For Quick Alerts
  ALLOW NOTIFICATIONS  
  For Daily Alerts

  "KGF ಬರೋವರ್ಗೂ 'ರಾಮಾಚಾರಿ'ನೇ ನಂಬರ್‌ ವನ್, ಎಲ್ಲಾ ಕ್ರೆಡಿಟ್ಟು ಯಶ್‌ಗೆ ಸಲ್ಲಬೇಕು": ಜಯಣ್ಣ

  |

  ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ನಟನೆಯ 'Mr & Mrs ರಾಮಾಚಾರಿ' 8 ವರ್ಷ ಪೂರೈಸಿದೆ. 2014 ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಲ್ಲಿವರೆಗಿನ ಎಲ್ಲಾ ಕನ್ನಡ ಸಿನಿಮಾಗಳ ದಾಖಲೆ ಮುರಿದು ಸಂಚಲನ ಸೃಷ್ಟಿಸಿತ್ತು.

  ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಲ್ಲಿವರೆಗೂ ಸಂಭಾಷಣೆ, ಸಾಹಿತ್ಯ ಬರೆದುಕೊಂಡು ಇದ್ದ ಸಂತೋಷ್ ಆನಂದ್‌ ರಾಮ್‌ನ ಕರೆದು ಯಶ್ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದರು. ವಿ. ಹರಿಕೃಷ್ಣ ಮ್ಯೂಸಿಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಸಿನಿಮಾ ರಿಲೀಸ್‌ಗೂ ಮೊದ್ಲೇ ಆಲ್ಬಮ್ ಹಿಟ್ ಆಗಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿತ್ತು. ಆ ವರ್ಷ್ಯಾಂತ್ಯದ ಒಂದು ವಾರ ಹಲವಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಅದಕ್ಕೆ ತಕ್ಕಂತೆ ಗಲ್ಲಾಪೆಟ್ಟಿಗೆ ತುಂಬಿತ್ತು.

  Mr & Mrs ರಾಮಾಚಾರಿಗೆ 8 ವರ್ಷ: ಅಭಿಮಾನಿಗಳಿಂದ 8 ದಿನ 'ಯಶ್ ಟೈಮ್ಸ್' ಸಂಭ್ರಮ!Mr & Mrs ರಾಮಾಚಾರಿಗೆ 8 ವರ್ಷ: ಅಭಿಮಾನಿಗಳಿಂದ 8 ದಿನ 'ಯಶ್ ಟೈಮ್ಸ್' ಸಂಭ್ರಮ!

  'Mr & Mrs ರಾಮಾಚಾರಿ' 8 ವರ್ಷ ಪೂರೈಸಿದ ಸಮಯದಲ್ಲಿ ನಿರ್ಮಾಪಕ ಜಯಣ್ಣ ಆ ಚಿತ್ರವನ್ನ ನೆನಪಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಇಂತಾದೊಂದು ಅದ್ಭುತ ಸಿನಿಮಾ ಮಾಡಿದ ಖುಷಿ ಇದೆ ಎಂದಿದ್ದಾರೆ.

  ಎಲ್ಲಾ ಕ್ರೆಡಿಟ್ಟು ಯಶ್‌ಗೆ ಸಲ್ಲಬೇಕು

  ಎಲ್ಲಾ ಕ್ರೆಡಿಟ್ಟು ಯಶ್‌ಗೆ ಸಲ್ಲಬೇಕು

  "ಸಿನಿಮಾ ರಿಲೀಸ್ ಆಗಿ 8 ವರ್ಷ ಆಗಿಬಿಡ್ತು. ಗೊತ್ತೇ ಆಗಲಿಲ್ಲ. 'Mr & Mrs ರಾಮಾಚಾರಿ' ಅಲ್ಲಿವರೆಗೂ ಕನ್ನಡ ಚಿತ್ರರಂಗದ ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ಅಂತಾದೊಂದು ದೊಡ್ಡ ಸಿನಿಮಾ ಮೂಡಿ ಬಂದಿದ್ದು ನಮಗೂ ಹೆಮ್ಮೆ. ಆ ಸಿನಿಮಾ ಗೆಲುವಿನ ಅಷ್ಟು ಕ್ರೆಡಿಟ್ ಯಶ್ ಅವರಿಗೆ ಹೋಗಬೇಕು. 'ರಾಮಾಚಾರಿ' ಹಿಂದೆ ಸಂಪೂರ್ಣವಾಗಿ ಇದ್ದಿದ್ದು ಯಶ್ ಅವ್ರು.

