For Quick Alerts
  ALLOW NOTIFICATIONS  
  For Daily Alerts

  ಕಿಶೋರ್ ಕುತೂಹಲಕಾರಿ 'ಜಟ್ಟ' ಮುನ್ನೋಟ

  By ಮಲೆನಾಡಿಗ
  |

  ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಗಿರಿರಾಜ ಬಿ. ಎಂ ಅವರ ನಿರ್ದೇಶನದ ಬಹು ನಿರೀಕ್ಷೆಯ ಕನ್ನಡ ಚಿತ್ರ 'ಜಟ್ಟ' ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.

  ಕೇವಲ 30 ಸಾವಿರ ರುಗಳಲ್ಲಿ ಡಿಜಿಟಲ್ ಕೆಮೆರಾ ಬಳಸಿ 'ನವಿಲಾದವರು' ಎಂಬ ಚಿತ್ರ ನಿರ್ಮಿಸಿ, ನಿರ್ದೇಶಿಸಿ ಗೆದ್ದ ಗಿರಿರಾಜ್ ಅವರಿಗೆ ಒಳ್ಳೆ ಅವಕಾಶಗಳು ಹುಡುಕಿಕೊಂಡು ಬಂದಿತ್ತು. ಅಜಯ್ ರಾವ್, ಹರ್ಷಿಕಾ ಪೂಣಚ್ಚ ಅಭಿನಯದಲ್ಲಿ 'ಅದ್ವೈತ' ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸಿದರು.

  ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರ ನಿರ್ದೇಶಿಸುವ ಅವಕಾಶ ಒದಗಿ ಬಂದಿತು. ಮೋಹನ್ ಲಾಲ್ -ಪುನೀತ್ ರಾಜ್ ಅಭಿನಯದ ಮೈತ್ರಿ ಚಿತ್ರಕ್ಕೂ ಗಿರಿ ಆಕ್ಷನ್ ಕಟ್ ಹೇಳಿದರು.

  ಆದರೆ, ಚಿತ್ರರಂಗಕ್ಕೆ ಕಾಲಿಟ್ಟು ಐದು ವರ್ಷವಾಗುತ್ತಾ ಬಂದರೂ ಮೂರು ಚಿತ್ರಗಳಿಗೆ ಸ್ವತಂತ್ರ ನಿರ್ದೇಶಕ ಎನಿಸಿದರೂ ಒಂದು ಚಿತ್ರ ತೆರೆ ಕಾಣದಿದ್ದದ್ದು ಗಿರಿರಾಜ್ ಗೆ ನಿರಾಸೆ ಮೂಡಿಸಿತ್ತು.

  ಆದರೆ, ಈಗ ಜಟ್ಟ ಎಂಬ ವಿಶಿಷ್ಟ ಚಿತ್ರದ ತೆರೆ ಕಾಣಲು ಸಜ್ಜಾಗಿರುವುದು ಗಿರಿರಾಜ್ ಹಾಗೂ ತಂಡಕ್ಕೆ ಖುಷಿ ತಂದಿದೆ. ಈ ಹಿಂದೆ ನವಿಲಾದವರು ಚಿತ್ರದ ಪ್ರದರ್ಶನ ಹಾಗೂ ಸಂವಾದ ನಡೆಸಿ ಗಿರಿರಾಜ್ ಗೆ ಪ್ರೋತ್ಸಾಹ ನೀಡಿದ್ದ ಸಂವಾದ.ಕಾಂ ತಂಡ ಈಗ ಜಟ್ಟ ವಿಮರ್ಶಾ ಸ್ಪರ್ಧೆ ಆಯೋಜಿಸಿದೆ.ಸ್ಪರ್ಧೆ ವಿವರ ಮುಂದೆ ಓದಿ.

  ಗಿರಿರಾಜ್ ಅವರ ಪ್ರತಿಭೆ ಬಗ್ಗೆ ನಿಧಾನವಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್, ಗಂಧದಗುಡಿ, ಸಿನಿಲೋಕ ಮುಂತಾದ ತಾಣಗಳ ಮೂಲಕ ಓದಿ ತಿಳಿದಿರುವ ಕನ್ನಡ ಸದಭಿರುಚಿ ಪ್ರೇಕ್ಷಕರು 'ಜಟ್ಟ' ನನ್ನು ಸ್ವಾಗತಿಸಲು ತಯಾರಾಗಿದ್ದಾರೆ. ಜಟ್ಟ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

  'ಜಟ್ಟ’ ಕನ್ನಡ ಚಿತ್ರ ವಿಮರ್ಶೆ

  'ಜಟ್ಟ’ ಕನ್ನಡ ಚಿತ್ರ ವಿಮರ್ಶೆ

  ಅ.11ರಂದು ತೆರೆ ಕಾಣಲಿರುವ 'ಜಟ್ಟ' ಕನ್ನಡ ಚಿತ್ರದ ವಿಮರ್ಶಾ ಸ್ಪರ್ಧೆಯನ್ನು ಸಂವಾದ ಡಾಟ್ ಕಾಂ ಏರ್ಪಡಿಸಿದೆ.

