For Quick Alerts
  ALLOW NOTIFICATIONS  
  For Daily Alerts

  ಜಪಾನ್‌ನಲ್ಲೂ 'ಕೆಜಿಎಫ್ 2' ಸಕ್ಸಸ್‌ ಬಗ್ಗೆನೇ ಟಾಕ್: ರಾಕಿ ಭಾಯ್ ಬರೆದ ದಾಖಲೆ ಗುಣಗಾನ!

  |

  'ಕೆಜಿಎಫ್ ಚಾಪ್ಟರ್ 2' ಮೂಲಕ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತ. ಇಲ್ಲಿವರೆಗೂ ಕೇವಲ ಪ್ರಾದೇಶಿಕ ಸಿನಿಮಾ ಲಿಸ್ಟ್‌ನಲ್ಲಿದ್ದ ಸ್ಯಾಂಡಲ್‌ವುಡ್ ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 'ಕೆಜಿಎಫ್ 2', '777 ಚಾರ್ಲಿ', 'ವಿಕ್ರಾಂತ್ ರೋಣ' ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದೆ.

  'ಕೆಜಿಎಫ್ ಚಾಪ್ಟರ್ 2' ವರ್ಲ್ಡ್‌ ವೈಡ್ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ್ದು ಗೊತ್ತೇ ಇದೆ. ಬಾಕ್ಸಾಫೀಸ್‌ ಮೇಲೆ 'ಕೆಜಿಎಫ್ 2' ಮಾಡಿದ ದಾಳಿಯನ್ನು ಕಂಡು ಇಡೀ ವಿಶ್ವವೇ ದಂಗಾಗಿ ಹೋಗಿತ್ತು. ಅತ್ತ ಬಾಕ್ಸಾಪೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಲೇ ಇತ್ತು. ಈಗ ಯಶ್ ಸಿನಿಮಾ 'ಕೆಜಿಎಫ್ 2' ಒಟಿಟಿಗೂ ಲಗ್ಗೆ ಇಟ್ಟಿದೆ. ಅಲ್ಲೂ ಅಬ್ಬರಿಸುತ್ತಿದೆ.

  ನಮ್ಮ ತಿರಂಗ ಭರವಸೆಯ ಸಂಕೇತ: ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಎಂದ ಯಶ್!ನಮ್ಮ ತಿರಂಗ ಭರವಸೆಯ ಸಂಕೇತ: ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಎಂದ ಯಶ್!

  ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರರಂಗದಲ್ಲಿ ಹೊಸ ಲ್ಯಾಂಡ್ ಮ್ಯಾರ್ಕ್ ಅನ್ನು ಸೃಷ್ಟಿ ಮಾಡಿದೆ. ಈ ಸಿನಿಮಾ ಈಗ ಭಾರತದ ಜನರಷ್ಟೇ ಅಲ್ಲ. ಜಪಾನ್‌ ಮಂದಿನೂ ಮಾತಾಡುತ್ತಿದ್ದಾರೆ. ಜಪಾನ್‌ ಪ್ರತಿಷ್ಠಿತ ಮ್ಯಾಗಜೀನ್‌ 'ಕೆಜಿಎಫ್ 2' ಸಿನಿಮಾ ಬಗ್ಗೆ ಸುದ್ದಿಯನ್ನು ಪ್ರಕಟಿಸಿದೆ.

  ಜಪಾನ್‌ನಲ್ಲಿ 'ಕೆಜಿಎಫ್ 2'

  ಜಪಾನ್‌ನಲ್ಲಿ 'ಕೆಜಿಎಫ್ 2'

  'ಕೆಜಿಎಫ್ ಚಾಪ್ಟರ್ 2' ಸ್ಯಾಂಡಲ್‌ವುಡ್‌ನ ಎರಡನೇ ಪ್ಯಾನ್ ಇಂಡಿಯಾ ಸಿನಿಮಾ. 'ಕೆಜಿಎಫ್ ಚಾಪ್ಟರ್ 1'ಗೆ ಸಿಕ್ಕ ಯಶಸ್ಸಿನ ಸೀಕ್ರೆಟ್‌ ಜಾಡನ್ನೇ ಹಿಡಿದು ಪಾರ್ಟ್ 2 ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದು ಗೊತ್ತೇ ಇದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗೆ ಸಿಕ್ಕಿದ ಸಕ್ಸಸ್ ಫುಲ್ ಜರ್ನಿಯನ್ನು ಜಪಾನ್ ಪ್ರತಿಕೆ ಕೂಡ ವರದಿ ಮಾಡಿದೆ. ಅಲ್ಲಿನ ಬುನ್‌ಶುನ್ ಎನ್ನುವ ಪತ್ರಿಕೆ 'ಕೆಜಿಎಫ್ 2' ಸಕ್ಸಸ್ ಜರ್ನಿಯನ್ನು ವರ್ಣಿಸಿದೆ. ಈ ಖುಷಿ ವಿಷಯವನ್ನು ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  2022: ಬಾಕ್ಸಾಫೀಸ್‌ನಲ್ಲಿ 'KGF 2' ನಂ. 1!2022: ಬಾಕ್ಸಾಫೀಸ್‌ನಲ್ಲಿ 'KGF 2' ನಂ. 1!

