»   » ಜಯಮ್ಮನ ಮಗ ಗೆಲ್ಲಿಸಿದ್ದ ವಿಕಾಸ್ ಎಲ್ಲಿಗೋಗಿದ್ರು?

ಜಯಮ್ಮನ ಮಗ ಗೆಲ್ಲಿಸಿದ್ದ ವಿಕಾಸ್ ಎಲ್ಲಿಗೋಗಿದ್ರು?

By: ಜೀವನರಸಿಕ
Subscribe to Filmibeat Kannada

ಜಯಮ್ಮನ ಮಗ ಅಂದ್ರೆ 'ದುನಿಯಾ' ವಿಜಯ್ ಅಂದ್ಕೋಬೇಡಿ. ದುನಿಯಾ ವಿಜಯ್ಗೆ 'ಜಯಮ್ಮನ ಮಗ' ಸಿನಿಮಾ ನಿರ್ದೇಶನ ಮಾಡಿದ್ದ ವಿಕಾಸ್. ವಿಕಾಸ್ ಅನ್ನೋ ಹೆಸ್ರು ಬಹುಷಃ ನಮ್ಗೆ ನಿಮ್ಗೆ ಎಲ್ಲಾ ಮರೆತೇ ಹೋಗಿದೆ..

ಪಬ್ಲಿಕ್ ಮೆಮೋರಿ ಈಸ್ ವೆರಿ ಶಾರ್ಟ್ ಅಂತಾರಲ್ಲ ಹಾಗೇ ವಿಕಾಸ್ ಅಂದ್ರೆ ಜಯಮ್ಮನ ಮಗ ಸಿನಿಮಾ ಗೆಲ್ಲಿಸೋದ್ರಲ್ಲಿ ಮುಖ್ಯ ಪಾತ್ರ ವಹಿಸಿದ್ರು. ವಿಜಿ ಹೋಂ ಬ್ಯಾನರ್ನ ಮೊದಲ ಸಿನಿಮಾ ಗೆದ್ದು ವಿಜಯ್ ಕೂಡ ಖುಷಿಯಾಗಿದ್ರು.. [ಜಯಮ್ಮನ ಮಗ ಚಿತ್ರವಿಮರ್ಶೆ]

Jayammana Maga director Vikas resurfaces again

ಒಂದು ಸಿನಿಮಾ ಸೋತ್ರೂ ಇವತ್ತಿನ ನಿರ್ದೇಶಕರು, ಒಂದು ಸಿನಿಮಾ ಮಾಡಿದ್ದೀನಿ ಅನ್ನೋ ಕ್ವಾಲಿಫಿಕೇಷನ್ ಸರ್ಟಿಫಿಕೇಟ್ ಹಿಡ್ಕೊಂಡು ಮತ್ತೊಂದು ಸಿನಿಮಾ ಮಾಡೋ ಕಾಲ ಇದು. ಆದ್ರೆ ಒಂದು ಗೆದ್ದ ಸಿನಿಮಾ ನಿರ್ದೇಶಕ ಯಾಕೆ ಎರಡ್ಮೂರು ವರ್ಷ ಸೈಲೆಂಟಾಗಿದ್ರೋ ಗೊತ್ತಿಲ್ಲ. ಆದ್ರೆ ಈಗ ಅವರು ಕಾಣಿಸಿಕೊಂಡಿರೋದು ನಿರ್ದೇಶನದ ಮೂಲಕ ಅಲ್ಲ. ಯೋಗರಾಜ್ ಭಟ್ರ 'ಪರಪಂಚ' ಸಿನಿಮಾದಲ್ಲಿ ಹಾಡಿನಲ್ಲಿ ಕುಣಿಯೋ ಮೂಲಕ. [ರಾಗಿಣಿ 'ಪರಪಂಚ'ದೊಳ್ ಏನೇನೈತಿ?]

ನಾನು ಸದ್ಯಕ್ಕೆ ಸಿನಿಮಾ ಮಾಡಲ್ಲ ಸ್ನೇಹಿತನ ಸಿನಿಮಾದಲ್ಲಿ ಇನ್ವಾಲ್ವ್ ಆಗಿದ್ದೀನಿ ಅಂತ ಎರಡು ವರ್ಷದ ಹಿಂದೆ ಹೇಳಿದ್ದ ನಿರ್ದೇಶಕ ವಿಕಾಸ್ ಈಗೇನ್ಮಾಡ್ತಿದ್ದಾರೆ. ಎರಡು ವರ್ಷವಾದ್ರೂ ಕಥೆ ಮುಗಿದಿಲ್ವಾ. ಅವರೇ ಮಾತ್ನಾಡಬೇಕು.

English summary
Have you heard about director Vikas. If not, note that he is the director of Jayammana Maga. The movie was appreciated by the critics, in which Duniya Vijay and Dr Bharathi acted in lead role. After a gap of two years Vikas has resurfaced again, but not as a director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada