For Quick Alerts
  ALLOW NOTIFICATIONS  
  For Daily Alerts

  ಬುಮ್ರಾ ಜೊತೆ ಇರುವುದು ಅನುಪಮನಾ? ಚರ್ಚೆಯಾಗುತ್ತಿದೆ ಜಸ್ಪ್ರಿತ್ ಹೊಸ ಪೋಸ್ಟ್

  |

  ಇತ್ತೀಚಿನ ದಿನಗಳಲ್ಲಿ ಸೌತ್ ಇಂಡಿಯಾದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸಖತ್ ಸುದ್ದಿಯಲ್ಲಿದ್ದಾರೆ. ಕಾರಣ ಭಾರತೀಯ ಕ್ರಿಕೆಟಿಗ, ಬೆಸ್ಟ್ ಬೌಲರ್ ಆಗಿರುವ ಜಸ್ಪ್ರಿತ್ ಬುಮ್ರಾ ಜೊತೆ ಅನುಪಮಾ ಹೆಸರು ಕೇಳಿ ಬರುತ್ತಿದೆ. ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಬಾರಿ ಸದ್ದು ಮಾಡುತ್ತಿದೆ.

  ಈ ಸುದ್ದಿ ನಡುವೆ ಈಗ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ಏನು ವಿಶೇಷ ಅಂತೀರಾ. ಬುಮ್ರಾ ಒಂದು ಹುಡುಗಿ ಜೊತೆ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಬುಮ್ರಾ ಹಾಕಿರುವ ಈ ಪೋಸ್ಟ್ ಈಗ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ ಹೆಗಲ ಮೇಲೆ ಕೈ ಹಾಕಿರುವ ಅವರ ಬೆನ್ನು ಮಾತ್ರ ಫೋಟೋಗೆ ಪೋಸ್ ನೀಡಿದೆ. ಬುಮ್ರಾ ಜೊತೆ ಇರುವ ಹುಡುಗಿಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.

  ಬುಮ್ರಾ ಜೊತೆ ಪ್ರೀತಿಯಲ್ಲಿ ಬಿದ್ರಾ 'ನಟಸಾರ್ವಭೌಮ' ನಾಯಕಿ? ಬುಮ್ರಾ ಜೊತೆ ಪ್ರೀತಿಯಲ್ಲಿ ಬಿದ್ರಾ 'ನಟಸಾರ್ವಭೌಮ' ನಾಯಕಿ?

  ಹಾಗಾಗಿಯೆ ಇದು ಅನುಪಮನಾ ಅಂತ ಅನೇಕರು ಕಮೆಂಟ್ಸ್ ಮಾಡುತ್ತಿದ್ದಾರೆ. ಈ ಫೋಟೋ ಜೊತೆಗೆ ಒಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ. "ಏನೆ ಆದರು ಈ ಭುಜ ಯಾವಾಗಲು ನನಗೆ ಸಹಾಯ ಮಾಡುತ್ತೆ" ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಕೆಲವರು ಅನುಪಮನಾ ಎಂದು ಹೇಳುತ್ತಿದ್ದರೆ ಇನ್ನು ಕೆಲವರು ಜಸ್ಪ್ರಿತ್ ತಾಯಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

  ಅನುಮಪಮಾ ಮತ್ತು ಜಸ್ಪ್ರಿತ್ ಇಬ್ಬರು ಟ್ವಿಟ್ಟರ್ ನಲ್ಲಿ ಇಬ್ಬರು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಬುಮ್ರಾ ಫಾಲೋ ಮಾಡುತ್ತಿರುವ 25 ಜನರಲ್ಲಿ ಅನುಪಮಾ ಕೂಡ ಒಬ್ಬರು. ಯಾವುದೆ ನಾಯಕಿಯರನ್ನು ಫಾಲೋ ಮಾಡದ ಬುಮ್ರಾ ಅನುಪಮಾ ಅವರನ್ನು ಫಾಲೋ ಮಾಡುವ ಜೊತೆಗೆ ಲೈಕ್ಸ್ ಮತ್ತು ಕಮೆಂಟ್ಸ್ ಮತ್ತು ರೀ ಟ್ವೀಟ್ ಮಾಡುತ್ತಾರೆ. ಅನುಪಮಾ ಕೂಡ ಬುಮ್ರಾ ಪೋಸ್ಟ್ ಗಳಿಗೆ ಲೈಕ್ಸ್ ಒತ್ತುತ್ತಾರೆ. ಹಾಗಾಗಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಈಗ ಬುಮ್ರಾ ಹಾಕಿರುವ ಫೋಟೋ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

  English summary
  Jasprit Bumrah uploads new picture with lady, Twitterati starts speculating on her identity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X