ತಮಿಳುನಾಡು 'ಅಮ್ಮ'ನಿಗಾಗಿ ಸಿನಿತಾರೆಯರು ಪ್ರಾರ್ಥನೆ
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಹೃದಯಾಘಾತವಾದ ಹಿನ್ನಲೆ, ಇಡೀ ತಮಿಳುನಾಡು ಆತಂಕದಲ್ಲಿ ಮುಳುಗಿದೆ.
ಇನ್ನೂ 'ಅಮ್ಮ' ಆದಷ್ಟೂ ಬೇಗ ಚೇತರಿಸಿಕೊಳ್ಳಲಿ. ಮತ್ತೆ ರಾಜ್ಯದ ರಾಜಕಾರಣಕ್ಕೆ ಮರಳಲಿ ಅಂತ, ತಮಿಳು ಇಂಡಸ್ಟ್ರಿಯ ಸಿನಿ ತಾರೆಯರು ಪ್ರಾರ್ಥನೆ ಮಾಡುತ್ತಿದ್ದಾರೆ.[ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಹೃದಯಾಘಾತ]
ಕೆಲವರು ತಮ್ಮ ಚಿತ್ರಗಳ ಶೂಟಿಂಗ್ ನಿಲ್ಲಿಸಿದ್ದರೇ, ಮತ್ತೆ ಕೆಲವರು ಆಸ್ವತ್ರೆ ಬಳಿ ಭೇಟಿ ಕೊಟ್ಟು ಅಮ್ಮನ ಆರೋಗ್ಯ ವಿಚಾರಿಸುತ್ತಿದ್ದಾರೆ. ತಮಿಳುನಾಡು 'ಅಮ್ಮ'ನ ಬಗ್ಗೆ ಟ್ವೀಟ್ ಮೂಲಕ ಯಾವೆಲ್ಲಾ ಕಾಲಿವುಡ್ ಸ್ಟಾರ್ ಗಳು ಪ್ರಾರ್ಥಸುತ್ತಿದ್ದಾರಂತ ಇಲ್ಲಿದೆ ನೋಡಿ....

ಶರತ್ ಕುಮಾರ್
''ನಮ್ಮೆಲ್ಲರ ಪ್ರೀತಿಯ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಆದಷ್ಟೂ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ''

ಚಿಯಾನ್ ವಿಕ್ರಮ್
''ಪ್ರೀತಿಯ ಮುಖ್ಯಮಂತ್ರಿ ಜಯಲಲಿತಾ ಅವರು ಆದಷ್ಟೂ ಬೇಗ ಚೇತರಿಸಿಕೊಳ್ಳಲಿ''

ಗೌತಮಿ
''ಅಮ್ಮ ಚೇತರಿಸಿಕೊಳ್ಳಲಿ ಎಂದು ಹೃದಯಪೂರ್ವಕವಾಗಿ ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇನೆ. ಜಯಲಲಿತಾ ಅವರ ಮೇಲೆ ಆ ದೇವರ ಅನುಗ್ರಹವಿರಲಿ''

ತ್ರಿಷಾ
''ಪ್ರಾರ್ಥಸಿ''

ಆರ್ಯ
''ಆದಷ್ಟೂ ಬೇಗ ನಮ್ಮ ಮುಖ್ಯಮಂತ್ರಿ ಜಯಲಲಿತಾ ಅವರು ಚೇತರಿಸಿಕೊಳ್ಳಲಿ. ದಯವಿಟ್ಟು ಅಮ್ಮನ ಆರೋಗ್ಯದ ಬಗ್ಗೆ ಯಾವುದೇ ಊಹಾಪೋಹಗಳನ್ನ ಹರಡಿಸಬೇಡಿ''

ನಿಕ್ಕಿ ಗಿರ್ಲಾನಿ
''ಆದಷ್ಟೂ ಬೇಗ 'ಅಮ್ಮ' ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ, ಪ್ರಾರ್ಥಸಿ''

ಸಾಯಿ ಧನ್ಸಿಕಾ
''ಅಮ್ಮನಿಗಾಗಿ ಪ್ರಾರ್ಥಸಿ''

ಲಕ್ಷ್ಮಿ ರೈ
''ಅಮ್ಮನ ಆರೋಗ್ಯದಲ್ಲಿ ಒಂದು ಪವಾಡ ನಡೆಯಲಿದೆ ಎಂಬ ಭರವಸೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಮ್ಮನಿಗಾಗಿ ಪ್ರಾರ್ಥಸಿ''

ರಾಧಿಕಾ ಶರತ್ ಕುಮಾರ್
''ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ತುಂಬಾ ಬೇಸರ ತಂದಿದೆ. ನಮ್ಮ ಪ್ರೀತಿಯ ಮುಖ್ಯಮಂತ್ರಿ ಅವರ ಆರೋಗ್ಯ ಚೇತರಿಸಲಿ ಎಂದು ಪ್ರಾರ್ಥಸಿ''


Click it and Unblock the Notifications











