ತನ್ನ ಬಯೋಪಿಕ್ ಯಾರು ಮಾಡಬೇಕೆಂದು ಜಯಲಲಿತಾ ಅಂದೇ ಹೇಳಿದ್ದರಂತೆ: ಯಾರು ಆ ನಟಿ.?
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ತಮಿಳಿಗರ ಪಾಲಿನ 'ಅಮ್ಮ' ಜೆ ಜಯಲಲಿತಾ ಅವರ ಬಗ್ಗೆ ಬಯೋಪಿಕ್ ಸಿನಿಮಾ ತಯಾರಾಗಲಿದೆ. ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಜಯಲಲಿತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಬಯೋಪಿಕ್ ಸಿನಿಮಾ ಸೆಟ್ಟೇರಲಿದೆ.
ಜಯಲಲಿತಾ ಬಗ್ಗೆ ಸಿನಿಮಾ ಅಧಿಕೃತವಾದಾಗನಿಂದಲೂ ತೆರೆಮೇಲೆ ಅಮ್ಮನ ಅವರತಾರವೆತ್ತುವುದು ಯಾರು ಎಂಬ ಕುತೂಹಲ ಈಗ ದೊಡ್ಡ ಚರ್ಚೆಯಾಗಿದೆ.
ಜಯಲಲಿತಾ ಅವರ ಪಾತ್ರಕ್ಕಾಗಿ ಹಲವು ನಟಿಯರ ಹೆಸರು ಕೇಳಿಬರುತ್ತಿದೆ. ಸೌತ್ ಇಂಡಸ್ಟ್ರಿಯ ಸ್ಟಾರ್ ನಟಿಯರ ಜೊತೆ ಬಾಲಿವುಡ್ ನ ಸ್ಟಾರ್ ನಟಿಯರು ಕೂಡ ಈ ರೇಸ್ ನಲ್ಲಿದ್ದಾರೆ. ಆದ್ರೆ, 19 ವರ್ಷಗಳ ಹಿಂದೆಯೇ ಜಯಲಲಿತಾ ಅವರು 'ತನ್ನ ಪಾತ್ರವನ್ನ ಯಾರು ಮಾಡಬೇಕು ಎಂದು'' ಹೇಳಿದ್ದರಂತೆ. ಹಾಗಿದ್ರೆ, ಆ ನಟಿ ಅಮ್ಮನ ಬಯೋಪಿಕ್ ಒಪ್ಪಿಕೊಳ್ತಾರಾ.? ಯಾರದು.? ಮುಂದೆ ಓದಿ......

1999ರಲ್ಲೇ ಜಯಲಲಿತಾ ಹೇಳಿದ್ದರು
ಒಂದು ವೇಳೆ ಜಯಲಲಿತಾ ಅವರ ಬಗ್ಗೆ ಬಯೋಪಿಕ್ ಸಿನಿಮಾ ಬರುವುದಾದರೇ ತನ್ನ ಪಾತ್ರದಲ್ಲಿ ಯಾವ ನಟಿ ಅಭಿನಯಿಸಬೇಕು ಎಂದು ಸ್ವತಃ ಜಯಲಲಿತಾ ಅವರೇ 1999ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಸೆಮಿ ಗೆರ್ವಾಲ್ ಅವರೊಂದಿಗೆ ಹೇಳಿಕೊಂಡಿದ್ದರು. ಹೀಗಾಗಿ, ಜಯಲಲಿತಾ ಅವರೇ ಆಸೆಯಂತೆ ಆ ನಟಿಯನ್ನ ಅಪ್ರೋಚ್ ಮಾಡಿದ್ದಾರಾ.?

ಜಯಲಲಿತಾ ಹೇಳಿದ್ದ ಆ ನಟಿ ಯಾರು.?
ಅಂದ್ಹಾಗೆ, 1999ರಲ್ಲಿ ಸ್ವತಃ ಜಯಲಲಿತಾ ಹೇಳಿದ್ದ ನಟಿ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್. ಐಶ್ವರ್ಯ ರೈ ನನ್ನ ಬಯೋಪಿಕ್ ನಲ್ಲಿ ನಟಿಸಿದ್ರೆ ಚೆನ್ನಾಗಿರುತ್ತೆ ಎಂದು ತಮಿಳುನಾಡಿನ ಅಮ್ಮ ಭವಿಷ್ಯ ನುಡಿದಿದ್ದರು.