  ಮೊದಲನೇ ಬಹುಮಾನ: 5000 ರೂಪಾಯಿಗಳು
  ಎರಡನೇ ಬಹುಮಾನ: 3000 ರೂಪಾಯಿಗಳು
  ಮೂರನೆಯ ಬಹುಮಾನ: 2000 ರೂಪಾಯಿಗಳು

  ನಿಬಂಧನೆಗಳು:
  ನಿಮ್ಮ ವಿಮರ್ಶೆ ಕೈ ಸೇರಬೇಕಾದ ದಿನಾಂಕ 20 ನೇ ಅಕ್ಟೋಬರ್ 2013.
  ವಿಮರ್ಶೆ 1500 ಪದಗಳನ್ನ ಮೀರಬಾರದು.
  ಬಹುಮಾನವನ್ನ ನವೆಂಬರ್ 1 ರಂದು ವಿತರಿಸಲಾಗುವುದು.

  ನಿಮ್ಮ ವಿಮರ್ಶೆಗಳನ್ನು ಕೆಳಗಿನ ಮಿಂಚೆಗಳಿಗೆ ಕಳಿಸಿ
  editor@samvaada.com, kiran@samvaada.com or arehalliravi@gmail.com

  ಸಂಪರ್ಕಿಸಿ: 9900439930, 97317 55966

  'ಜಟ್ಟ' ಅಂದರೇನು?

  'ಜಟ್ಟ' ಅಂದರೇನು?

  'ಜಟ್ಟ' ಅಂದರೇನು? ಎಂಬುದರ ಬಗ್ಗೆ ನಿರ್ದೇಶಕ ಗಿರಿರಾಜ್ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿದ್ದು ಹೀಗೆ: ಹಲವಾರು ಮಿತ್ರರು 'ಜಟ್ಟ' ಅನ್ನುವ ಪದದ ಅರ್ಥ ಏನು ಅಂತ ಹೇಳಿ ಅಂತ ಕೇಳಿಕೊಂಡಿದ್ದಾರೆ. ಅರ್ಥ ಅಂತ ಏನೂ ಇಲ್ಲ. ಇದು ಬುಡಕಟ್ಟಿನ ಜನಾಂಗದವರು ಇಟ್ಟುಕೊಳ್ಳುವ ಹೆಸರು. ನಮ್ಮ ಕಥೆ ಹೊನ್ನಾವರ, ಗೇರುಸೊಪ್ಪದ ಕಾಡಿನಲ್ಲಿ ನಡೆಯುವ ಕಥೆ. ಅಲ್ಲಿ ವಾಸಿಸುವ ಒಬ್ಬ ಬುಡಕಟ್ಟು (ಟ್ರೈಬಲ್) ವ್ಯಕ್ತಿಯ ಹೆಸರು. ಈ ಹೆಸರನ್ನೇ ಏನಕ್ಕೆ ಇಟ್ಟೆ ಮುಂದೆ ಓದಿ

  ಚಿತ್ರದ ಹೆಸರಿನ ಆಯ್ಕೆ

  ಚಿತ್ರದ ಹೆಸರಿನ ಆಯ್ಕೆ

  ನಮ್ಮ ಕನ್ನಡ ಸಿನಿಮ ಕನ್ನಡ ನಾಡಿನ ಏಕೀಕರಣದ ವಿಷಯವಾಗಿ ಅದ್ಯಾಕೊ ಸ್ವಲ್ಪ ಸೋಂಬೇರಿತನದಿಂದ ವರ್ತಿಸಿದೆ. ಶೇಕಡ 99% ರಷ್ಟು ಕಥಗಳು ಹಳೆ ಮೈಸೂರು ಪ್ರಾಂತ್ಯದ ಕಥೆಗಳೇ ಆಗಿವೆ.

