»   » ಗಿರಿಕನ್ಯೆ ಜಯಮಾಲಾ ನೇತೃತ್ವದಲ್ಲಿ ಸಿನಿಮಾ ಪ್ರಶಸ್ತಿ ಸಲಹಾ ಸಮಿತಿ

ಗಿರಿಕನ್ಯೆ ಜಯಮಾಲಾ ನೇತೃತ್ವದಲ್ಲಿ ಸಿನಿಮಾ ಪ್ರಶಸ್ತಿ ಸಲಹಾ ಸಮಿತಿ

Posted By: Staff
Subscribe to Filmibeat Kannada

ಬೆಂಗಳೂರು : 1999-2000 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಲಹಾ ಸಮಿತಿಯನ್ನು ಶನಿವಾರ ರಾಜ್ಯಸರ್ಕಾರ ರಚಿಸಿದೆ. ಎಂಟು ಜನರ ಸಲಹಾ ಸಮಿತಿಯ ನೇತೃತ್ವವನ್ನು ಪ್ರಸಿದ್ಧ ಸಿನಿತಾರೆ ಜಯಮಾಲಾ ವಹಿಸುವರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಥಾಮಸ್‌ ಡಿಸೋಜ, ಸಿನಿಮಾ ಸಂಪಾದಕ ವಿಕ್ಟರ್‌ ಯಾದವ್‌, ಸಿನಿಮಾ ಪತ್ರಕರ್ತ ಗಂಗಾಧರ ಮೊದಲಿಯಾರ್‌, ಸುಗಮ ಸಂಗೀತ ಗಾಯಕಿ ಎಚ್‌.ಆರ್‌. ಲೀಲಾವತಿ, ಛಾಯಾಗ್ರಾಹಕ ಜಾನಕೀರಾಮ್‌ ಹಾಗೂ ವಿಧಾನಪರಿಷತ್‌ ಸದಸ್ಯೆ ಜಲಜಾನಾಯಕ್‌ ಸಮಿತಿಯ ಸದಸ್ಯರು. ವಾರ್ತಾ ಇಲಾಖೆ ನಿರ್ದೇಶಕ ಡಿ.ವಿ. ಗುರುಪ್ರಸಾದ್‌ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ರಾಜ್ಯ ಸರ್ಕಾರ ಮತ್ತೆರಡು ಸಮಿತಿಗಳನ್ನು ನೇಮಿಸಿದ್ದು , ಕರ್ನಾಟಕ ರತ್ನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್‌ ಅವರಿಗೆ ಹಾಗೂ ಬಸವಶ್ರೀ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಜಿ.ಎಸ್‌. ಶಿವರುದ್ರಪ್ಪನವರಿಗೆ ವಹಿಸಲಾಗಿದೆ.

English summary
1999 2000 karnataka film award committee selected
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada