KGF craze in Japan: ಟ್ರೆಂಡ್‌ ಆಯ್ತು ರಾಕಿ ಸುತ್ತಿಗೆ, ಮಾಸ್ಕ್.. ಸಲಾಂ ರಾಕಿಭಾಯ್‌ ಎಂದ ಜಪಾನಿಯರು

ಕನ್ನಡದ ಸೂಪರ್ ಹಿಟ್ KGF ಸರಣಿ ಈಗ ಜಪಾನ್‌ ದೇಶದಲ್ಲಿ ಭಾರೀ ಸದ್ದು ಮಾಡ್ತಿದೆ. ಇದು ನಮ್ಮದೇ ಸಿನಿಮಾ ಎನ್ನುವಂತೆ ಅಲ್ಲಿನ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದಾರೆ. ಅದು ಕರ್ನಾಟಕನಾ, ಜಪಾನಾ? ಎನ್ನುವಮಟ್ಟಿಗೆ ಅಲ್ಲಿ ರಾಕಿಭಾಯ್ ಅಲೆ ಎದ್ದಿದೆ. ಈಗಾಗಲೇ ಒಂದು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ KGF ಸರಣಿ ಸಿನಿಮಾಗಳು ಮುನ್ನುಗ್ಗುತ್ತಿವೆ.

ಪ್ರಶಾಂತ್ ನೀಲ್ ನಿರ್ದೇಶನದ KGF ಸರಣಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕದ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಸಿನಿಮಾ ಧೂಳೆಬ್ಬಿಸಿತ್ತು. ಎಲ್ಲರೂ ರಾಕಿಭಾಯ್ ಆರ್ಭಟ ನೋಡಿ ಫಿದಾ ಆಗಿದ್ದರು. ಇದೀಗ ಜಪಾನ್‌ನಲ್ಲೂ KGF ಮೇನಿಯಾ ಶುರುವಾಗಿದೆ. ಜುಲೈ 14ರಂದು ತೆರೆಗಪ್ಪಳಿಸಿದ ಸಿನಿಮಾ ಅಲ್ಲಿನ ಪ್ರೇಕ್ಷಕರ ಮನಗೆದ್ದಿದೆ. ಮೌತ್‌ ಟಾಕ್‌ನಿಂದ ನಿಧಾನವಾಗಿ ಸಿನಿಮಾ ಹೆಚ್ಚು ಹೆಚ್ಚು ಹೆಚ್ಚು ಜನರನ್ನು ಸೆಳೀತಿದೆ. ಸಲಾಂ ರಾಕಿಭಾಯ್ ಎನ್ನುವ ಹರ್ಷೋದ್ಘಾರ ಶುರುವಾಗಿದೆ.

Japanese say Salaam Rocky Bhai, Yashs KGF fever peaks in Japan

ಸಿನಿಮಾ ಚೆನ್ನಾಗಿದ್ದರೆ ಭಾಷೆ ಯಾವ್ದು? ಯಾವ ದೇಶದ ಸಿನಿಮಾ? ಕಲಾವಿದರು ಯಾರು? ಅನ್ನೋದು ಲೆಕ್ಕಕ್ಕೆ ಬರಲ್ಲ. ಜಪಾನ್ ದೇಶದಲ್ಲಿ KGF ಸಿನಿಮಾ ಸದ್ದು ಮಾಡುತ್ತಿರುವುದೇ ಅದಕ್ಕೆ ಉತ್ತಮ ಉದಾಹರಣೆ. ಸದ್ಯ 2ನೇ ವಾರ ಸಿನಿಮಾ ಜಪಾನ್‌ ದೇಶದ ಹಲವು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಟ್ರೆಂಡ್ ಆಯ್ತು ರಾಕಿ ಲುಕ್

KGF ಸಿನಿಮಾ ಜಪಾನ್‌ನಲ್ಲಿ ಎಷ್ಟರಮಟ್ಟಿಗೆ ಹವಾ ಸೃಷ್ಟಿಸಿದೆ ಅಂದ್ರೆ ಅಲ್ಲಿನ ಪ್ರೇಕ್ಷಕರು ರಾಕಿ ಲುಕ್‌ಗೆ ಮಾರುಹೋಗಿದ್ದಾರೆ. ರಾಕಿಭಾಯ್ ರೀತಿ ಸೂಟು ಬೂಟು ಧರಿಸಿ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಹಲವರು ಹೀಗೆ ಚಿತ್ರದಲ್ಲಿನ ಯಶ್ ಲುಕ್ ಟ್ರೈ ಮಾಡಿ ಪೋಸ್ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ರಾಕಿಯ ಆಯುಧ ಸುತ್ತಿಗೆ ಹಿಡಿದು ಕಾಣಿಸಿಕೊಂಡಿದ್ದಾರೆ. ಗನ್, ರೋಸ್ ಬೊಕ್ಕೆ ಹಿಡಿದು ದರ್ಶನ ಕೊಟ್ಟಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ರಾಕಿ, ಅಧೀರ, ವಾನರಂ ಫೇಸ್‌ ಮಾಸ್ಕ್

