ನಟ ಶೋಭನ್ ಬಾಬು ಹಾಗೂ ಜಯಲಲಿತ ಮದುವೆ ವಿಚಾರ ವೈರಲ್

By Pavithra

ತಮಿಳುನಾಡಿನ ಅಮ್ಮ ಜಯಲಲಿತ ಸಾವನ್ನಪ್ಪಿ ವರ್ಷಗಳೇ ಕಳೆದರು ಕೂಡ ಇಂದಿಗೂ ತಮಿಳುನಾಡಿನ ಅಮ್ಮನ ವಿಚಾರಗಳು ಮತ್ತೆ ಮತ್ತೆ ಸದ್ದು ಮಾಡುತ್ತಲೇ ಇದೆ. ಖ್ಯಾತ ನಟ ಶೋಭನ್ ಬಾಬು ಹಾಗೂ ಜಯಲಲಿತ ಅವರ ಮದುವೆ ಆಗಿತ್ತು. ಇಬ್ಬರಿಗೂ ಒಂದು ಗಂಡು ಮಗುವಿತ್ತು ಅನ್ನೋ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗ

ಶೋಭನ್ ಬಾಬು ಹಾಗೂ ಜಯಲಲಿತ ತಮಗಿದ್ದ ಗಂಡು ಮಗುವನ್ನು ವಸಂತಮಣಿ ಎಂಬ ಮಹಿಳೆಗೆ ದತ್ತು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸದ್ಯ ನೋಂದಣಿ ಪತ್ರ ಎಲ್ಲೆಡೆ ವೈರಲ್ ಆಗಿದೆ. ಇತ್ತೀಚೆಗಷ್ಟೇ ಜೈ ಕೃಷ್ಣಮೂರ್ತಿ ಅನ್ನೋ ವ್ಯಕ್ತಿ ನಾನು ಜಯಲಲಿತ ಹಾಗೂ ಶೋಭನ್ ಬಾಬು ಅವರ ಪುತ್ರ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ರೀತಿ ಬೆಂಗಳೂರು ಮೂಲದ ಅಮೃತಾ ಎಂಬ ಮಹಿಳೆ ಈ ಹಿಂದೆ ನಾನು ಜಯಲಲಿತ ಹಾಗೂ ಶೋಭನ್ ಬಾಬು ಮಗಳು ಎಂದು ಕೋರ್ಟ್ ಮೊರೆ ಹೋಗಿದ್ದರು.

Jayalalitha and actor shobhan babu marriage cirtificate viral

ಜಯಲಲಿತ ಮತ್ತು ಶೋಭನ್ ಬಾಬು ಅವರಿಗೆ ಮದುವೆಯಾಗಿತ್ತು ಅನ್ನೋ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಜಯಲಲಿತ ಅವರಿಗೆ ಸಿನಿಮಾ ಚಿತ್ರೀಕರಣವೊಂದರಲ್ಲಿ ವಸಂತಮಣಿ ಅವರ ಪರಿಚಯವಾಗಿದ್ದು ನಂತರ ಅವರಿಗೆ ಮಗುವನ್ನ ದತ್ತು ನೀಡಿದ್ದಾರೆ ಅನ್ನೋ ವಿಚಾರಗಳು ಕೇಳಿ ಬರುತ್ತಿದೆ. ಮದುವೆಯ ನೋಂದಣಿ ಪತ್ರದಲ್ಲಿ ಜಯಲಲಿತ, ಶೋಭನ್ ಬಾಬು ಹಾಗೂ ವಸಂತಮಣಿಯವರ ಸಹಿ ಹಾಗೂ ಭಾವಚಿತ್ರಗಳಿವೆ. 15-02-1986 ತಾರೀಖಿನಂದು ತಮಿಳುನಾಡಿನಲ್ಲಿರುವ ಈರೋಡಿನ ಸುಭ್ರಮಣಿಯನ್ ಎಂಬ ಸ್ಟಾಂಪ್ ವೆಂಡರ್ ನೀಡಿರುವ ಮೂರು ರೂಪಾಯಿ ಮುಖಬೆಲೆಯ ಸ್ಟಾಂಪ್ ಪೇಪರ್ ಮೇಲೆ ಮದುವೆ ನೋಂದಣಿ ವಿವರಗಳು ತಮಿಳು ಭಾಷೆಯಲ್ಲಿ ಮುದ್ರಿಸಲ್ಪಟ್ಟಿವೆ.

Jayalalitha and actor shobhan babu marriage cirtificate viral

ಚೆನ್ನೈನ ಪಾರ್ಟಿವೊಂದರಲ್ಲಿ ಜಯಲಲಿತ ಶೋಭನ್ ಬಾಬು ಅವರನ್ನ ಭೇಟಿ ಮಾಡಿರುತ್ತಾರೆ. ನಂತರದ ದಿನಗಳಲ್ಲಿ 'ಡಾಕ್ಟರ್ ಬಾಬು' ಹಾಗೂ 'ಗೂಡಾಚಾರಿ 116' ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಈ ಸಮಯದಲ್ಲಿ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು ಅನ್ನೂ ಸುದ್ದಿಗಳು ಗಾಸಿಪ್ ಆಗಿ ಹರಿದಾಡಿತ್ತು. ಎಲ್ಲವೂ ಅಂತೆ ಕಂತೆ ಸುದ್ದಿಗಳು ಅನ್ನುವಾಗಲೇ ಮದುವೆಯ ನೋಂದಣಿ ಪತ್ರ ವೈರಲ್ ಆಗ್ತಿದೆ.

More from Filmibeat

English summary
Jayalalitha and actor shobhan babu marriage cirtificate goes viral on social networking site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X