  ಉಳಿದ ಕರ್ನಾಟಕಗಳ, ಕನ್ನಡಗಳ ಭಾಗಿತ್ವ ಗೌಣ ಅಂತನೇ ಹೇಳಬಹುದು. ಇದ್ದರು ಆ ಪಾತ್ರಗಳು ಒಂದಾ ವಿದೂಷಕ ಅಥವ ನಾಯಕನ ಕೈಯಲ್ಲಿ ಒದೆ ತಿನ್ನುವ ಖಳನ ಪಾತ್ರಗಳೇ ಆಗಿರುತ್ತವೆ. ಕನ್ನಡದ ಮೊದಲ ಕಾವ್ಯ 'ಕವಿರಾಜಮಾರ್ಗದಲ್ಲೇ' 'ಕನ್ನಡಗಳ್' 'ಭಾವಿಸಿದ ಜನಪದಂ' ಅಂತಂದು 'ವಸುಧಾ ವಲಯ ವಲೀನ ವಿಷದ ವಿಷಯ ವಿಷೇಶಂ' ಅಂತ ಮುಗಿಯುತ್ತದೆ. ಅಲ್ಲಿಗೆ ನಾವು ನಮ್ಮ ನಮ್ಮ ನೆಲದ ವಿಲೀನವಾಗಿರುವ ವಿಷದ ವಿಷಯ ಹುಡುಕಿ ಕನ್ನಡವನ್ನು ಒಂದು ಮಾಡಿ, ಪ್ರತಿಕನ್ನಡವೂ ಕನ್ನಡ ಎಂದು ಸಾರಬೇಕು ಅಂತ ಹೇಳುತ್ತಾನೆ. ಸ್ಸಾರಿ ಕುಯ್ಯದಿದ್ದು ಜಾಸ್ತಿ ಆಯಿತು

  ಚಿತ್ರದ ಕಥೆ, ಪಾತ್ರಗಳು

  ಚಿತ್ರದ ಕಥೆ, ಪಾತ್ರಗಳು

  ನಮ್ಮ ಚಿತ್ರದ ಕಥೆ ಗೇರುಸೊಪ್ಪದಲ್ಲಿ ನಡೆಯುತ್ತದೆ. ಒಬ್ಬ ವ್ಯಕ್ತಿಯ ಹೆಸರು, ಅವನ ಮೇಲೆ ಈ ಸಮಾಜ ಹೇರಿರುವ ಆರೋಪಿತ ವ್ಯಕ್ತಿತ್ವವನ್ನ ಬಿಂಬಿಸುತ್ತೆ. ಹೆಸರು ಹೇಳಿದ ಕೂಡಲೆ, ಇವನ ಊರು ಯಾವುದು, ಭಾಷೆ ಯಾವುದು, ಜಾತಿ ಯಾವುದು ಅಂತೆಲ್ಲ ಢಾಳಾಗಿ ಕಾಣಿಸುತ್ತೆ. ಆದ ಕಾರಣಕ್ಕೆ ಈ ಹೆಸರು. 'ಜಟ್ಟ' ಗೇರುಸೊಪ್ಪ ಕಾಡಿನ, ಬುಡಕಟ್ಟು ಜನಾಂಗದಲ್ಲಿ ಜನಿಸಿರುವ, ಇವತ್ತಿನ ಕಾಲಘಟ್ಟದಲ್ಲಿ ಇರುವ ಒಬ್ಬ ವ್ಯಕ್ತಿಯ ಹೆಸರು. ಇದು ಅವನ ಕಥೆ. ಜಟ್ಟ ಫಾರೆಸ್ಟ್ ಗಾರ್ಡ್ ಪಾತ್ರಧಾರಿಯಾಗಿ ಕಿಶೋರ್, ಸ್ತೀವಾದಿ ನಾಯಕಿ ಪಾತ್ರದಲ್ಲಿ ವಾಗ್ಲೆ ಸುಕೃತ ನಟಿಸಿದ್ದಾರೆ.

