ಜವಾನ್ ಚಿತ್ರದಿಂದ ರಕ್ಷಿತ್ ಶೆಟ್ಟಿ ಸಿನಿಮಾಗೆ ಹೊಡೆತ? ಕನ್ನಡಿಗರೇ ಎಚ್ಚರ ಎಂದ ನೆಟ್ಟಿಗರು!
ಇಂದು ( ಜುಲೈ 10 ) ಬೆಳಗ್ಗೆ 10.30ಕ್ಕೆ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾ ಜವಾನ್‌ನ ಟ್ರೈಲರ್ ಅನ್ನು ಪ್ರಿವ್ಯೂ ಎಂಬ ಹೆಸರಿನ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಟ್ರೈಲರ್‌ನಲ್ಲಿ ಆರಂಭದಿಂದ ಅಂತ್ಯದವರೆಗೂ ಗೂಸ್‌ಬಂಪ್ಸ್ ಮೂಡುವಂತಹ ಆಕ್ಷನ್ ದೃಶ್ಯಗಳ ಭರ್ಜರಿ ರಸದೌತಣವನ್ನು ನಿರ್ದೇಶಕ ಅಟ್ಲಿ ಕಟ್ಟಿಕೊಟ್ಟಿದ್ದು, ಸಿನಿ ರಸಿಕರು ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇನ್ನು ಈ ಟ್ರೈಲರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭಗೊಂಡಿದ್ದು, ನೆಟ್ಟಿಗರು ಟ್ರೈಲರ್‌ನಲ್ಲಿರುವ ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಚರ್ಚಿಸುತ್ತಿದ್ದು ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಜವಾನ್ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಇಂದು ಕೇವಲ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಮಾತ್ರ ಈ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಕನ್ನಡ ಹಾಗೂ ಮಲಯಾಳಂ ವರ್ಷನ್ ಬರಲಿದೆ ಎಂದು ಕಾದಿದ್ದ ಸಿನಿ ರಸಿಕರಿಗೆ ನಿರಾಸೆ ಮೂಡಿದೆ.

ಈ ನಿರಾಸೆಯ ಕುರಿತೂ ಸಹ ಕನ್ನಡ ಹಾಗೂ ಮಲಯಾಳಂ ಸಿನಿ ರಸಿಕರು ಟ್ವೀಟ್ ಮಾಡಿದ್ದು ಆದಷ್ಟು ಬೇಗ ತಮ್ಮ ಭಾಷೆಯಲ್ಲಿಯೂ ಜವಾನ್ ಟ್ರೈಲರ್ ಬಿಡುಗಡೆ ಮಾಡುವಂತೆ ಬರೆದುಕೊಂಡಿದ್ದಾರೆ. ಇನ್ನು ಕೆಲ ಕನ್ನಡ ಸಿನಿ ರಸಿಕರು ಈ ಕುರಿತು ಟ್ವೀಟ್ ಮಾಡುತ್ತಿದ್ದು, ಜವಾನ್‌ನಿಂದ ಕನ್ನಡ ಚಿತ್ರಗಳಿಗೆ ಪೆಟ್ಟ ಬೀಳಬಹುದು ಎಚ್ಚರ ಎಂದು ಬರೆದುಕೊಳ್ಳುತ್ತಿದ್ದಾರೆ.
ಹೌದು, ಜವಾನ್ ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಗೊಳ್ಳಲಿದೆ. ಇದಕ್ಕೂ ಸರಿಯಾಗಿ ವಾರದ ಹಿಂದೆ ಅಂದರೆ ಸೆಪ್ಟೆಂಬರ್ 1ಕ್ಕೆ ಕನ್ನಡದ ಬಹು ನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ತೆರೆಗೆ ಬರಲಿದೆ. ಹೀಗಾಗಿ ಜವಾನ್ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೇಲೆ ಪ್ರಭಾವ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಕನ್ನಡ ಸಿನಿ ರಸಿಕರು ಜವಾನ್ ಚಿತ್ರ ಕನ್ನಡದಲ್ಲಿಯೂ ಸಹ ಬಿಡುಗಡೆಗೊಳ್ಳುತ್ತಿಲ್ಲ. ಇದು ಸರಿಯಲ್ಲ, ಎಲ್ಲರೂ ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ಬೆಂಬಲಿಸಿ, ಕನ್ನಡ ಚಿತ್ರವನ್ನು ಉಳಿಸಿ ಎಂದು ಈಗಲೇ ಎಚ್ಚರಿಸಿದ್ದಾರೆ.
ಇನ್ನು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಹ ಬಹು ನಿರೀಕ್ಷಿತ ಚಿತ್ರವಾಗಿದ್ದು, ತುಂಬಾ ಹಿಂದಿನಿಂದ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿದ್ದು, ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕವಲು ದಾರಿ ಚಿತ್ರಗಳ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್ 1ರಂದು ಮೊದಲ ಭಾಗ 'ಪಾರ್ಟ್ ಎ' ಬಿಡುಗಡೆಯಾಗಲಿದ್ದು, ಎರಡನೇ ಭಾಗ 'ಪಾರ್ಟ್ ಬಿ' ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ.


Click it and Unblock the Notifications











