'ಪೈಲ್ವಾನ್'ಗೆ ಶುಭಕೋರಿದ ರಾಜಕೀಯ ಮತ್ತು ಸಿನಿರಂಗದ ಗಣ್ಯರು

Recommended Video

Pailwaan : 'ಪೈಲ್ವಾನ್'ಗೆ ಶುಭಕೋರಿದ ರಾಜಕೀಯ ಮತ್ತು ಸಿನಿರಂಗದ ಗಣ್ಯರು | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇಂದು ದೇಶ ವಿದೇಶದಲ್ಲಿ ತೆರೆಗೆ ಬಂದಿದೆ. ಮೂರು ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗೆ ಬಂದಿರುವ ಪೈಲ್ವಾನ್ ಅನ್ನು ಅಭಿಮಾನಿಗಳು ಬೆಳ್ಳಂಬೆಳಗ್ಗೆಯೆ ವೀಕ್ಷಿಸಿದ್ದಾರೆ. ಪೈಲ್ವಾನ್ ನ ದರ್ಶನ ಪಡೆದು ಸುದೀಪಿಯನ್ಸ್ ಕುಣಿದುಕುಪ್ಪಳಿಸಿದ್ದಾರೆ.

ವಿಶೇಷ ಅಂದ್ರೆ ಪೈಲ್ವಾನ್ ಸಿನಿಮಾಗೆ ಚಿತ್ರರಂಗದ ಅನೇಕ ಗಣ್ಯರು ಶುಭಕೋರಿದ್ದಾರೆ. ಸ್ಟಾರ್ ವಾರ್, ಸ್ಪರ್ಧೆ ಹೀಗೆ ಅನೇಕ ವಿಚಾರಗಳನ್ನು ಬದಿಗಿಟ್ಟು, ಸ್ಟಾರ್ ನಟನ ಸಿನಿಮಾಗೆ ಶುಭಕೋರಿರುವುದು ಸ್ಯಾಂಡಲ್ ವುಡ್ ನಲ್ಲಿ ಕಾಣಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇದೋ ಮೊದಲ ಬಾರಿ ಏನು ಅಲ್ಲ ಈ ಹಿಂದೆ ಸಹ ದರ್ಶನ್, ಪುನೀತ್, ಶಿವಣ್ಣ ಸಿನಿಮಾಗಳು ರಿಲೀಸ್ ಆದ ಸಮಯದಲ್ಲಿಯೂ ಅನೇಕರು ನಟರು ಶುಭಕೋರಿದ್ದರು. ಈಗ ಪೈಲ್ವಾನ್ ವಿಚಾರದಲ್ಲೂ ಸ್ಟಾರ್ ನಟರು ಸಾಥ್ ನೀಡಿದ್ದಾರೆ. ಸಿನಿರಂಗದವರು ಮಾತ್ರವಲ್ಲದೆ ರಾಜಕೀಯ ಗಣ್ಯರು ಪೈಲ್ವಾನ್ ಗೆ ಶುಭಕೋರಿದ್ದಾರೆ.

ಪ್ರೀತಿಯ ತಮ್ಮನಿಗೆ ಶುಭಾಶಯ

ಪ್ರೀತಿಯ ತಮ್ಮನಿಗೆ ಶುಭಾಶಯ

ರಾಜಕಾರಣಿ, ಸುದೀಪ್ ಆಪ್ತ ಜನಾರ್ಧನ ರೆಡ್ಡಿ ಪೈಲ್ವಾನ್ ಸಿನಿಮಾ ಶುಭವಾಗಲಿ ಎಂದು ಹಾರೈಸಿದ್ದಾರೆ. "ನನ್ನ ಪ್ರೀತಿಯ ತಮ್ಮ, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಸಾಮ್ರಾಟ ಕೆಚ್ಚೆದೆಯ ಹೆಮ್ಮೆಯ ಕಿಚ್ಚನ ಅತ್ಯಂತ ಸಾಹಸದಿಂದ ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ಚಿತ್ರ ವಿಶ್ವದಾದ್ಯಂತ ವಿಜಯ ಸಾಧಿಸಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ" ಎಂದು ದೀರ್ಘವಾದ ಸಂದೇಶ ಕಳುಹಿಸಿದ್ದಾರೆ.

ಒಳ್ಳೆಯದಾಗಲಿ ಎಂದ ಪುನೀತ್

ಒಳ್ಳೆಯದಾಗಲಿ ಎಂದ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಪೈಲ್ವಾನ್ ಗೆ ಶುಭಹಾರೈಸಿದ್ದಾರೆ. "ಇಡೀ ಪೈಲ್ವಾನ್ ತಂಡಕ್ಕೆ ಶುಭವಾಗಲಿ" ಎಂದು ಪುನೀತ್ ಹೇಳಿದ್ದಾರೆ. ಈ ಹಿಂದೆ ಅಪ್ಪು ಪೈಲ್ವಾನ್ ಸಿನಿಮಾದ ಆಡಿಯೋವನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥಿ ನೀಡಿದ್ದರು.

ಐದು ಭಾಷೆಯಲ್ಲಿ ಗೆಲುವು ಸಾಧಿಸಲಿ

ಐದು ಭಾಷೆಯಲ್ಲಿ ಗೆಲುವು ಸಾಧಿಸಲಿ

"ಕಿಚ್ಚ ಸುದೀಪ್ ಮತ್ತು ಪೈಲ್ವಾನ್ ತಂಡಕ್ಕೆ ಶುಭವಾಗಲಿ. ದೊಡ್ಡ ಮಟ್ಟಕ್ಕೆ ಹಿಟ್ ಆಗಲಿ. ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ ತರಲಿ. ಐದು ಭಾಷೆಯಲ್ಲಿ ಪೈಲ್ವಾನ್ ಗೆಲುವು ಸಾಧಿಸಲಿ" ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.

ಪೈಲ್ವಾನ್ ಗೆ ಯಶಸ್ಸು ಸಿಗಲಿ

ಪೈಲ್ವಾನ್ ಗೆ ಯಶಸ್ಸು ಸಿಗಲಿ

"ಪೈಲ್ವಾನ್ ಚಿತ್ರಕ್ಕೆ ದೊಡ್ಡ ಯಶಸ್ಸು ಸಿಗಲಿ. ಸುದೀಪ್ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ನಟ ಶರಣ್ ಶುಭಾಶಯ ತಿಳಿಸಿದ್ದಾರೆ.

ಪೈಲ್ವಾನ್ ಕನ್ನಡಿಗರ ಹೃದಯ ಗೆಲ್ಲಲಿ

ಪೈಲ್ವಾನ್ ಕನ್ನಡಿಗರ ಹೃದಯ ಗೆಲ್ಲಲಿ

"ಪೈಲ್ವಾನ್ ಕನ್ನಡಿಗರ ಹೃದಯ ಗೆಲ್ಲಲಿ, ಬನ್ನೊರಲ್ಲಿ ತೋತಾಪುರಿ ಚಿತ್ರೀಕರಣ ದಾರಿಯಲ್ಲಿ ಚಿತ್ರಮಂದಿರದ ಮುಂದೆ ಹಾದು ಹೋಗುವಾಗ ಖುಷಿಯಾಯಿತು ಜನರ ಪ್ರೀತಿ ಕಂಡು ಶುಭಮಸ್ತು" ಎಂದಿದ್ದಾರೆ.

More from Filmibeat

English summary
Politician Janardhan Reddy and Puneeth rajkumar, Jaggesh, Ganesh others wished to Sudeep for pailwaan success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X