಾಗಿ ಮಾಡಿದ್ದಾರೆ ಅಂತಲ್ಲಾ. ಎಲ್ಲಾ ಫೈಟ್ ದೃಶ್ಯಗಳ ಹಾಗೆ ಇಲ್ಲಿ ಕೂಡ ಮಸ್ತ್‌ ಆ್ಯಕ್ಷನ್ ಇದೆ. ಚಿತ್ರತಂಡ ಕೂಡ ಜಾಣತನದಿಂದ ಅಪ್ಪುವನ್ನು ಈ ಫೈಟ್‌ನಲ್ಲಿ ಮರುಸೃಷ್ಟಿ ಮಾಡಿದ್ದಾರೆ. ಚಿತ್ರತಂಡದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯಾ.

    ಬಾಕಿ ಉಳಿದು ಬಿಟ್ಟ 'ಜೇಮ್ಸ್' ರೊಮ್ಯಾಂಟಿಕ್ ಹಾಡು!

    ಬಾಕಿ ಉಳಿದು ಬಿಟ್ಟ 'ಜೇಮ್ಸ್' ರೊಮ್ಯಾಂಟಿಕ್ ಹಾಡು!

    ಚಿತ್ರತಂಡ ಈ ಮೊದಲೇ ಹೇಳಿಕೊಂಡಿತ್ತು. 'ಜೇಮ್ಸ್' ಚಿತ್ರದ ಒಂದು ಹಾಡು ಹಾಗೆ ಉಳಿದಿದೆ. ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲು ಚಿತ್ರತಂಡ ಸಜ್ಜಾಗಿತ್ತು. ಆದರೆ, ಅಪ್ಪು ಇಲ್ಲದೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಹೀಗೆ ಸಿನಿಮಾದಲ್ಲಿ ಚಿತ್ರತಂಡ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ. ಆದರೆ ಅಪ್ಪು ಇಲ್ಲದ ಆ ಫೈಟ್ ಚಿತ್ರಕ್ಕೆ ಬಹಳ ಮುಖ್ಯ. ಹಾಗಾಗಿ ಅಪ್ಪುವನ್ನು ಮರುಸೃಷ್ಟಿ ಮಾಡಿ ಕಥೆಗೆ ನ್ಯಾಯ ಒದಗಿಸಲಾಗಿದೆ.

    ಶಿವಣ್ಣ, ರಾಘಣ್ಣ ಪಾತ್ರಗಳ ಅಳವಡಿಕೆ!

    ಶಿವಣ್ಣ, ರಾಘಣ್ಣ ಪಾತ್ರಗಳ ಅಳವಡಿಕೆ!

    'ಜೇಮ್ಸ್' ಸಿನಿಮಾ ನಟ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿರುವ ಕಟ್ಟ ಕಡೆಯ ಸಿನಿಮಾ. ಹಾಗಾಗಿ ಈ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಪಾತ್ರಗಳನ್ನು ಅಪ್ಪು ನಿಧನದ ಬಳಿಕ ಅಳವಡಿಸಲಾಗಿದೆ. ಹಾಗಾಗಿ ಬಹುಶಃ ಮೂಲಕ ಕಥೆಯಲ್ಲಿ ನಿರ್ದೇಶಕ ಚೇತನ್‌ ಕುಮಾರ್ ಒಂದಷ್ಟು ಬದಲಾವಣೆ ಮಾಡಿಕೊಂಡಿರಬಹುದು. ಆದರೆ ಅವರ ಪಾತ್ರಗಳ ಎಂಟ್ರಿ ಕೂಡ ಆಭಾಸ ಎನಿಸುವುದಿಲ್ಲ. ಕಥೆಗೆ ತಕ್ಕ ಹಾಗೆ ಅವರ ಪಾತ್ರಗಳನ್ನು ಹೊಂದಿಸಲಾಗಿದೆ.

    English summary
    James Team Succes Full In Recreate Puneeth Rajkumar In James Movie Action Sequence
    Friday, March 18, 2022, 12:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X