twitter
    For Quick Alerts
    ALLOW NOTIFICATIONS  
    For Daily Alerts

    'ಅಮ್ಮ'ನ ಅಗಲಿಕೆಗೆ ಕಂಬನಿ ಮಿಡಿದ ಸಿನಿ ತಾರೆಯರು

    By Bharath Kumar
    |

    ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ಚಲನಚಿತ್ರ ನಟಿ ಜೆ ಜಯಲಲಿತಾ ಅವರ ಅಗಲಿಕೆಯಿಂದ ಇಡೀ ಚಿತ್ರರಂಗವೇ ದುಃಖದ ಸಾಗರದಲ್ಲಿ ಮುಳುಗಿದೆ.

    ಕೇವಲ ತಮಿಳು ಇಂಡಸ್ಟ್ರಿ ಮಾತ್ರವಲ್ಲ, ಸ್ಯಾಂಡಲ್ ವುಡ್, ಟಾಲಿವುಡ್ ಹಾಗು ಬಾಲಿವುಡ್ ಕಲಾವಿದರು ಜಯಲಲಿತಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.[ಜನರ ಪ್ರಾರ್ಥನೆ ಫಲಿಸಲಿಲ್ಲ, 'ಅಮ್ಮ' ಜಯಲಲಿತಾ ಇನ್ನಿಲ್ಲ]

    ಜಯಲಲಿತಾ ಅವರು ಕೇವಲ ರಾಜಕೀಯದಲ್ಲಿ ಮಾತ್ರ ದಿಟ್ಟ ಮಹಿಳೆ ಎಂದು ಗುರುತಿಸಿಕೊಂಡಿರಲಿಲ್ಲ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲೂ ಅಭಿನಯಿಸಿ ಅಭಿನೇತ್ರಿ ಎನಿಸಿಕೊಂಡಿದ್ದರು. ಇಂತಹ ಅಪರೂಪದ ವ್ಯಕ್ತಿಯ ನಿಧನಕ್ಕೆ ಎಲ್ಲ ಕಲಾವಿದರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಕಿಚ್ಚ ಸುದೀಪ್

    ಕಿಚ್ಚ ಸುದೀಪ್

    ''ಘನತೆ, ಧೈರ್ಯ, ಶಕ್ತಿ, ದೃಷ್ಟಿ, ಈ ಎಲ್ಲ ಅಂಶಗಳನ್ನ ಒಳಗೊಂಡಿರುವ ವ್ಯಕ್ತಿಗಳ ಜನನವಾಗುವುದು ಅತ್ಯಂತ ವಿರಳ. ಮುಖ್ಯಮಂತ್ರಿ ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ''

    ರಮ್ಯಾ

    ರಮ್ಯಾ

    ''ಜಯಲಲಿತಾ ಅವರ ಸಾವಿನ ಸುದ್ದಿ ತುಂಬಾ ದುಃಖವಾಗಿದೆ. ಅವರನ್ನ ತುಂಬಾ ಮಿಸ್ ಮಾಡ್ಕೊಳ್ತಿವಿ''

    ಪ್ರಿಯಾಮಣಿ

    ಪ್ರಿಯಾಮಣಿ

    ''ಒಬ್ಬ ಮಹಾನ್ ಹಾಗೂ ದಿಟ್ಟೆದೆಯ ಮಹಿಳಾ ನಾಯಕಿಯನ್ನ ತಮಿಳುನಾಡು ಕಳೆದುಕೊಂಡಿದೆ. ಸಿನಿಮಾರಂಗ ಹಾಗೂ ರಾಜಕೀಯ ರಂಗದಲ್ಲಿ ಸಾರ್ವಭೌಮ ಮೆರೆದಿದ್ದರು. ಈಗ ಅಮ್ಮನ ಯುಗಾಂತ್ಯವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ''

    ಶರತ್ ಕುಮಾರ್

    ಶರತ್ ಕುಮಾರ್

    ''ಈ ಬಾರಿ ಯಾವುದೇ ಪವಾಡವಾಗಿಲ್ಲ. ನಮ್ಮ ಪ್ರೀತಿಯ ಮುಖ್ಯಮಂತ್ರಿ ನಮ್ಮಗಲಿ, ದೇವರ ಮನೆ ಸೇರಿದ್ದಾರೆ, ತಮಿಳುನಾಡಿನ 'ಐರನ್ ಲೇಡಿ', ದೇಶದ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಭರವಸೆ ಹುಟ್ಟಿಸಿದ್ದ ಜಯಲಲಿತಾ ಅವರು ನಮ್ಮಗಲಿದ್ದಾರೆ''

    ಶಾರುಖ್ ಖಾನ್

    ಶಾರುಖ್ ಖಾನ್

    ''ಜಯಲಲಿತಾ ಅವರ ನಿಧನದ ಸುದ್ದಿ ತುಂಬಾ ಬೇಸರ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ''

    ರಜನಿಕಾಂತ್ ಟ್ವೀಟ್

    ರಜನಿಕಾಂತ್ ಟ್ವೀಟ್

    ''ಕೇವಲ ತಮಿಳುನಾಡು ಮಾತ್ರವಲ್ಲ, ಭಾರತ ದೇಶವೇ ಒಬ್ಬ ಕೆಚ್ಚೆದೆಯ ಮಹಿಳೆಯನ್ನ ಕಳೆದುಕೊಂಡಿದೆ. ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ, ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ''

