ಪವರ್ ಸ್ಟಾರ್ ಜೊತೆ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ತೆಲುಗು ಡ್ಯಾನ್ಸ್ ಮಾಸ್ಟರ್ ಜಾನಿ

ತೆಲುಗಿನಲ್ಲಿ ಜಾನಿ ಮಾಸ್ಟರ್ ಬಹಳ ಬೇಡಿಕೆಯ ನೃತ್ಯ ಸಂಯೋಜಕ. ಜೂ ಎನ್ ಟಿ ಆರ್, ಅಲ್ಲು ಅರ್ಜುನ್, ರಾಮ್ ಚರಣ್ ಅಂತಹ ಟಾಪ್ ನಟರ ಜೊತೆ ಕೆಲಸ ಮಾಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕೊರಿಯೋಗ್ರಫರ್ ಕೂಡ ಹೌದು.

ಕನ್ನಡದಲ್ಲೂ ಪುನೀತ್ ರಾಜ್ ಕುಮಾರ್ ನಟಿಸಿದ್ದ 'ರಾಜಕುಮಾರ' ಚಿತ್ರದಲ್ಲಿ ಹಾಡೊಂದಕ್ಕೆ ನಿರ್ದೇಶಕರಾಗಿದ್ದರು. 'ಅಪ್ಪು ಡ್ಯಾನ್ಸ್....' ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಈ ಹಾಡಿನಲ್ಲಿ ಪುನೀತ್ ಡ್ಯಾನ್ಸ್ ಭರ್ಜರಿ ಆಗಿತ್ತು ಮತ್ತು ಅಭಿಮಾನಿಗಳಿಗೆ ಖುಷಿಯಾಗಿತ್ತು. ಅದಾದ ಬಳಿಕ 'ನಟಸಾರ್ವಭೌಮ' ಸಿನಿಮಾದ 'ಓಪನ್ ದಿ ಬಾಟಲ್.....' ಹಾಡಿನಲ್ಲೂ ಜಾನಿ ಮಾಸ್ಟರ್ ನಿರ್ದೇಶನ ಮಾಡಿದ್ದರು.

ಇದೀಗ, ಪುನೀತ್ ರಾಜ್ ಕುಮಾರ್ ಜೊತೆ ಮತ್ತೊಮ್ಮೆ ಜಾನಿ ಮಾಸ್ಟರ್ ಕೆಲಸ ಮಾಡ್ತಿದ್ದಾರೆ. ಯುವರತ್ನ ಸಿನಿಮಾದ ಹಾಡೊಂದಕ್ಕೆ ಜಾನಿ ಮಾಸ್ಟರ್ ಡೈರೆಕ್ಟ್ ಮಾಡ್ತಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಬಾರಿಸಲು ಸಜ್ಜಾಗುತ್ತಿದ್ದಾರೆ.

Jani Master Happy About Puneeth Rajkumar

ಈ ವಿಷಯವನ್ನು ಖುದ್ದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಯುವರತ್ನ ಸಿನಿಮಾ 'ಊರಿಗೊಬ್ಬ ರಾಜ' ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದು, ಈ ಹಾಡಿನ ಮೇಲೆ ಕುತೂಹಲ ಹೆಚ್ಚಿದೆ.

ಮೂರನೇ ಸಲ ಪುನೀತ್ ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡುತ್ತಿರುವ ಸಂತಸ ಹಂಚಿಕೊಂಡಿರುವ ಜಾನಿ ಮಾಸ್ಟರ್ ''ಕನ್ನಡದ ಪವರ್ ಸ್ಟಾರ್ ಜೊತೆ ಮತ್ತೆ ಕೆಲಸ ಮಾಡಲು ಖುಷಿಯಾಗ್ತಿದೆ. ಪೂರ್ವ ಅಭ್ಯಾಸ ಮುಗಿದಿದೆ. ಅದ್ಭುತವಾದ ತಯಾರಿ ಆಗಿದೆ. ಶೂಟಿಂಗ್ ಕೂಡ ಆರಂಭವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಪುನೀತ್ ಜೊತೆ, ಡಾಲಿ ಧನಂಜಯ್, ವಸಿಷ್ಠ ಸಿಂಹ, ನಾಯಕಿಯಾಗಿ ಸಯೇಶಾ ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

More from Filmibeat

English summary
Telugu Choreographer Jani Master expressed happy about puneeth rajkumar. he is working again with appu in yuvarathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X