ಮದುವೆಯಾದ ಒಂದೇ ತಿಂಗಳಿಗೆ ಸಂಸಾರದಲ್ಲಿ ವಿರಸ, ಕಿಚ್ಚ ಸುದೀಪ್ ಜೊತೆ ನಟಿಸಿದ್ದ ಕನ್ನಡದ ನಾಯಕಿಯ ಬದುಕಿನಲ್ಲಿ ಬಿರುಗಾಳಿ..!
ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ಕಾಳಜಿ, ಗೌರವ ಮತ್ತು ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು ಸಹಜ. ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಮಾತು ಕೂಡ ಕೇಳಿ ಬರುವುದು ಸಹಜ.
ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ. ಇದಕ್ಕೆ ರನ್ಯಾ ರಾವ್ ಮತ್ತು ಜತಿನ್ ಹುಕ್ಕೇರಿ ಸದ್ಯದ ಉದಾಹರಣೆ. ಹೌದು, ಮಾಣಿಕ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರನ್ಯಾ, ಸದ್ಯ ಪರಪ್ಪನ ಅಗ್ರಹಾರದಲ್ಲಿ ತಮ್ಮ ಗತಕಾಲದ ದಿನಗಳನ್ನು ನೆನಪು ಮಾಡಿಕೊಂಡು ಕುಂತಿರಬಹುದು. ತಮ್ಮ ದುಬೈ ಪ್ರವಾಸದ ನೆನಪುಗಳನ್ನು ನೆನಪು ಮಾಡಿಕೊಳ್ಳುತ್ತಿರಬಹುದು.

ಇಂಥಾ ರನ್ಯಾ ಹೆಚ್ಚೇನು ಇಲ್ಲ. ಕಳೆದ ವರ್ಷ ಮದುವೆಯ ಬಂಧನಕ್ಕೊಳಗಾಗಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನವೆಂಬರ್ 27ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ, ಬ್ರೋಕರ್ ಮೂಲಕ ಪರಿಚಯವಾಗಿ ಮದುವೆಯಾದ ಇಬ್ಬರಿಗೂ ಸಂಸಾರದ ಸುಖ ಸಿಗಲೇ ಇಲ್ಲ. ಇಬ್ಬರ ನಡುವೆ ಪ್ರೀತಿ ಅರಳಲೇ ಇಲ್ಲ.
ಕೇವಲ ಒಂದೇ ತಿಂಗಳಿನಲ್ಲಿ ಮನಸ್ತಾಪ ಶುರುವಾಗಿತ್ತು. ರನ್ಯಾ ದುಬೈ ಪ್ರವಾಸ ಜತಿನ್ ಮನದಲ್ಲಿ ಅನುಮಾನದ ಬೀಜ ಬಿತ್ತಿತ್ತು. ಪ್ರಶ್ನೆ ಮಾಡಿದಾಗೆಲ್ಲ ರನ್ಯಾ ರಂಪ-ರಾಮಾಯಣ ಮಾಡಲು ಶುರು ಮಾಡಿದರು. ಸಂಧಾನಕ್ಕೆ ಇಬ್ಬರ ಮನೆ ಮಂದಿ ಪದೇ ಪದೇ ಪ್ರಯತ್ನ ಮಾಡಿದರು ಕೂಡ ಯಾವ ಪ್ರಯೋಜನವಾಗಲಿಲ್ಲ.
ಹೀಗಾಗಿಯೇ ಡಿವೋರ್ಸ್ ನೀಡುವ ಕುರಿತು ಜತಿನ್ ಆಲೋಚನೆ ಮಾಡುತ್ತಿದ್ದ ಸಮಯದಲ್ಲಿಯೇ ರನ್ಯಾ ನಟಿಯಲ್ಲ ಬದಲಿಗೆ ಚಿನ್ನದ ಕಳ್ಳಿ ಎನ್ನುವ ವಿಚಾರ ಜಗಜ್ಜಾಹೀರಾಯ್ತು. ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರನ್ಯಾ ಬಂಧನವಾಯ್ತು. ಇನ್ನು ರನ್ಯಾ ಅವರನ್ನು ಮದುವೆ ಮಾಡಿಕೊಂಡ ತಪ್ಪಿಗೆ ರನ್ಯಾ ರಾವ್ ಬಂಧನದ ನಂತರ ಜತಿನ್ ಹುಕ್ಕೇರಿಯವರನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಬಂಧನದ ಭೀತಿಯಿಂದ ಜತಿನ್ ಹುಕ್ಕೇರಿ ಹೈಕೋರ್ಟ್ ಮೆಟ್ಟಿಲನ್ನೇರಿದ್ದರು.
ಜತಿನ್ ಹುಕ್ಕೇರಿಯ ಪರ ವಾದ ಮಂಡಿಸಿದ್ದ ವಕೀಲ ಪ್ರಭುಲಿಂಗ್ ನಾವದಗಿ ಪತ್ನಿಯ ಮೇಲಿನ ಆರೋಪಕ್ಕೂ ಜತಿನ್‌ಗೂ ಸಂಬಂಧ ಇಲ್ಲ ಎಂದು ವಾದ ಮಾಡಿದ್ದರು. ಮದುವೆಯಾದ ಒಂದೇ ತಿಂಗಳಿಗೆ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ವಾದ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಕಾನೂನು ಪ್ರಕ್ರಿಯೆ ಇಲ್ಲದೇ ಬಂಧಿಸುವಂತೆ ಇಲ್ಲ ಎಂದು ಆದೇಶ ನೀಡಿತ್ತು. ಹೀಗೆ ರನ್ಯಾ ರಾವ್ ಅವರಿಂದ ಸಂಕಷ್ಟಕ್ಕೆ ಸಿಲುಕಿದ್ದ ಜತಿನ್ ಹುಕ್ಕೇರಿ ಈಗ ರನ್ಯಾ ರಾವ್ ವರ ಸಹವಾಸವೇ ಬೇಡ ಎನ್ನುವ ನಿರ್ಧಾರವನ್ನು ಮಾಡಿದ್ಧಾರೆ. ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜತಿನ್ ಹುಕ್ಕೇರಿ ಅವರ ಈ ನಡೆಯಿಂದ ಸಹಜವಾಗಿ ರನ್ಯಾ ರಾವ್ ಅವರ ಗಾಯದ ಮೇಲೆ ಈಗ ಬರೆ ಎಳೆದಂತಾಗಿದೆ. ಜಾಮೀನು ಪಡೆದು ಹೊರ ಬರಲು ಹರಸಾಹಸ ಪಡುತ್ತಿರುವ ರನ್ಯಾ ಅವರ ವ್ಯೆಯಕ್ತಿಕ ಬದುಕಿನಲ್ಲಿ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.
ಇನ್ನುಳಿದಂತೆ ಕಳೆದ ಮಾರ್ಚ್ 3ರಂದು ದುಬೈದಿಂದ ಬೆಂಗಳೂರಿಗೆ ಬಂದಿಳಿದ ರನ್ಯಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 14.80 ಕೆಜಿ ಚಿನ್ನ ರನ್ಯಾ ಅವರ ಬಳಿ ಪತ್ತೆಯಾದ ಹಿನ್ನೆಲೆ ಬಂಧಿಸಿದ್ದರು. ಸದ್ಯ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ರನ್ಯಾ ರಾವ್ ಅವರ ಜಾಮೀನು ಅರ್ಜಿ ವಜಾ ಗೊಳಿಸಿದ ಹಿನ್ನೆಲೆ ರನ್ಯಾ ಪರ ವಕೀಲರು ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.


Click it and Unblock the Notifications











