»   » ಇದೇ ವಾರ ಚಿತ್ರಮಂದಿರಕ್ಕೆ ಬಂದು ಮಜಾ ಕೊಡ್ತಾನೆ ಜಾನಿ

ಇದೇ ವಾರ ಚಿತ್ರಮಂದಿರಕ್ಕೆ ಬಂದು ಮಜಾ ಕೊಡ್ತಾನೆ ಜಾನಿ

Posted By:
Subscribe to Filmibeat Kannada
ಇದೇ ವಾರ ಚಿತ್ರಮಂದಿರಕ್ಕೆ ಬಂದು ಮಜಾ ಕೊಡ್ತಾನೆ ಜಾನಿ | Filmibeat Kannada

'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಸಿನಿಮಾದ ನಂತರ ಮತ್ತೆ ದುನಿಯಾ ವಿಜಯ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಒಂದಾಗಿದ್ದರು. ಹಳೆ ಸಿನಿಮಾ ಫ್ಲೇವರ್ ನಲ್ಲಿಯೇ ಮತ್ತೊಂದು ಪಕ್ಕಾ ಕಾಮಿಡಿ ಸಿನಿಮಾ ಮೂಲಕ ಈ ಜೋಡಿ ಮತ್ತೆ ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ದುನಿಯಾ ವಿಜಯ್ ನಟನೆಯ ಹೊಸ ಸಿನಿಮಾ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ.

'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಪದ್ಮಾವತಿ ಆಗಿ ಕಾಣಿಸಿಕೊಂಡಿದ್ದಾರೆ. ಹಳೆ ಜಾನಿಗೆ ಹೊಸ ಪದ್ದು ಸಾಥ್ ನೀಡಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ಇಬ್ಬರ ಲುಕ್ ಸೂಪರ್ ಆಗಿದೆ. ರಚಿತಾ ಹಳೆಯ ಎಲ್ಲ ಸಿನಿಮಾಗಿಂತ ಹೆಚ್ಚು ಅಂದವಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡ್ರನ್ ಡ್ರೆಸ್ ಗಳನ್ನು ತೊಟ್ಟು ಬುಲ್ ಬುಲ್ ಬಳುಕಿದ್ದಾರೆ.

ದುನಿಯಾ ವಿಜಿಗೆ ಸಾಥ್ ನೀಡಿದ ಪವರ್ ಸ್ಟಾರ್

ಈ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಅಜನೀಶ್ ಲೋಕನಾಥ್ ಮತ್ತೊಮ್ಮೆ ತಮ್ಮ ವಿಭಿನ್ನ ಟ್ಯೂನ್ ಗಳ ಮೂಲಕ ಪದೇ ಪದೇ ಕೇಳುವ ಹಾಡುಗಳನ್ನು ನೀಡಿದ್ದಾರೆ. ಹೊಸ ಪದ್ಮಾವತಿ ಹಾಡು ರಚಿತಾ ರಾಮ್ ಅಭಿಮಾನಿಗಳ ಪೇವರೇಟ್ ಆಗಿದೆ. ಪುನೀತ್ ಒಂದು ಹಾಡನ್ನು ಹಾಡಿದ್ದಾರೆ. ಇನ್ನೊಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಈ ಮೂರು ಹಾಡುಗಳು ಈಗಾಗಲೇ ದೊಡ್ಡ ಜನಪ್ರಿಯತೆ ಗಳಿಸಿವೆ.

Jani Jani Yes Papa kannada movie will be releasing on this friday

ದುನಿಯಾ ವಿಜಯ್ ತಮ್ಮ ದುನಿಯಾ ಟಾಕೀಸ್ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಇದೇ ಶುಕ್ರವಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ದುನಿಯಾ ವಿಜಿ ಈಗ ವೀರ, ಧೀರ ಸಿಕ್ಸ್ ಪ್ಯಾಕ್ ರಾಮ

English summary
Kannada actor Duniya Vijay and Rachita Ram's 'Jani Jani Yes Papa' movie will be releasing on this friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X