    ಅಮಿತಾಬ್ ಬಚ್ಚನ್‌ ಸಂತಾಪ

    ಅಮಿತಾಬ್ ಬಚ್ಚನ್‌ ಸಂತಾಪ

    ''ಜಯಲಲಿತಾ ಅವರ ಸಾವಿನ ವಿಚಾರದಿಂದ ತುಂಬಾ ದುಃಖವಾಗಿದೆ. ಪ್ರಬಲ ಮಹಿಳೆಯಾಗಿದ್ದರು, ''ಭಾರತೀಯ ಚಿತ್ರರಂಗದ 100 ವರ್ಷದ ಸಂಭ್ರಮವನ್ನ ಆಚರಿಸಿದ ಏಕೈಕ ಮುಖ್ಯಮಂತ್ರಿ ಜಯಲಲಿತಾ ಅವರು. ಎಲ್ಲ ರಾಜ್ಯಗಳಲ್ಲೂ ಅತ್ಯಂತ ಪ್ರಶಂಸೆ ಪಡೆದುಕೊಂಡಿದ್ದರು''

    ಚಿಯಾನ್ ವಿಕ್ರಮ್

    ಚಿಯಾನ್ ವಿಕ್ರಮ್

    ''ಪ್ರೀತಿಯ ಮುಖ್ಯಮಂತ್ರಿ ಜಯಲಲಿತಾ ಅವರು ಡಿಸೆಂಬರ್ 5 ರಂದು ವಿಧಿವಶರಾಗಿದ್ದಾರೆ. ಅಪೋಲೋ ಆಸ್ವತ್ರೆಯಿಂದ ಅಧೀಕೃತ ಮಾಹಿತಿ ಹೊರಬಿದ್ದಿದೆ. ಅಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ''

    ಸುಹಾಸಿನಿ

    ಸುಹಾಸಿನಿ

    ''ತಮಿಳುನಾಡು ಅನಾಥವಾಗಿದೆ. ಹೃದಯ ಛಿದ್ರವಾಯಿತು. ಕಣ್ಣೀರಿನಿಂದ ದುಃಖವನ್ನ ವ್ಯಕ್ತಪಡಿಸಲು ಸಾಧ್ಯವಿಲ್ಲ''

    ಶೃತಿ ಹಾಸನ್

    ಶೃತಿ ಹಾಸನ್

    ''ಒಬ್ಬ ಮಹಾನ್ ಹಾಗೂ ಕೆಚ್ಚೆದೆಯ ನಾಯಕಿಯನ್ನ ತಮಿಳುನಾಡು ಕಳೆದುಕೊಂಡಿದೆ. ಈ ನಷ್ಟದಿಂದ ತುಂಬಾ ಬೇಸರವಾಗಿದೆ. ಪದಗಳು ಮೂಲಕ ಈ ದುಃಖವನ್ನ ವ್ಯಕ್ತಪಡಿಸಿಲು ಸಾಧ್ಯವಿಲ್ಲ''

    ಅಕ್ಕಿನೇನಿ ನಾಗಾರ್ಜುನ

    ಅಕ್ಕಿನೇನಿ ನಾಗಾರ್ಜುನ

    ''ನಾನು ಒಂದು ಕ್ಷಣವನ್ನ ನೆನಪಿಸಿಕೊಳ್ಳುತ್ತೇನೆ. ಅಂದು ನಮ್ಮ ತಂದೆ ಅವರು ಜಯಲಲಿತಾ ಅವರು ಬಳಿ ಮಾತನಾಡುತ್ತಿದ್ದರು. ಆ ಮಾತಿನಲ್ಲಿದ್ದ ಗೌರವ, ಅಕ್ಕರೆಯನ್ನ ಇಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ''

    ರಾಮ್ ಗೋಪಾಲ್ ವರ್ಮ

    ರಾಮ್ ಗೋಪಾಲ್ ವರ್ಮ

    ''ಸೌಂದರ್ಯ-ಘನತೆ-ಅನುಗ್ರಹ'', ''ನಾನು ಒಂದೇ ಸರಿ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿರುವುದು. ಅದು ಅಮ್ಮನ ಕೈಯಿಂದ ಪ್ರಶಸ್ತಿ ಪಡೆದೆ. 'ಕ್ಷಣ ಕ್ಷಣಂ' ಚಿತ್ರದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ''

    ಗೌತಮಿ

    ಗೌತಮಿ

    ''ಅಮ್ಮನ ಸಾವಿನ ಸುದ್ದಿ ಹೃದಯ ಛಿದ್ರಗೊಳಿಸಿದೆ. ತನ್ನ ದೃಷ್ಠಿಕೋನ, ಶಕ್ತಿ, ಪ್ರೀತಿಯಿಂದ ಮಹಾನ್ ನಾಯಕಿ ಎನಿಸಿಕೊಂಡಿದ್ದರು. ನೀವು ನಮ್ಮನ್ನ ಇಷ್ಟು ಬೇಗ ಬಿಟ್ಟು ಹೋದರಲ್ಲ ಅಮ್ಮ. ಆತ್ಮಕ್ಕೆ ಶಾಂತಿ ಸಿಗಲಿ''

    English summary
    Tamilnadu CM J Jayalalitha passed away on Monday (December 5) night in Apollo Hospital. Superstar Rajanikanth And Amitabh bachchan and others Condole Jayalalithaa's Death on twitter.
    Tuesday, December 6, 2016, 11:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X