For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಮನೆಗೆ ಬರುತ್ತಿದ್ದಾಳೆ 'ಜನನಿ'!

  By ಪ್ರಿಯಾ ದೊರೆ
  |

  ಉದಯ ಟಿವಿಯಲ್ಲಿ ಸಾಕಷ್ಟು ಕೌಟುಂಬಿಕ ಧಾರಾವಾಹಿಗಳು ಮೂಡಿ ಬಂದಿವೆ. ಸೇವಂತಿ, ಅಣ್ಣ-ತಂಗಿ, ಸುಂದರಿ, ನೇತ್ರಾವತಿ,ಕನ್ಯಾದಾನ, ಗೌರಿಪುರದ ಗಯ್ಯಾಳಿಗಳು, ರಾಧಿಕಾ, ಮದುಮಗಳು, ಕಾವ್ಯಾಂಜಲಿ ಹೀಗೆ ಹಲವು ಧಾರಾವಾಹಿಗಳನ್ನು ಉದಯ ವಾಹಿನಿ ನೀಡಿದೆ. ಇದೀಗ ಮತ್ತೊಂದು ಕೌಟುಂಬಿಕ ಧಾರಾವಾಹಿ ಶುರುವಾಗುತ್ತಿದೆ.

  ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದೇ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಶುರುವಾಗುತ್ತಿದೆ. ಈ ಧಾರಾವಾಹಿಯ ಹೆಸರೇ 'ಜನನಿ'. 'ಜನನಿ' ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿದೆ. ಪ್ರತಿ ದಿನ ರಾತ್ರಿ 9 ಗಂಟೆಗೆ ಜನನಿ ಮೂಡಿ ಬರಲಿದೆ.

  ಹೊಸ ಕಥೆ, ಹೊಸ ನಟರ ಜೊತೆಗೆ ಹಳೆಯ ನಟರೂ ಸೇರಿ 'ಜನನಿ' ಧಾರಾವಾಹಿ ಮೂಡಿ ಬರಲಿದೆ. ಮಗಳ ಸಾಧನೆಗಾಗಿ ಕಷ್ಟ ಪಡುವ ತಂದೆ, ಹೆಣ್ಣು ಸಮಾಜವನ್ನು ಹೇಗೆ ಎದುರಿಸುತ್ತಾಳೆ ಎಂಬ ಕಥೆ ಈ ಧಾರಾವಾಹಿಯದ್ದು. ಒಟ್ಟಾಗಿ ಹೇಳಬೇಕೆಂದರೆ ಇದು ಕೌಟುಂಬಿಕ ಧಾರಾವಾಹಿ.

  ಜನನಿಯ ಕಥೆ ಏನು..?

  ಜನನಿಯ ಕಥೆ ಏನು..?

  ಜನನಿ ಧಾರಾವಾಹಿಯಲ್ಲಿ ಬರುವ ನಾಯಕಿಯ ಹೆಸರು ಜನನಿ. ಜನನಿಗೆ ಜೀವನದಲ್ಲಿ ಸಾಧನೆ ಮಾಡಬೇಕೆಂದು ಗುರಿಯನ್ನು ಇಟ್ಟುಕೊಂಡಿರುತ್ತಾಳೆ. ಮಗಳ ಸಾಧನೆಗೆ ಸಹಕರಿಸುವ ಸಲುವಾಗಿ, ಜನನಿಯ ತಂದೆ ಹಗಲು ರಾತ್ರಿ ಎನ್ನದೇ ದುಡಿಯುತ್ತಾರೆ. ಕಷ್ಟಪಟ್ಟು ದುಡಿಯುವ ತಂದೆಗೆ ತನ್ನ ಮಗಳು ಗುರಿ ಮುಟ್ಟುವುದೇ ಮುಖ್ಯ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಜನನಿಗೆ ಓದು ಮುಗಿಯುತ್ತಿದ್ದಂತೆ ಮದುವೆಯಾಗುತ್ತದೆ. ಮದುವೆಯಾದ ಮೇಲೆ ಜನನಿ ಗಂಡನ ಮನೆಗೆ ಹೊಂದಿಕೊಂಡು, ತನ್ನ ತವರು ಮನೆ ಹಾಗೂ ಸಮಾಜವನ್ನು ಎದುರಿಸುತ್ತಾ ಗುರಿಯನ್ನು ತಲುವುದೇ ಈ ಧಾರಾವಾಹಿಯ ಕಥೆ. ಈ ನಡುವೆ ಜನನಿ ತನ್ನ ಕನಸುಗಳನ್ನು ಹೇಗೆ ಪೂರೈಸಿಕೊಳ್ಳುತ್ತಾಳೆ. ಏನೆಲ್ಲಾ ಸಮಸ್ಯೆಗಳನ್ನು ಸಮಸ್ಯೆಗಳನ್ನು ಎದುರಿಸುತ್ತಾಳೆ ಎಂಬುದನ್ನು ತೋರಿಸಲಾಗಿದೆ.

  'ಜನನಿ' ಪ್ರೋಮೊ ರಿಲೀಸ್!

  'ಜನನಿ' ಪ್ರೋಮೊ ರಿಲೀಸ್!