ಪ್ರಶಾಂತ್ ನೀಲ್ ಚಿತ್ರದಲ್ಲಿ ಒಂದಕ್ಕಿಂತ ಒಂದು ಪಾತ್ರವನ್ನು ಸೊಗಸಾಗಿ ತೋರಿಸಿದ್ದಾರೆ. ಒಬ್ಬೊಬ್ಬರ ಗೆಟಪ್‌ ಕೂಡ ಬಹಳ ವಿಭಿನ್ನವಾಗಿದೆ. ಸದ್ಯ ಜಪಾನೀಯರು ರಾಕಿ, ಅಧೀರ, ವಾನರಂ ಲುಕ್ ಫೇಸ್‌ಮಾಸ್ಕ್‌ಗಳನ್ನು ಧರಿಸಿ ಬಂದು ಸಿನಿಮಾ ನೋಡುತ್ತಿದ್ದಾರೆ. ಜಪಾನ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾ ಆರ್ಭಟ ಜೋರಾಗಿದೆ. ಇನ್ನು ಸಲಾಂ ರಾಕಿಭಾಯ್ ಸಾಂಗ್ ಕೂಡ ಈಗ ಜಪಾನಿಯರ ಹಾಟ್‌ ಫೇವರಿಟ್ ಆಗಿಬಿಟ್ಟಿದೆ.

Japanese say Salaam Rocky Bhai, Yashs KGF fever peaks in Japan

ರಾಕಿಭಾಯ್‌ಗೆ ಜೈಕಾರ

ಅಂದಹಾಗೆ ಹೊಂಬಾಳೆ ಸಂಸ್ಥೆ ಜಪಾನ್‌ ದೇಶದಲ್ಲಿ KGF ಸರಣಿ ಸಿನಿಮಾಗಳನ್ನು ರಿಲೀಸ್ ಮಾಡಿಲ್ಲ. ಅಲ್ಲಿನ ವಿತರಕರೇ ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ. ಸದ್ಯ ಥಿಯೇಟರ್‌ವೊಂದಲ್ಲಿ ರಾಕಿ ಫೇಸ್‌ಮಾಸ್ಕ್ ಧರಿಸಿದ ಪ್ರೇಕ್ಷಕರು ಸಲಾಂ ರಾಕಿಭಾಯ್‌ ಎನ್ನು ಜೈಕಾರ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಚ್ಚರಿ ಅಂದರೆ ಅಯ್ಯಪ್ಪ ಮಾಡಿದ್ದ ವಾನರಂ ಪಾತ್ರವನ್ನು ಜಪಾನೀಯರು ಮೆಚ್ಚಿಕೊಂಡಿದ್ದಾರೆ. ವಾನರಂ ಮಾಸ್ಕ್‌ಗಳು ಸಖತ್ ವೈರಲ್ ಆಗುತ್ತಿದೆ.

ಭರ್ಜರಿ ಕಲೆಕ್ಷನ್ ನಿರೀಕ್ಷೆ

10 ದಿನಕ್ಕೆ 1 ಕೋಟಿ ರೂ. ಕಲೆಕ್ಷನ್ ಎನ್ನುವುದು ನಮಗೆ ಕಡಿಮೆ ಇರಬಹುದು. ಆದರೆ ಕನ್ನಡ ಸಿನಿಮಾ ಬಗ್ಗೆ ಗಂಧಗಾಳಿ ಇಲ್ಲದ ದೇಶದಲ್ಲಿ KGF ಸರಣಿ ಚಿತ್ರಗಳಿಗೆ ಈಮಟ್ಟಿಗೆ ರೆಸ್ಪಾನ್ಸ್ ಸಿಗುತ್ತಿರುವುದು ಅಚ್ಚರಿ ಮೂಡಿಸುತ್ತದೆ. ಅಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕೂಡ ಕಮ್ಮಿ ಇದೆ. ಆದರೂ ಸಿನಿಮಾ ನೋಡಿದವರೆಲ್ಲಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ.

More from Filmibeat

English summary
Salaam Rocky Bhai: Yash's KGF craze hits Japan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X