For Quick Alerts
  ALLOW NOTIFICATIONS  
  For Daily Alerts

  ಕಾಳಿದಾಸ ಕನ್ನಡ ಮೇಷ್ಟ್ರನ್ನ ಹಾಡಿ ಹೊಗಳಿದ ಕವಿತಾ, ಜಯಂತ್ ಕಾಯ್ಕಿಣಿ

  |

  'ಕನ್ನಡ ಮೇಷ್ಟ್ರ' ಕ್ಲಾಸ್ ಆರಂಭವಾಗಿದೆ. 'ಕಾಳಿದಾಸ'ನ ಪಾಠ ಶುರುವಾಗಿದೆ. ಅರ್ಥಾತ್ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಟ್ರೇಲರ್ ಮತ್ತು ಸಾಂಗ್ಸ್ ಗಳಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಈ ಸಿನಿಮಾ ಇಂದಿನಿಂದ ಥಿಯೇಟರ್ ಗಳಲ್ಲಿ ರಾರಾಜಿಸಲಿದೆ.

  ನವರಸ ನಾಯಕ ಜಗ್ಗೇಶ್, ಮೇಘನಾ ಗಾಂವ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಚಿತ್ರ ಸಾಹಿತಿ ಕವಿರಾಜ್ ನಿರ್ದೇಶನ ಮಾಡಿರುವ, ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರ ಉತ್ತಮ ಓಪನ್ನಿಂಗ್ ಪಡೆದುಕೊಂಡಿದೆ.

  ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪಗಳನ್ನ ಹಾಸ್ಯಮಯವಾಗಿ, ವ್ಯಂಗ್ಯವಾಗಿ ಎತ್ತಿ ಹಿಡಿದಿರುವ 'ಕಾಳಿದಾಸ ಕನ್ನಡ ಮೇಷ್ಟ್ರು'ನ್ನು ಗೀತ ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ನಿರ್ದೇಶಕಿ ಕವಿತಾ ಲಂಕೇಶ್ ಹಾಡಿ ಹೊಗಳಿದ್ದಾರೆ. ಮುಂದೆ ಓದಿರಿ...

  ಕವಿತಾ ಲಂಕೇಶ್ ಏನಂತಾರೆ.?

  ಕವಿತಾ ಲಂಕೇಶ್ ಏನಂತಾರೆ.?

  'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ವೀಕ್ಷಿಸಿದ ಬಳಿಕ ಕವಿತಾ ಲಂಕೇಶ್, ''ಅದ್ಭುತ ಚಿತ್ರ. ಇಂದಿನ ಸಮಾಜದ ಪ್ರಸ್ತುತ ಸಮಸ್ಯೆಗಳನ್ನು ಮನರಂಜನಾತ್ಮಕವಾಗಿ ಅಷ್ಟೇ ಭಾವನಾತ್ಮಕವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ದೊಡ್ಡ ಯಶಸ್ಸು ಗಳಿಸಿ ಸಮಾಜದಲ್ಲಿನ ಎಲ್ಲಾ ವರ್ಗಗಳನ್ನು ತಲುಪುವಂತಾಗಲಿ. ಕವಿರಾಜ್ ಇನ್ನಷ್ಟು ಅರ್ಥಪೂರ್ಣ ಚಿತ್ರಗಳನ್ನು ನೀಡಲಿ'' ಎಂದಿದ್ದಾರೆ.

  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಕಾಳಿದಾಸ ಕನ್ನಡ ಮೇಷ್ಟ್ರು'!ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಕಾಳಿದಾಸ ಕನ್ನಡ ಮೇಷ್ಟ್ರು'!

  ಜಯಂತ್ ಕಾಯ್ಕಿಣಿ ಹೇಳಿದ್ದೇನು.?

  ಜಯಂತ್ ಕಾಯ್ಕಿಣಿ ಹೇಳಿದ್ದೇನು.?

  ಇನ್ನೂ ಖ್ಯಾತ ಗೀತ ಸಾಹಿತಿ ಜಯಂತ್ ಕಾಯ್ಕಿಣಿ, ''ನಮ್ಮನ್ನು ಕಾಡುವಂತಹ, ರೆಸ್ಟ್ ಲೆಸ್ ಮಾಡುವಂತಹ ಮಹತ್ವದ, ಮಾರ್ಮಿಕ, ಜೀವನ್ಮುಖಿ ಚಿತ್ರ ಇದು. ಚಿತ್ರತಂಡಕ್ಕೆ ಸಮಾಜ ಖಂಡಿತ ಋಣಿಯಾಗಿರುತ್ತದೆ. ಗುರುಕಿರಣ್ ರವರ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ'' ಅಂತ ಹೇಳಿದ್ದಾರೆ.

  ಕನ್ನಡ ಶಿಕ್ಷಕರಾಗಿ ಜಗ್ಗೇಶ್

  ಕನ್ನಡ ಶಿಕ್ಷಕರಾಗಿ ಜಗ್ಗೇಶ್

  ಕವಿರಾಜ್ ನಿರ್ದೇಶನದ ಎರಡನೇ ಚಿತ್ರ ಈ 'ಕಾಳಿದಾಸ ಕನ್ನಡ ಮೇಷ್ಟ್ರು'. ಈ ಸಿನಿಮಾದಲ್ಲಿ ಕನ್ನಡ ಶಿಕ್ಷಕರಾಗಿ ಜಗ್ಗೇಶ್ ನಟಿಸಿದ್ದರೆ, ಇಂಗ್ಲೀಷ್ ಭಾಷೆಯನ್ನ ಇಷ್ಟ ಪಡುವ ಪತ್ನಿ ಪಾತ್ರದಲ್ಲಿ ಮೇಘನಾ ಗಾಂವ್ಕರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಮನರಂಜನೆ ಜೊತೆಗೆ ಉತ್ತಮ ಸಂದೇಶ ಕೂಡ ಇದೆ.

  ನೀವು ನೋಡ್ತೀರಾ.?

  ನೀವು ನೋಡ್ತೀರಾ.?

  ಕನ್ನಡ ಮೇಷ್ಟ್ರು ಕಾಳಿದಾಸನ ಪಾಠವನ್ನ ಕವಿತಾ ಲಂಕೇಶ್ ಮತ್ತು ಜಯಂತ್ ಕಾಯ್ಕಿಣಿ ಅಂತೂ ಮೆಚ್ಚಿದ್ದಾರೆ. ಇನ್ನೂ ಚಿತ್ರವನ್ನ ಥಿಯೇಟರ್ ನಲ್ಲಿ ನೋಡಿ ಭೇಷ್ ಎನ್ನುವುದು ನಿಮಗೆ ಬಿಟ್ಟಿದ್ದು...

  English summary
  Jayanth Kaikini and Kavitha Lankesh appreciates Kalidasa Kannada Meshtru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X