  RRR ಬಗ್ಗೆನೂ ಸುದ್ದಿ

  RRR ಬಗ್ಗೆನೂ ಸುದ್ದಿ

  2022ರಲ್ಲಿ ದಕ್ಷಿಣ ಭಾರತದ ಎರಡು ಸಿನಿಮಾಗಳು ಬೇಜಾನ್ ಸದ್ದು ಮಾಡಿದ್ದವು. ಅದುವೇ 'ಕೆಜಿಎಫ್ 2' ಹಾಗೂ 'RRR'. ನೂರು ಕೋಟಿ ದುಡಿದರೆ ಸಾಕು ಇನ್ನೇನು ಸಿನಿಮಾ ಬ್ಲಾಕ್‌ಬಸ್ಟರ್ ಎನ್ನುವ ಲೆಕ್ಕಾಚಾರವಿತ್ತು. ಅದನ್ನು ಸಾವಿರ ಕೋಟಿಗೆ ಮುಟ್ಟಿಸಿದ ಸಿನಿಮಾಗಳಿವು. ಜೂ. ಎನ್‌ಟಿಆರ್, ರಾಮ್‌ ಚರಣ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'RRR' ಕೂಡ ಬಾಕ್ಸಾಪೀಸ್‌ನಲ್ಲಿ 1150 ಕೋಟಿ ಕಲೆ ಹಾಕಿತ್ತು. ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ ಈ ವರ್ಷ ಸೌಂಡ್ ಮಾಡಿದ ಸಿನಿಮಾಗಳ ಬಗ್ಗೆ ಬುನ್‌ಶುನ್ ಪತ್ರಿಕೆ ವರದಿ ಮಾಡಿದೆ.

  5 ಕೋಟಿ ಜನರಿಂದ ವೀಕ್ಷಣೆ

  5 ಕೋಟಿ ಜನರಿಂದ ವೀಕ್ಷಣೆ

  ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಬಾಕ್ಸಾಪೀಸ್‌ನಲ್ಲಿ ₹1250 ಕೋಟಿಗೂ ಅಧಿಕ ಗಳಿಸಿದೆ. ಕೆಲವರು 'ಕೆಜಿಎಫ್ 2' ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ₹1198.20 ಕೋಟಿ ಎಂದು ಹೇಳಿದ್ದರೂ, ₹1250 ಕೋಟಿನೇ ಅಧಿಕೃತ ಎನ್ನುವಂತಾಗಿದೆ. ಬಾಕ್ಸಾಫೀಸ್ ಕಲೆಕ್ಷನ್ ಬಿಟ್ಟು ಈ ಸಿನಿಮಾ ಮತ್ತೊಂದು ದಾಖಲೆ ಮಾಡಿದೆ. ಭಾರತದಾದ್ಯಂತ 'ಕೆಜಿಎಫ್ 2' ಸಿನಿಮಾವನ್ನು ಸುಮಾರು 5 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ ಎನ್ನಲಾಗಿದೆ.

  ಯಶ್ 19ನೇ ಸಿನಿಮಾ ಬಗ್ಗೆ ಗೊಂದಲ

  ಯಶ್ 19ನೇ ಸಿನಿಮಾ ಬಗ್ಗೆ ಗೊಂದಲ

  'ಕೆಜಿಎಫ್ 2' ಸಕ್ಸಸ್ ಬಳಿಕ ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು ಅನ್ನುವ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಮ್ಯಾಸಿವ್ ಹಿಟ್ ಕೊಟ್ಟ ರಾಕಿಂಗ್ ಸ್ಟಾರ್ ಮುಂದಿನ ಬಗ್ಗೆ ಕುತೂಹಲ ಗರಿಗೆದರಿದೆ. ಆದರೆ, ಯಶ್ ಮಾತ್ರ 19ನೇ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ. ಇನ್ನೊಂದು ಕಡೆ ಯಶ್ ಮುಂದಿನ ಸಿನಿಮಾ ಅವರ ಹುಟ್ಟುಹಬ್ಬಕ್ಕೆ ಅನೌನ್ಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ 'ಕೆಜಿಎಫ್ 2' ಮೂಲಕ ದಾಖಲೆ ಬರೆದ ಯಶ್ ಮುಂದಿನ ಸಿನಿಮಾ ಬಗ್ಗೆ ಫ್ಯಾನ್ಸ್ ಕಾದು ಕೂತಿರೋದಂತೂ ನಿಜ.

  English summary
  Japan's Famous Publication Bunshun About Yash Starrer KGF Chapter 2, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X