For Quick Alerts
  ALLOW NOTIFICATIONS  
  For Daily Alerts

  ಕರುನಾಡ ಚಕ್ರವರ್ತಿ ಶಿವಣ್ಣ ಯಶೋಗಾಥೆ ಬಗ್ಗೆ ಬರಲಿದೆ ಪುಸ್ತಕ

  By Harshitha
  |

  ಡಾ.ಶಿವರಾಜ್ ಕುಮಾರ್ ಅವರ ಜೀವನ ಚರಿತ್ರೆ ಸಾರುವ ಪುಸ್ತಕವನ್ನು ಪತ್ರಕರ್ತ ಮತ್ತು ಛಾಯಾಗ್ರಾಹಕರಾದ ಜನಾರ್ಧನ ರಾವ್ ಸಾಳಂಕೆ ಬರೆದಿದ್ದಾರೆ. ಪುಸ್ತಕದ ಹೆಸರು 'ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಯಶೋಗಾಥೆ'.

  ಬಹಳಷ್ಟು ನಟ, ನಟಿ, ನಿರ್ದೇಶಕ, ನಿರ್ಮಾಪಕರು ಮತ್ತು ಅಭಿಮಾನಿಗಳನ್ನು ಲೇಖಕ ಜನಾರ್ಧನ ರಾವ್ ಸಾಳಂಕೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಬಹುಶಃ ಇದು ಶಿವಣ್ಣ ಅವರ ಬಗ್ಗೆ ಹೊರಬರುತ್ತಿರುವ ಪೂರ್ಣಪ್ರಮಾಣದ ಮೊದಲ ಪುಸ್ತಕ.

  ಪ್ರಕಾಶಕರಾದ ಸುರೇಶ್ ಅವರು ಈ ಪುಸ್ತಕವನ್ನು ಶಿವಣ್ಣ ಅವರ ಹುಟ್ಟುಹಬ್ಬದ ಮುನ್ನ ಬಿಡುಗಡೆ ಮಾಡಲಿದ್ದಾರೆ. ಇದರಲ್ಲಿ ಶಿವಣ್ಣ ಅವರ ಬಹು ಅಪರೂಪದ ಫೋಟೋಗಳಿವೆ.

  ಪುಸ್ತಕ ಬರೆಯುವ ಮುನ್ನ ಅಂದರೆ ಮೂರು ವರ್ಷಗಳ ಹಿಂದೆ ರಾಘವೇಂದ್ರ ರಾಜ್ ಕುಮಾರ್ ಅವರನ್ನು ವಜ್ರೇಶ್ವರಿ ಕಂಬೈನ್ಸ್ ಕಚೇರಿಯಲ್ಲಿ ಸಾಳಂಕೆ ಎರಡು ಬಾರಿ ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದ್ದರು. ಇದರಿಂದ ಖುಷಿಗೊಂಡ ರಾಘಣ್ಣ "ನಿಮಗೆ ದೇವರು ಒಳ್ಳೆಯದು ಮಾಡಲಿ. ನಾವು ಸಹ ಈ ಪುಸ್ತಕಕ್ಕಾಗಿ ಕಾಯುತ್ತೇವೆ" ಎಂದು ಹೇಳಿ ಹರಸಿದ್ದರು. ಶಿವಣ್ಣ ಅವರಿಗೂ ಈ ಪುಸ್ತಕದ ವಿಚಾರ ತಿಳಿದಿದೆ.

  ಈಗಾಗಲೇ ಸಾಳಂಕೆ ಯವರು ಡಾ.ವಿಷ್ಣುವರ್ಧನ್ ಅವರ ಬಗ್ಗೆ 4 ಪುಸ್ತಕಗಳನ್ನು ಬರೆದಿದ್ದಾರೆ.

  English summary
  Janardhan Rao Salanke has written a book on Shiva Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X