Exclusive: ಹೊಸ 'ಕಿರಾತಕ'ನನ್ನು ಕರ್ಕೊಂಡ್ ಬರ್ತಿದ್ದಾರೆ ಜಯಣ್ಣ: 'ಮೈ ನೇಮ್ ಈಸ್' ... ಕಥೆ ಏನಾಯ್ತು?
12 ವರ್ಷಗಳ ಹಿಂದೆ ಬಂದಿದ್ದ 'ಕಿರಾತಕ' ಸಿನಿಮಾ ಸೂಪರ್ ಹಿಟ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಆಗಿದ್ದ ಸಿನಿಮಾ ಇದು. 'KGF- 1' ಶೂಟಿಂಗ್ ನಂತರ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಸೆಟ್ಟೇರಿತ್ತು. ಆದರೆ ದಿಢೀರನೆ ಸಿನಿಮಾ ನಿಂತು ಹೋಯಿತು. ಇದೀಗ 'ಕಿರಾತಕ'- 2 ರಿಲೀಸ್‌ಗೆ ರೆಡಿಯಾಗಿದೆ.
ಇದೀಗ 'ಕಿರಾತಕ' - 2 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಯಶ್ ನಟನೆಯ 'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೂ ಈಗ ರಿಲೀಸ್‌ಗೆ ರೆಡಿಯಾಗಿರುವ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ 'ಕಿರಾತಕ' ಸಿನಿಮಾ ಕಟ್ಟಿಕೊಟ್ಟಿದ್ದ ಪ್ರದೀಪ್ ರಾಜ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಅವರು ಕೊನೆಯುಸಿರೆಳೆದಿದ್ದರು. ಅಂತೂ ಇಂತೂ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅಚ್ಚರಿ ಅಂದ್ರೆ ಸ್ವತಃ ನಿರ್ಮಾಪಕ ಜಯಣ್ಣ ಸಿನಿಮಾ ವಿತರಣೆ ಮಾಡುತ್ತಿದ್ದಾರೆ.

ಯುವ ನಟ ತೇಜಸ್ 'ಕಿರಾತಕ'- 2 ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. 'ಕಿರಾತಕ' ಸಿನಿಮಾ ಹಿಟ್ ಆದಾಗಲೇ ನಿರ್ದೇಶಕ ಪ್ರದೀಪ್ ರಾಜ್ ಸೀಕ್ವೆಲ್ ಮಾಡಲು ಚಿಂತನೆ ನಡೆಸಿದ್ದರು. ಯಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. 'ಇಂದ್ರಜಾಲ್ ಅಡ್ವಟೈರ್ಸ್ ಸೊಲ್ಯೂಷನ್ಸ್' ಬ್ಯಾನರ್ ಅಡಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಆದರೆ ಕಾರಣಾಂತರಗಳಿಂದ ಯಶ್ ಜೊತೆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ, ಎಂದು ಹೊಸಬರನ್ನು ಬಳಸಿಕೊಂಡು ಸಿನಿಮಾ ಮಾಡಿದ್ದರು.
'ಕಿರಾತಕ- 2' ಟೈಟಲ್ ವಿವಾದ
ದಿಲ್‌ವಾಲಾ ಅನಿಲ್ ಕುಮಾರ್ ನಿರ್ದೇಶನದಲ್ಲಿ ಯಶ್ 'ಕಿರಾತಕ'- 2 ಸಿನಿಮಾ ಆರಂಭಿಸಿದ್ದರು. ಆಗ ನಿರ್ದೇಶಕ ಪ್ರದೀಪ್ ರಾಜ್ ಟೈಟಲ್ ಕೊಡಲ್ಲ ಎಂದಿದ್ದರು. ಕೊನೆಗೆ 'ಮೈ ನೇಮ್ ಈಸ್ ಕಿರಾತಕ' ಹೆಸರಿನಲ್ಲಿ ಯಶ್ ಸಿನಿಮಾ ಶುರುವಾಗಿತ್ತು. 20 ದಿನಗಳ ಕಾಲ ಶೂಟಿಂಗ್ ನಡೆದಿತ್ತು. ಆದರೆ 'KGF- 1' ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿದ್ದರಿಂದ 'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನು ಯಶ್ ಕೈ ಬಿಟ್ಟರು. ನಂತರ 'KGF- 2' ಚಿತ್ರದಲ್ಲಿ ನಟಿಸಿದರು. ಸ್ವತಃ ನಿರ್ಮಾಪಕ ಜಯಣ್ಣ ಆ ಸಿನಿಮಾ ಬರಲ್ಲ ಎಂದು ಪುನರುಚ್ಚರಿಸಿದ್ದಾರೆ.

ಹಣ ವಾಪಸ್ ನೀಡಿದ್ದ ಯಶ್
'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನು ಯಶ್ ಕೈಬಿಟ್ಟಾಗಿದೆ. ಚಿತ್ರದ ಚಿತ್ರೀಕರಣಕ್ಕೆ ಆಗಿದ್ದ ಖರ್ಚು, ನಿರ್ಮಾಪಕರಿಂದ ಪಡೆದಿದ್ದ ಅಡ್ವಾನ್ಸ್ ಎಲ್ಲವನ್ನು ಯಶ್ ಬಡ್ಡಿ ಸಮೇತ ವಾಪಸ್ ಕೊಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ಮಾಪಕ ಜಯಣ್ಣ ಖಚಿತಪಡಿಸಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಚಿತ್ರಕ್ಕಾಗಿ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ.
'ಕಿರಾತಕ- 2' ಜಯಣ್ಣ ವಿತರಣೆ
ವಿಶೇಷ ಅಂದ್ರೆ ಪ್ರದೀಪ್ ರಾಜ್ ನಿರ್ದೇಶನದ 'ಕಿರಾತಕ- 2' ಚಿತ್ರವನ್ನು ಇದೀಗ ಸ್ವತಃ ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಜೂನ್ 30ಕ್ಕೆ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಜಯಣ್ಣ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿಸಿ ಮತ್ತಷ್ಟು ವಿಚಾರ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಬರೀ ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ. ಹಾಗಾಗಿ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ.
ಮೈಸೂರಿನಲ್ಲಿ ನಡೆಯುವ ಕಥೆ
'ಕಿರಾತಕ- 2' ಮೈಸೂರಿನಲ್ಲಿ ನಡೆಯುವ ಕಥೆ. ಬೈಂದೂರ್ ಕನ್ಸ್‌ಟ್ರಕ್ಷನ್ ಬ್ಯಾನರ್ ಅಡಿಯಲ್ಲಿ ಎಂ. ಬಿ ಬೈಂದೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರದ್ಯೋತ್ತನ್ ಸಂಗೀತ, ನಾಗೇಂದ್ರ ಪ್ರಸಾದ್ ಕವಿರಾಜ್ ಸಾಹಿತ್ಯ ಹಾಗೂ ವಿಕ್ರಂ ಮೋರ್ ಸ್ಟಂಟ್ಸ್ ಈ ಚಿತ್ರಕ್ಕಿದೆ.


Click it and Unblock the Notifications











