'ಕೂಲಿ' ಚಿತ್ರ ಕನ್ನಡಕ್ಕೆ ಡಬ್ ಆಗಲ್ವಾ? ವಿತರಕ ಜಯಣ್ಣ ಪ್ರತಿಕ್ರಿಯೆ

ಸನ್ ಪಿಕ್ಚರ್ಸ್ ನಿರ್ಮಾಣದ ಆಕ್ಷನ್ ಥ್ರಿಲ್ಲರ್ 'ಕೂಲಿ' ಸಿನಿಮಾ ಮುಂದಿನ ವಾರವೇ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸಿನಿರಸಿಕರ ಗಮನ ಸೆಳೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ, ರಚಿತಾ ರಾಮ್ ಕೂಡ ಚಿತ್ರದಲ್ಲಿ ನಟಿಸಿರುವುದು ನಿರೀಕ್ಷೆ ಹುಟ್ಟಾಕ್ಕಿದೆ.

ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಜನಿಕಾಂತ್ ಜೊತೆಗೆ ಆಮೀರ್ ಖಾನ್, ನಾಗಾರ್ಜುನ, ಸತ್ಯರಾಜ್, ಶ್ರುತಿ ಹಾಸನ್, ಸೌಬಿನ್ ಶಾಹಿರ್ 'ಕೂಲಿ' ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ರಜನಿಕಾಂತ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಭರ್ಜರಿ ಸಂಭಾವನೆ ಸಿಕ್ಕಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಆದರೆ ಕನ್ನಡ ವರ್ಷನ್ ಟ್ರೈಲರ್ ಬಂದಿಲ್ಲ.

Jayanna Confirms Kannada Release of Rajinikanth s Coolie Trailer Coming Soon

ಪರಭಾಷಾ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುವುದಕ್ಕೆ ಅವಕಾಶ ಇದೆ. ಆದರೂ ಕೆಲ ಚಿತ್ರತಂಡ ಅಸಡ್ಡೆ ತೋರುತ್ತವೆ. ಮುಂದಿನ ವಾರ 'ಕೂಲಿ' ಹಾಗೂ 'ವಾರ್-2' ಚಿತ್ರಗಳು ತೆರೆಗೆ ಬರ್ತಿವೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರಂಟಿ ಎನ್ನುವಂತಾಗಿದೆ. ಆದರೆ ಎರಡೂ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಾ? ಎನ್ನುವ ಅನುಮಾನ ಮೂಡಿದೆ.

ಕನ್ನಡ ಸಿನಿರಸಿಕರು ಕನ್ನಡದಲ್ಲೇ ಸಿನಿಮಾ ಬಿಡುಗಡೆಗೆ ಪಟ್ಟು ಹಿಡಿದಿದ್ದಾರೆ. ಡಬ್ ಆಗಗಿದ್ದರೆ ನಾವು ನೋಡಲ್ಲ ಎನ್ನುತ್ತಿದ್ದಾರೆ. 'ಕೂಲಿ' ಚಿತ್ರದ ಕನ್ನಡ ಟ್ರೈಲರ್ ಯಾಕೆ ಬಂದಿಲ್ಲ? ಸಿನಿಮಾ ಡಬ್ ಆಗಿ ಬಿಡುಗಡೆ ಆಗುವುದಿಲ್ಲವೇ? ಎನ್ನುವ ಅನುಮಾನ ಮೂಡಿದೆ. ಇನ್ನುಳಿದ 3 ಭಾಷೆಗಳಿಗೆ ಸಿನಿಮಾ ಡಬ್ ಆಗಿ ಟ್ರೈಲರ್ ಬಂದಿದೆ. ಆದರೆ ಕನ್ನಡಕ್ಕೆ ಯಾಕೆ ಮಲತಾಯಿ ಧೋರಣೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ವಿತರಕರಾಗಿರುವ ಜಯಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

Jayanna Confirms Kannada Release of Rajinikanth s Coolie Trailer Coming Soon

"ಕೂಲಿ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತದೆ. ಡಬ್ಬಿಂಗ್ ಕೆಲಸಗಳು ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಟ್ರೈಲರ್ ಸಹ ರಿಲೀಸ್ ಆಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯಾದ್ಯಂತ ದೊಡ್ಡದಾಗಿ ಸಿನಿಮಾ ಬಿಡುಗಡೆ ಆಗಲಿದೆ" ಎಂದು ನಿರ್ಮಾಪಕ, ವಿತರಕ ಜಯಣ್ಣ ಸ್ಪಷ್ಟನೆ ನೀಡಿದ್ದಾರೆ.

ಡಿಸ್ಟ್ರಿಬ್ಯೂಷನ್ ರೈಟ್ಸ್

ಬರೋಬ್ಬರಿ 22 ಕೋಟಿ ರೂ.ಗೆ 'ಕೂಲಿ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗಿದೆ. ಎವಿ ಮೀಡಿಯಾ ಕನ್ಸಲ್ಟೆನ್ಸಿ ಸಂಸ್ಥೆ ರೈಟ್ಸ್ ಕೊಂಡುಕೊಂಡಿದ್ದು ಜಯಣ್ಣ ಫಿಲ್ಮ್ಸ್ ಮೂಲಕ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. ಬೆಳ್ಳಂ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರದ ಪ್ರದರ್ಶನ ಆರಂಭವಾಗುವ ಸಾಧ್ಯತೆಯಿದೆ. ಶೀಘ್ರದಲ್ಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ.

ಕನ್ನಡ 'ಜೈಲರ್' ಸಕ್ಸಸ್

ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಂದರೆ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಈ ಹಿಂದೆ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಕನ್ನಡದಲ್ಲಿ ತೆರೆಕಂಡು ಸಕ್ಸಸ್ ಕಂಡಿತ್ತು. ಮೊದಲ ದಿನ 30 ಶೋಗಳಲ್ಲಿ ಪ್ರದರ್ಶನ ಆರಂಭಿಸಿದ ಸಿನಿಮಾ 10 ದಿನಗಳ ಬಳಿಕ 62 ಶೋಗಳಲ್ಲಿ ಪ್ರದರ್ಶನ ಕಂಡಿತ್ತು. 5 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಸಹ ಮಾಡಿತ್ತು. 'ಪುಷ್ಪ'-2 ಕನ್ನಡ ವರ್ಷನ್‌ಗೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

ವಾರ್- 2 ಕನ್ನಡ?

ಬಾಲಿವುಡ್ ಮಂದಿ ತಮ್ಮ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ಹಿಂದೇಟು ಹಾಕುತ್ತಾ ಬರ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್-2' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತಮಿಳು ಹಾಗೂ ತೆಲುಗಿಗೆ ಮಾತ್ರ ಡಬ್ ಆಗ್ತಿದೆ. ಈ ಬಗ್ಗೆ ಕನ್ನಡ ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Producer Jayanna opens up on Rajinikanth’s action thriller ‘Coolie’ will be released in Kannada. Dubbing work is in progress and the Kannada trailer will be out in two days.
Read more about: rajinikanth coolie upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X