'ಅಮ್ಮ'ನಿಂದ ಸ್ಫೂರ್ತಿ ಪಡೆದಿದ್ದ ಐಶ್ವರ್ಯ ಪಾತ್ರ
ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಇರುವರ್' ಚಿತ್ರದಲ್ಲಿ ಐಶ್ವರ್ಯ ರೈ ಒಂದು ಪಾತ್ರವನ್ನ ನಿಭಾಯಿಸಿದ್ದರು. ಈ ಪಾತ್ರ ಜಯಲಲಿತಾ ಅವರಿಂದ ಸ್ಫೂರ್ತಿಯಾಗಿತ್ತು ಎನ್ನುವುದು ವಿಶೇಷ. ಇದು ರಾಜಕೀಯ ಕುರಿತಾದ ಚಿತ್ರವಾಗಿತ್ತು. ಈ ವಿಷ್ಯ ಅನೇಕರಿಗೆ ಗೊತ್ತಿಲ್ಲ.

ಐಶ್ವರ್ಯ ರೈಗೆ ಅಪ್ರೋಚ್ ಮಾಡಿಲ್ಲ
ಇನ್ನು ಜಯಲಲಿತಾ ಅವರ ಬಯೋಪಿಕ್ ಪಾತ್ರಕ್ಕೆ ಐಶ್ ಹೆಸರು ಕೂಡ ಎಲ್ಲಿಯೂ ಚರ್ಚೆಯಾಗಿರಲಿಲ್ಲ. ಈಗ ಜಯಲಲಿತಾ ಅವರೇ ಹಿಂದೊಮ್ಮೆ ಹೇಳಿದ್ದರು ಎಂಬ ಸುದ್ದಿ ಹೊರಬಿದ್ದ ನಂತರ ಎಲ್ಲ ಚಿತ್ತ ಐಶ್ವರ್ಯ ರೈ ಅತ್ತ ಬಿದ್ದಿದೆ. ಸದ್ಯದ ಮಟ್ಟಿಗೆ ಐಶ್ವರ್ಯ ರೈ ಅವರೊಂದಿಗೆ ಯಾರೂ ಅಪ್ರೋಚ್ ಮಾಡಿಲ್ಲ. ಹಾಗಾಗಿ, ಐಶ್ವರ್ಯ ಮೇಲೆ ಭರವಸೆ ಹುಟ್ಟಿದೆ.

ಬೇರೆ ಯಾರಿಗೂ ಅಪ್ರೋಚ್ ಆಗಿಲ್ಲ
ಸದ್ಯದ ಮಾಹಿತಿ ಪ್ರಕಾರ ಐಶ್ವರ್ಯ ರೈ ಬಿಟ್ಟು, ಬೇರೆ ಯಾವ ನಟಿಯನ್ನ ಕೂಡ ಜಯಲಲಿತಾ ಅವರ ಪಾತ್ರಕ್ಕಾಗಿ ಚಿತ್ರತಂಡ ಸಂಪರ್ಕಿಸಿಲ್ಲ. ಆದ್ರೆ, ಈ ಪಾತ್ರವನ್ನ ನಿರ್ವಹಿಸಲು ಸೌತ್ ಹಾಗೂ ಬಾಲಿವುಡ್ ನಟಿಯರು ಭಾರಿ ಪೈಪೋಟಿ ನಡೆಸುತ್ತಿದ್ದಾರಂತೆ. ಪಿ. ಭಾರತಿರಾಜ ಅವರು ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

ರೀಲ್ 'ಅಮ್ಮ' ಯಾರಾಗಬಹುದು.?
'ಅಮ್ಮ'ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ತ್ರಿಷಾ, ನಯನತಾರ, ಕೀರ್ತಿ ಸುರೇಶ್, ಅನುಷ್ಕಾ ಶೆಟ್ಟಿ ಹಾಗೂ ಬಾಲಿವುಡ್ ನಿಂದ ವಿದ್ಯಾ ಬಾಲನ್, ಟಬು, ಹೆಸರುಗಳು ಕೂಡ ಚಾಲ್ತಿಯಲ್ಲಿದೆ. ಆದ್ರೆ, ಅಂತಿಮವಾಗಿ ಯಾರಿಗೆ ಈ ಅವಕಾಶ ಸಿಗುತ್ತೋ ಕಾದುನೋಡಬೇಕಿದೆ.


Click it and Unblock the Notifications











