ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ 'ಅಪ್ಪು' ಕುರಿತು ಪುಸ್ತಕ ಲೋಕಾರ್ಪಣೆ

Recommended Video

ಪುನೀತ್ ರಾಜ್ ಕುಮಾರ್ ಗೆ ಸಿಗಲಿದೆ ಬಿಗ್ Birthday Gift..! | puneeth rajkumar

ಖಾಸಗಿ ಕಂಪನಿಯಲ್ಲಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹವ್ಯಾಸಿ ಪತ್ರಕರ್ತರಾದ ಜನಾರ್ಧನ್ ರಾವ್ ಸಾಳಂಕೆ ಯವರು ಕನ್ನಡ ಚಿತ್ರರಂಗದ ಪವರ್ ಹೌಸ್ ಎಂದೇ ಖ್ಯಾತರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ವಿಶೇಷ ಪುಸ್ತಕ ಬರೆಯುತ್ತಿದ್ದಾರೆ.

ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬವಿದ್ದು, ಆ ದಿನಕ್ಕೆ ವಿಶೇಷ ಕೊಡುಗೆ ನೀಡಲಿದ್ದಾರೆ. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಪುಸ್ತಕ ಬರೆಯುತ್ತಿರುವುದು ಗಮನಾರ್ಹ.

ಅಪ್ಪು ಅವರ ಬಗ್ಗೆ ಕೇಳಿರದ ವಿಶೇಷ ವಿಷಯಗಳು ಮತ್ತು ಅತಿ ವಿರಳವಾದ ಫೋಟೋಗಳನ್ನು ಈ ಪುಸ್ತಕದಲ್ಲಿ ನೀವು ಕಾಣಬಹುದು. ಪುಸ್ತಕದ ಶೀರ್ಷಿಕೆ ಇನ್ನು ಅಂತಿಮವಾಗಿಲ್ಲ. ಮುಂಬರುವ ಅಪ್ಪು ಅವರ ಹುಟ್ಟುಹಬ್ಬದಂದು (17ನೇ ಮಾರ್ಚ್ 2020) ಈ ಪುಸ್ತಕ ಲೋಕಾರ್ಪಣೆ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ. ಸುಮಾರು 20 ವರ್ಷಗಳಿಂದಲೂ ಇವರು ಹವ್ಯಾಸಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Janardhana Rao Salanke Writing Book On Puneeth Rajkumar

ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು "ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್" ಎಂಬ ಪುಸ್ತಕವನ್ನ ಸಾಳಂಕೆಯವರು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಅನ್ನಪೂರ್ಣ ಪ್ರಕಾಶನ, 12ನೇ ಜುಲೈ 2018). ಸಾಳಂಕೆಯವರು ಡಾ.ವಿಷ್ಣುವರ್ಧನ್ ಅವರ ಬಗ್ಗೆ 4 ಪುಸ್ತಕ ಮತ್ತು ಡಾ.ಶಿವರಾಜ್ ಕುಮಾರ್ ಬಗ್ಗೆ 1 ಪುಸ್ತಕವನ್ನ ಬರೆದಿದ್ದಾರೆ.

Janardhana Rao Salanke Writing Book On Puneeth Rajkumar

ಇದರ ಹೊರತಾಗಿಯೂ ನಾಲ್ಕೈದು ಚಿತ್ರಗಳ ಮೇಕಿಂಗ್ ಬಗ್ಗೆ ವಿಶೇಷ ಪತ್ರಿಕೆಗಳನ್ನು ಹೊರತಂದಿದ್ದಾರೆ. 2009ರಲ್ಲಿ ಡಾ.ವಿಷ್ಣುವರ್ಧನ್ ಅವರ ಕೊನೆಯ ಸಂದರ್ಶನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತಿದೆ.

More from Filmibeat

English summary
Journalist Janardhana Rao Salanke writing book on Puneeth Rajkumar it will be released on Appu birthday (March 17).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X