For Quick Alerts
  ALLOW NOTIFICATIONS  
  For Daily Alerts

  ವಾಯ್ಸ್‌ನಲ್ಲೇ ಕಿಕ್ ಕೊಟ್ಟ ಜನಾರ್ಧನ ರೆಡ್ಡಿ ಪುತ್ರ 'ಜೂನಿಯರ್' ಕಿರೀಟಿ

  |

  ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರೋದು ಗೊತ್ತೇ ಇದೆ. ರಾಜಕೀಯ ಮುಖಂಡರ ಪುತ್ರರು ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ. ಹಾಗೇ ಜನಾರ್ಧನ ರೆಡ್ಡಿ ಪುತ್ರ ಕೂಡ ಕಿರೀಟಿ ಸಿನಿಮಾ ಕೂಡ ಅದ್ಧೂರಿಯಾಗಿಯೇ ಸೆಟ್ಟೇರಿತ್ತು.

  ಕಿರೀಟಿ ಸುಮ್ಮನೆ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ ಅನ್ನೋದು ಗೊತ್ತಾಗಿ ಹೋಗಿತ್ತು. ಸಿನಿಮಾ ಲಾಂಚ್ ಆದಾಗಲೇ ಕಿರೀಟಿ ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಿಕೊಂಡು ಬಂದಿದ್ದಾರೆ ಅನ್ನೋದು ಗೊತ್ತಾಗಿತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ 'ಜೂನಿಯರ್' ಸಿನಿಮಾ ರೆಡಿಯಾಗುತ್ತಿರುವುದರಿಂದ ಟಾಲಿವುಡ್ ದಿಗ್ಗಜರು ಅಖಾಡಕ್ಕಿಳಿದಿದ್ದಾರೆ.

  ಸದ್ಯ ಕಿರೀಟಿ ಟೈಟಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ಈ ವಿಡಿಯೋ ಬಗ್ಗೆನೇ ಎರಡೂ ಚಿತ್ರರಂಗದಲ್ಲೂ ಮಾತಾಡಿಕೊಳ್ಳುತ್ತಿದ್ದಾರೆ. ಕಿರೀಟಿ ಸಿನಿಮಾದ ಟೈಟಲ್ ಏನಿರಬಹುದು? ಮಾಸ್ ಟೈಟಲ್ ಇರಬಹುದಾ? ಕ್ಲಾಸ್ ಟೈಟಲ್ ಇರಬಹುದಾ? ಅನ್ನೋ ಕುತೂಹಲಕ್ಕೀಗ ತೆರೆಬಿದ್ದಿದೆ. ಟೈಟಲ್ ವಿಡಿಯೋ ರಿವೀಲ್ ಮಾಡುವ ಮೂಲಕ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

  ಕಿರೀಟಿ ಟೈಟಲ್ ಲಾಂಚ್ ವಿಡಿಯೋ ಸಿನಿ ಪ್ರಿಯರ ಗಮನ ಸೆಳೆದಿದೆ. 'ಜೂನಿಯರ್' ಟೀಸರ್‌ನಲ್ಲಿ ಕಿರೀಟಿ ವಾಯ್ಸ್ ಕೇಳಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹೀರೋಗೆ ಇರಬೇಕಾದ ವಾಯ್ಸ್ ಕಿರೀಟಿಯಲ್ಲಿದೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಕಿರೀಟಿ ಮಾಡಿರುವ ಡೈಲಾಗ್ ಡಿಲೇವರಿಗೆ ಪ್ರೇಕ್ಷಕರು ಪಿಧಾ ಆಗಿದ್ದಾರೆ. ವಿಶೇಷ ಅಂದ್ರೆ ಕಿರೀಟಿ ಕನ್ನಡ, ತೆಲುಗು ಮಾತ್ರವಲ್ಲದೇ ತಮಿಳಿನಲ್ಲೂ ಸ್ವತಃ ತಾವೇ ವಾಯ್ಸ್ ನೀಡಿರೋದು ಅಚ್ಚರಿ ಮೂಡಿಸಿದೆ.

  'ಜೂನಿಯರ್' ಅವತಾರದಲ್ಲಿಯೇ ಕಿರೀಟಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲೋಕೆ ಹರಸಾಹಸ ಮಾಡಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ನಿರ್ಮಾಣವಾಗುತ್ತಿದ್ದು ಚೊಚ್ಚಲ ಸಿನಿಮಾದ ಮೂಲಕವೇ ನಾಲ್ಕು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. 'ಜೂನಿಯರ್' ಸಿನಿಮಾದ ಶೂಟಿಂಗ್ ಈಗಾಗಲೇ ಭರ್ಜರಿಯಾಗಿ ನಡೆಯುತ್ತಿದ್ದು, ಬಿಗ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

  ಈ ಹಿಂದೆ 'ಮಾಯಾಬಜಾರ್' ಅನ್ನೋ ಸಿನಿಮಾವನ್ನು ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಮೊದಲ ಸಿನಿಮಾದಲ್ಲಿ ಕಿರೀಟಿಗೆ ಹೀರೊಯಿನ್ ಆಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಹಾಗೇ ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್ ಸೇರಿದಂತೆ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  Janardhan Reddy Son Kireeti Starrer Junior Title Launch Video

  'ಜೂನಿಯರ್' ಸಿನಿಮಾಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕೊಡುತ್ತಿದ್ದಾರೆ. 'ಬಾಹುಬಲಿ' ಖ್ಯಾತಿಯ ಕೆ. ಸೆಂಥಿಲ್ ಕುಮಾರ್ ಕ್ಯಾಮರಾ ವರ್ಕ್ ಇದೆ. ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ಸ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

  English summary
  Janardhan Reddy Son Kireeti Starrer Junior Title Launch Video, Know More.
  Saturday, October 1, 2022, 23:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X