  ಜನನಿ ಧಾರಾವಾಹಿಯ ಪ್ರೋಮೋವನ್ನು ಪ್ರಸಾರ ಮಾಡಲಾಗಿದೆ. ಈ ಪ್ರೋಮೋದಲ್ಲಿ ಮನೆಗೆ ಬಂದವರಿಗೆ ಹುಡುಗರು ಕಾಫಿಯನ್ನು ಸರ್ವ್ ಮಾಡುತ್ತಾರೆ. ಇದನ್ನು ನೋಡಿ ಮಹಿಳೆಯೊಬ್ಬರು ಇದೇನ್ ಸರ್‌ ನಿಮ್ಮ ಮನೆಯಲ್ಲಿ ಯಾರೂ ಹೆಣ್ಣು ಮಕ್ಕಳಿಲ್ವಾ..? ನಿಮ್ಮ ತಮ್ಮಂದಿರೇ ಕಾಫಿ ತಂದುಕೊಡುತ್ತಿದ್ದಾರೆ ಎಂದು ಕೇಳುತ್ತಾರೆ. ಆಗ ಮಾತನಾಡುವ ವ್ಯಕ್ತಿ ಯಾಕಿಲ್ಲ. ನಮ್ಮನೆ ಹೆಣ್ಣು ಮಕ್ಕಳು ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಅವರಿಗೆಲ್ಲಾ ಕಾಫಿ ಕೊಟ್ರೇನ್ರೋ ಎಂದು ಕೇಳಿದಾಗ ತಮ್ಮಂದಿರು ಅವರಿಗೆ ಕಾಫಿ ಕೊಟ್ಟೆ ಬಂದ್ವಿ ಎಂದು ಹೇಳುತ್ತಾರೆ. ಆಗ ಜನನಿ ಬಂದು ಹೆಣ್ಣು ಮಕ್ಕಳನ್ನು ಸರಿಸಮಾನವಾಗಿ ನೋಡುವ ಇಂತಹ ಗಂಡಸರಿರುವ ವರೆಗೂ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಲೇ ಇರುತ್ತೀವಿ. ನಾನು ಸಾಧನೆ ಮಾಡುತ್ತೀನಿ ಎಂದು ಜನನಿ ಹೇಳುತ್ತಾಳೆ.

  ಜನನಿ ತಂಡದ ಕಲಾವಿದರು!

  ಜನನಿ ತಂಡದ ಕಲಾವಿದರು!

  ಜನನಿ ಧಾರಾವಾಹಿಯಲ್ಲಿ ನಾಯಕಿ ಜೊತೆಗೆ ಸಹ ಪಾತ್ರಗಳೂ ಇವೆ. ಜನನಿಯಾಗಿ ನಟಿ ವರ್ಷಿಕಾ ಅವರು ಕಾಣಿಸಿಕೊಂಡಿದ್ದು, ನಾಯಕನ ಪಾತ್ರದಲ್ಲಿ ಕಿರಣ್ ಇದ್ದಾರೆ. ಕಿರಣ್ ಅವರದ್ದು ಇದು ಮೊದಲ ಧಾರಾವಾಹಿಯಾಗಿದೆ. ಇನ್ನು ಜನನಿಯ ತಂದೆ -ತಾಯಿ ಪಾತ್ರದಲ್ಲಿ ನಟ ಪ್ರದೀಪ್‌ ತಿಪಟೂರ್ ಹಾಗೂ ನಟಿ ದಿವ್ಯಾ ಗೋಪಾಲ್‌ ಅವರು ಕಾಣಿಸಿಕೊಂಡಿದ್ದಾರೆ. ನಾಯಕ ಕಿರಣ್ ಅವರ ತಾಯಿಯ ಪಾತ್ರದಲ್ಲಿ ಪುಷ್ಪ ಸ್ವಾಮಿ ಇದ್ದಾರೆ. ಮತ್ತೊಂದು ಪ್ರಮುಖವಾದ ಪಾತ್ರ ನಾಯಕನ ಅಣ್ಣ. ಅಣ್ಣನ ಪಾತ್ರವನ್ನು ಮುನಿ ನಟಿಸಿದ್ದಾರೆ. ಇನ್ನುಳಿದಂತೆ ಲಕ್ಷ್ಮಣ್ , ಅರುಣ್, ಶ್ವೇತಾ, ರೂಪಾ, ಶಿಲ್ಪ ಅಯ್ಯರ್ ಸೇರಿದಂತೆ ಹಲವರಿದ್ದಾರೆ.

  ಹೊನ್ನೇಶ್ ರಾಮಚಂದ್ರಯ್ಯ ನಿರ್ದೇಶನ!

  ಹೊನ್ನೇಶ್ ರಾಮಚಂದ್ರಯ್ಯ ನಿರ್ದೇಶನ!

  ಇನ್ನು ಜನನಿ ಧಾರಾವಾಹಿಯನ್ನು ಹೊನ್ನೇಶ್ ರಾಮಚಂದ್ರಯ್ಯ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣದ ಹೊಣೆ ನಟ, ನಿರ್ಮಾಪಕ ಚಿ.ಗುರುದತ್‌ ಅವರ ಮೇಲಿದೆ. ಗುರುದತ್‌ ಅವರು ನಿರ್ಮಾಣ ಸಂಸ್ಥೆಯಾದ ಶಾರದಾಸ್ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಜನನಿ ಧಾರಾವಾಹಿ ನಿರ್ಮಾಣಗೊಂಡಿದೆ. ಒಟ್ಟಿನಲ್ಲಿ ಜನನಿ ಧಾರಾವಾಹಿಯ ಮೇಲೆ ಪ್ರೇಕ್ಷಕರು ಬಹಳ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

  English summary
  Janani New Serial Coming Soon In Udaya Tv, Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X