  ಜಟ್ಟ ಫಸ್ಟ್ ಲುಕ್

  ಬಹು ನಿರೀಕ್ಷಿತ ಜಟ್ಟ ಚಿತ್ರದ ಫಸ್ಟ್ ಲುಕ್ ನೋಡಿ.. ಚಿತ್ರದ ಸಂಭಾಷಣೆ ಮೊದಲ ನೋಟದಲ್ಲೇ ಸೆಳೆಯುತ್ತದೆ

  ಜಟ್ಟ ಹಾಡು

  ಕೆರೆದಂಡೆಯ ಬಳಿ ಕುಳಿತ ಕಿಶೋರ್ ಜಟ್ಟ ಹಾಡು ನೋಡಿ

  ಜಟ್ಟ ಟ್ರೇಲರ್ ನೋಡಿ

  ಪೃಥ್ವಿ, ಮೈನಾ ನಿರ್ಮಾಪಕರಿಂದ ಮತ್ತೊಂದು ಹೊಸ ಬಗೆ ಚಿತ್ರ ಜಟ್ಟ ಟ್ರೇಲರ್

  ಗಿರಿರಾಜ್

  ಗಿರಿರಾಜ್

  ಇಡೀ ವಿಶ್ವವನ್ನೇ ಕಾಡುತ್ತಿರುವ ಭಯೋತ್ಪಾದನೆಯನ್ನ(ಬಾಂಬ್ ಸ್ಪೋಟ) ಕಥಾವಸ್ತುವಾಗಿಟ್ಟುಕೊಂಡು, ಭಯೋತ್ಪಾದನೆಗೆ ಅಮಾಯಕರು ಹೇಗೆ ಬಲಿಯಾಗುತ್ತಾರೆ, ಕೆಲವು ದುಷ್ಟ ಶಕ್ತಿಗಳು ಅಮಾಯಕರನ್ನ ಹೇಗೆ ಭಯೋತ್ಪದನೆಗೆ ಪ್ರಚೋದಿಸುತ್ತವೆ ಎಂಬ ಅತ್ಯಂತ ಸೂಕ್ಷ್ಮವಾದ ವಿಷಯವನ್ನು ಸಮರ್ಥವಾಗಿ ನವಿಲಾದವರುವಿಡಿಯೋ ತುಣುಕು ಮುಂದೆ ನೋಡಿ) ಚಿತ್ರದಲ್ಲಿ ಗಿರಿರಾಜ್ ಹೇಳಿದ್ದಾರೆ.

  ವಿಶಿಷ್ಟ ಕಥೆಯುಳ್ಳ ಅದ್ವೈತ ತೆರೆಗೆ ಸಿದ್ಧವಿದೆ. ಈಗ ಕಿಶೋರ್ ಹಾಗೂ ಸುಕ್ತೃತಾ ಅವರಿಗೆ ಚಾಲೆಂಜಿಂಗ್ ಪಾತ್ರಗಳನ್ನು ನೀಡಿ 'ಜಟ್ಟ' ಚಿತ್ರವನ್ನು ತೆರೆ ತಂದಿದ್ದಾರೆ ಗಿರಿರಾಜ್

  ನವಿಲಾದವರು

  ಆಶ್ಲೆ ಅಭಿಲಾಶ್ ಸಂಗೀತ, ಕೆಎಂ ಪ್ರಕಾಶ್ ಎಡಿಟಿಂಗ್ ಇರುವ ಕ್ಸೇವಿಯರ್ ಛಾಯಾಗ್ರಹಣ ವಿರುವ 5 D DSLR ಕೆಮೆರಾದಲ್ಲಿ ಚಿತ್ರಿಸಲಾದ 30-35 ಸಾವಿರ ವೆಚ್ಚದ ನವಿಲಾದವರು ಚಿತ್ರ ಈಗ ಯೂ ಟ್ಯೂಬ್ ನಲ್ಲಿ ಸಿಗುತ್ತಿದೆ.

  ಅಚ್ತ್ಯುತ್ ಕುಮಾರ್, ಪ್ರದೀಪ್, ರೇವತಿ ಜತೆ ಮುಖ್ಯ ಪಾತ್ರದಲ್ಲಿ ಗಿರಿರಾಜ್ ಕಾಣಿಸಿಕೊಂಡಿದ್ದಾರೆ.

  ಹಂಸಲೇಖ, ಶಶಾಂಕ್ ಸಹಾಯಕರಾಗಿದ್ದ ಗಿರಿರಾಜ್ ಅವರು ರಂಗಕರ್ಮಿಯಾಗಿದ್ದು ಚಿತ್ರಕರ್ಮಿಯಾಗಿ ಬೆಳೆಯುತ್ತಿದ್ದಾರೆ.

  English summary
  Jatta is a Kannada action thriller film written and directed by B M Giriraj, starring Kishore Kumar and Sukurtha Wagle. The film is produced by Omkar Movies. Jatta movie set to release on Oct 11, 2013. Samvaada Dot Com presents 'JATTA' movie review competition. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X