twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದಲ್ಲಿ ನಡೆದ ಘಟನೆಗೆ ತಲೆತಗ್ಗಿಸಿದ ಚಿತ್ರಸಾಹಿತಿ ಜಾವೇದ್ ಅಖ್ತರ್

    |

    ಜಾವೆದ್ ಅಖ್ತರ್ ಭಾರತದ ಖ್ಯಾತ ಚಿತ್ರ ಸಾಹಿತಿ. ಮೂರು ದಶಕದಿಂದ ಹಿಂದಿ ಸಿನಿಮಾಗಳಿಗೆ ಸಾಹಿತ್ಯ ಒದಗಿಸಿರುವ ಜಾವೇದ್ ಅಖ್ತರ್ ಅಸಂಖ್ಯ-ಅಸಂಖ್ಯ ಎವರ್‌ಗ್ರೀನ್ ಹಾಡುಗಳನ್ನು ನೀಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ತುಸು ಹೆಚ್ಚೆ ಚಿಂತಿತರಾಗಿರುವ ಜಾವೇದ್ ಅಖ್ತರ್, ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಪ್ರತಿಕ್ರಿಯೆಗಳಿಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

    ಕರ್ನಾಟಕದಲ್ಲಿ ನಡೆದಿರುವ ಘಟನೆಯೊಂದು ಜಾವೆದ್ ಅಖ್ತರ್ ಅವರ ಗಮನಸೆಳೆದಿದ್ದು, ಕರ್ನಾಟಕದಲ್ಲಿ ನಡೆದಿರುವ ಘಟನೆಯಿಂದ ತಲೆತಗ್ಗಿಸುವಂತಾಗಿದೆ ಎಂದು ಹಿರಿಯ ಜಾವೇದ್ ಅಖ್ತರ್ ಹೇಳಿದ್ದಾರೆ.

    ಕ್ರೇನ್‌ಗಳನ್ನು ಬಳಸಿ ಪ್ರತಿಮೆ ಧ್ವಂಸ

    ಕ್ರೇನ್‌ಗಳನ್ನು ಬಳಸಿ ಪ್ರತಿಮೆ ಧ್ವಂಸ

    ನಿರ್ಮಿತವಾಗಿದ್ದ ಏಸುಕ್ರಿಸ್ತನ ಪ್ರತಿಮೆಯನ್ನು ಪೊಲೀಸರ ಸಮಕ್ಷಮದಲ್ಲಿ ಕ್ರೇನ್‌ಗಳು ಬಂದು ಕೆಡವಿ ಕ್ರಿಸ್ತನ ಪ್ರತಿಮೆ ಹೊತ್ತೊಯ್ದ ಘಟನೆ ರಾಜ್ಯದಲ್ಲಿ ನಡೆದಿತ್ತು. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಘಟನೆಯ ಬಗ್ಗೆ ಜಾವೇದ್ ಅಖ್ತರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ''ನಾನು ದೇವರ ನಂಬುವುದಿಲ್ಲ, ಆದರೆ ಇದು ನಾಚಿಕೆಗೇಡು''

    ''ನಾನು ದೇವರ ನಂಬುವುದಿಲ್ಲ, ಆದರೆ ಇದು ನಾಚಿಕೆಗೇಡು''

    ''ನಾನು ದೇವರ ನಂಬದವ ಆದರೆ ಕರ್ನಾಟಕ ಸರ್ಕಾರದ ಆದೇಶದಂತೆ ಏಸು ಕ್ರಿಸ್ತನ ಪ್ರತಿಮೆಯನ್ನು ಕ್ರೇನ್‌ನಲ್ಲಿ ಉರುಳಿಸಿರುವುದು ಭಾರತೀಯನಾಗಿ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ'' ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.

    ದೇವನಹಳ್ಳಿಯ ಸಣ್ಣ ಗುಡ್ಡ ಬಳಿ ಏಸು ಪ್ರತಿಮೆ

    ದೇವನಹಳ್ಳಿಯ ಸಣ್ಣ ಗುಡ್ಡ ಬಳಿ ಏಸು ಪ್ರತಿಮೆ

    ಬೆಂಗಳೂರು ಸಮೀಪದ ದೇವನಹಳ್ಳಿಯ ಸಣ್ಣ ಗುಡ್ಡ ಎಂಬಲ್ಲಿ ಏಸು ಕ್ರಿಸ್ತನ ಪ್ರತಿಮೆಯನ್ನು ಇತ್ತೀಚೆಗೆ ಕೆಡವಲಾಯಿತು. ಪೋಲೀಸರ ಸಕ್ಷಮದಲ್ಲಿ ಕೆಲವು ಕ್ರೇನ್‌ಗಳನ್ನು ಕರೆಸಿ ಕ್ರಿಸ್ತನ ಪ್ರತಿಮೆಯನ್ನು, ಶಿಲುಬೆಗಳನ್ನು ಹೊಡೆದು ಉರುಳಿಸಲಾಯಿತು.

    ವಿಶ್ವ ಹಿಂದೂ ಪರಿಷತ್ ಒತ್ತಾಯ

    ವಿಶ್ವ ಹಿಂದೂ ಪರಿಷತ್ ಒತ್ತಾಯ

    ದೊಡ್ಡಸಾಗರಹಳ್ಳಿ ಬಳಿಯ ಸಣ್ಣ ಗುಡ್ಡದ ಮೇಲೆ ನಿರ್ಮಿಸಲಾಗಿರುವ ಏಸು ಪ್ರತಿಮೆಯನ್ನು ತೆರವು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ ಸದಸ್ಯರು ಒತ್ತಾಯಿಸಿದ್ದರು. ಅಂತೆಯೇ ಜಿಲ್ಲಾಡಳಿತ ಸಹ ತೆರವಿಗೆ ಸೂಚನೆ ನೀಡಿತ್ತು. ಹಾಗಾಗಿ ಪ್ರತಿಮೆಯನ್ನು ಕೆಡವಲಾಗಿದೆ.

    English summary
    Poet Javed Akthar ashamed of incident happen in Bengaluru. In Devanahalli Jesus Christ statue vandalized by using cairns.
    Saturday, March 7, 2020, 17:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X