  ಅಲ್ಲಿವರೆಗಿನ ಎಲ್ಲಾ ದಾಖಲೆ ಮುರಿದಿತ್ತು

  ಅಲ್ಲಿವರೆಗಿನ ಎಲ್ಲಾ ದಾಖಲೆ ಮುರಿದಿತ್ತು

  "ಸಂತೋಷ್‌ ರಾಮ್ ಅಲ್ಲಿವರೆಗೂ ಯಾವುದೇ ಸಿನಿಮಾ ನಿರ್ದೇಶನ ಮಾಡಿರಲಿಲ್ಲ. ಸಂಭಾಷಣೆ, ಸಾಹಿತ್ಯ ಬರೆದುಕೊಂಡಿದ್ದ ಅವರನ್ನು ಕರೆದು ಒಂದೊಳ್ಳೆ ಕತೆ ಮಾಡಿದ್ದರು. ಅಷ್ಟೇ ಅಲ್ಲ ಪ್ರತಿ ವಿಭಾಗದಲ್ಲೂ ಯಶ್ ಕೈಚಳಕ ಇತ್ತು. ಸಿನಿಮಾ ಕೇಳಿದ ಖರ್ಚನ್ನು ನಾವು ಮಾಡಿದ್ದೆವು. ಅಂತಹ ಸಿನಿಮಾ ಮಾಡಿದ ಖುಷಿ ಇದೆ. ಅಲ್ಲಿವರೆಗಿನ ಕನ್ನಡ ಚಿತ್ರರಂಗದ ಎಲ್ಲಾ ಬಾಕ್ಸಾಫೀಸ್ ದಾಖಲೆಯನ್ನು ಈ ಸಿನಿಮಾ ಮುರಿದಿತ್ತು. ಆ ನಂತರ 'ರಾಜಕುಮಾರ' ಬಂತು. ಆದರೆ ಲಾಭದ ಲೆಕ್ಕ ತೆಗೆದುಕೊಂಡರೇ 'KGF' ಬರೋವರ್ಗೂ 'ರಾಮಾಚಾರಿ'ನೇ ನಂಬರ್‌ ವನ್ ಸ್ಥಾನದಲ್ಲಿತ್ತು" ಎಂದು ಜಯಣ್ಣ ಮಾಹಿತಿ ನೀಡಿದ್ದಾರೆ.

  ಸಂತೋಷ್ ಆನಂದ್‌ ರಾಮ್ ಟ್ವೀಟ್

  ಸಂತೋಷ್ ಆನಂದ್‌ ರಾಮ್ ಟ್ವೀಟ್

  "ಇಂದು 'Mr & Mrs ರಾಮಾಚಾರಿ'ಗೆ 8 ವರ್ಷ. ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶಕೊಟ್ಟು ಬೆನ್ನುತಟ್ಟಿದ ಯಶ್ ಸರ್‌ಗೆ ಸದಾ ಕೃತಜ್ಞನಾಗಿರುತ್ತೇನೆ. ನನ್ನ ಚಿತ್ರತಂಡಕ್ಕೆ ಹಾಗೂ ರಾಧಿಕಾ ಮೇಡಂಗೆ ನನ್ನ ಧನ್ಯವಾದ. ಈ ಚಿತ್ರಕ್ಕೆ ಆಶೀರ್ವದಿಸಿದ ಸಾಹಸ ಸಿಂಹ ವಿಷ್ಣುದಾದಾರವರಿಗೆ ಹಾಗೂ ಈ ಚಿತ್ರವನ್ನು ಇತಿಹಾಸ ಪುಟ ಸೇರಿಸಿದ ಕನ್ನಡಿಗರಿಗೆ ಧನ್ಯವಾದ" ಎಂದು ಸಂತೋಷ್ ಆನಂದ್‌ ರಾಮ್ ಟ್ವೀಟ್ ಮಾಡಿದ್ದಾರೆ.

  ಯಶ್- ರಾಧಿಕಾ ರಿಯಲ್ ಲವ್‌ಸ್ಟೋರಿ!

  ಯಶ್- ರಾಧಿಕಾ ರಿಯಲ್ ಲವ್‌ಸ್ಟೋರಿ!

  ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರೀತಿಸುತ್ತಿದ್ದರು. ಆದರೆ ನಾವಿಬ್ಬರು ಪ್ರೇಮಿಗಳು ಎಂದು ಯಾವತ್ತು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. 'Mr & Mrs ರಾಮಾಚಾರಿ' ಸಿನಿಮಾ ವೇಳೆಗೆ ಮದುವೆ ಮಾತುಕತೆ ಕೂಡ ನಡೆದಿತ್ತು. ಮದುವೆ ಪಕ್ಕಾ ಆಗ್ತಿದ್ದಂತೆ ಅದು ದೃಶ್ಯಗಳಾಗಿ ರೂಪ ತಳೆದಿತ್ತು. ಆದರೆ ಅದು ಬರೀ ಸಿನಿಮಾ ಎನ್ನುವಂತೆ ಬಿಂಬಿಸಲಾಗಿತ್ತು. ಯಶ್ ಹಾಗೂ ರಾಧಿಕಾ ಜೋಡಿಯನ್ನು ಸಂತೋಷ್ ಆನಂದ್‌ರಾಮ್ ನಿಜ ಜೀವನದ ಪ್ರೇಮಿಗಳು ಎನ್ನುವಂತೆ ತೋರಿಸಿದ್ದರು. ಅವರಿಬ್ಬರು ತಮ್ಮದೇ ಲವ್ ಸ್ಟೋರಿಯಲ್ಲಿ ಜೀವಿಸಿದ್ದರು. ಅದರಲ್ಲೂ ರಾಮಾಚಾರಿ ತನ್ನ ಮಾರ್ಗರೇಟ್‌ಗೆ ಬಾಗಿನ ಕೊಟ್ಟು ಪ್ರಪೋಸ್ ಮಾಡುವ ದೃಶ್ಯ ಅಂತೂ ಸಿಂಪ್ಲಿ ಸೂಪರ್.

  English summary
  Jayanna remembers Yash and Radhika pandit Starrer Mr. & Mrs. Ramachari as film completes 8 years. The film was a commercial success, completing a 200-day theatrical run and emerged the highest grossing Kannada film of the year. know more.
  Sunday, December 25, 2022, 17:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X