For Quick Alerts
  ALLOW NOTIFICATIONS  
  For Daily Alerts

  ಜನಾರ್ಧನ ರೆಡ್ಡಿ ಪುತ್ರನ ಮೊದಲ ಸಿನಿಮಾಗೆ ಕೊನೆಗೂ ಸಿಕ್ಕಿತು ಟೈಟಲ್!

  |

  ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರೋದು ಗೊತ್ತಿರೋ ವಿಷಯವೇ. ಮೊದಲ ಸಿನಿಮಾ ಲಾಂಚ್‌ ಅನ್ನೇ ಅದ್ಧೂರಿಯಾಗಿ ಮಾಡಲಾಗಿತ್ತು. ಕಿರೀಟಿ ಸಿನಿಮಾಗಾಗಿ ತಯಾರಿ ನಟಿಸಿದ ಝಲಕ್ ಅನ್ನೂ ರಿಲೀಸ್ ಮಾಡಲಾಗಿತ್ತು.

  ಮೊದಲ ಸಿನಿಮಾದಲ್ಲಿಯೇ ನಾಲ್ಕು ಭಾಷೆಗಳಿಗೆ ಹೀರೊ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಆಕ್ಷನ್, ಲವ್, ಸೆಂಟಿಮೆಂಟ್ ಎಲ್ಲದರಲ್ಲೂ ತರಬೇತಿ ಪಡೆದುಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ದುಪ್ಪಟ್ಟು ನಿರೀಕ್ಷೆಯಿದೆ.

  ಕಿರೀಟಿ ರೆಡ್ಡಿ: ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸಾಹಸಕ್ಕೆ ಭೇಷ್ ಎಂದ ನೆಟ್ಟಿಗರುಕಿರೀಟಿ ರೆಡ್ಡಿ: ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸಾಹಸಕ್ಕೆ ಭೇಷ್ ಎಂದ ನೆಟ್ಟಿಗರು

  ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೆ ಕಿರೀಟಿ ಹೀರೊ ಆಗಿ ಎಂಟ್ರಿ ಕೊಡ್ತಿರೋ ಸಿನಿಮಾ ಟೈಟಲ್ ಮಾತ್ರ ರಹಸ್ಯವಾಗಿಯೇ ಇಡಲಾಗಿತ್ತು. ಆದ್ರೀಗ ಆ ಟೈಟಲ್ ಕೂಡ ರಿವೀಲ್ ಆಗಿದೆ. ಅದುವೇ 'ಜೂನಿಯರ್'. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಅಭಿನಯದ ಮೊದಲ ಸಿನಿಮಾದ ಟೈಟಲ್ 'ಜೂನಿಯರ್' ಎಂದು ಇಡಲಾಗಿದೆ.

  ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಮಯಾಬಜಾರ್' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಜೂನಿಯರ್' ಸಿನಿಮಾ ಸದ್ಯ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿವರೆಗೂ ಕಿರೀಟಿ ಮೊದಲ ಸಿನಿಮಾದ ಟೈಟಲ್ ಅನ್ನುಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಈಗ ಫೈನಲಿ ಸಿನಿಮಾ ಟೈಟಲ್ ರಿವೀಲ್ ಆಗಿದೆ.ಇಷ್ಟು ದಿನದ ರಹಸ್ಯವೇ ಇಟ್ಟ ಗುಟ್ಟನ್ನು ಬಿಟ್ಟು ಕೊಡಲಾಗಿದೆ.

  ಜನಾರ್ಧನ ರೆಡ್ಡಿ ಮಗನಿಗೆ ರಾಜಮೌಳಿ, ರವಿಚಂದ್ರನ್, ಶಿವಣ್ಣ ಕೊಟ್ಟ ಸಲಹೆ ಏನು?ಜನಾರ್ಧನ ರೆಡ್ಡಿ ಮಗನಿಗೆ ರಾಜಮೌಳಿ, ರವಿಚಂದ್ರನ್, ಶಿವಣ್ಣ ಕೊಟ್ಟ ಸಲಹೆ ಏನು?

  ಇಂದು( ಸೆಪ್ಟೆಂಬರ್ 29) ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿ ಹುಟ್ಟುಹಬ್ಬ. ಈ ಕಾರಣಕ್ಕೆ ಚಿತ್ರತಂಡ ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ಅನ್ನು ರಿವೀಲ್ ಮಾಡಿದೆ. ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವಾರಾಹಿ ಇಂದು (ಸೆಪ್ಟೆಂಬರ್ 30) ಸಂಜೆ 6.39ಕ್ಕೆ ಟೈಟಲ್ ವಿಡಿಯೋವನ್ನು ಬಿಡುಗಡೆ ಮಾಡಲಿದೆ.

  Janardhan Reddy Son Kireeti First Movie Title Announced As Junior

  ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದೆ. ಇದು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಬಹುದೊಡ್ಡ ಹಾಗೂ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ಇನ್ನೂ ಹಲವು ಸ್ಟಾರ್‌ಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ತೆಲುಗಿನ ರಾಕ್ ಸ್ಟಾರ್ ಅಂತಲೇ ಖ್ಯಾತಿ ಗಳಿಸಿರೋ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕುತ್ತಿದ್ದಾರೆ. 'ಬಾಹುಬಲಿ' ಸಿನಿಮಾದ ಕ್ಯಾಮರಾ ಮ್ಯಾನ್ ಕೆ ಸೆಂಥಿಲ್ ಕುಮಾರ್ ಈ ಸಿನಿಮಾದ ಛಾಯಾಗ್ರಾಹಕರು. ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್ ಅನ್ನು ಕಂಪೋಸ್ ಮಾಡಲಿದ್ದಾರೆ.

  English summary
  Janardhan Reddy Son Kireeti First Movie Title Announced As Junior, Know More.
  Thursday, September 29, 2022, 18:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X