twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ: ಕೊರೊನಾ ಬಗ್ಗೆ ಜಯಂತ್ ಕಾಯ್ಕಿಣಿ ಹಾಡು, ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ

    |

    ಎಲ್ಲೆಡೆ ಕೊರೊನಾದ್ದೆ ಮಾತು, ಸಾಮಾಜಿಕ ಜಾಲತಾಣಗಳಂತೂ ಕೊರೊನಾ ಸುದ್ದಿಗಳಿಂದ, ಜೋಕ್‌ಗಳಿಂದ, ಮೀಮ್‌ಗಳಿಂದ ತುಂಬಿ ಹೋಗಿವೆ. ಕವಿಗಳು ಸಹ ಕೊರೊನಾ ಕುರಿತಾಗಿಯೇ ಕವನ ರಚಿಸುತ್ತಿದ್ದಾರೆ.

    ಕವಿ, ಸಿನಿಮಾ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರೂ ಸಹ ಕೊರೊನಾ ಕುರಿತಾಗಿ ಸುಂದರವಾದ ಹಾಡೊಂದನ್ನು ಬರೆದಿದ್ದಾರೆ.

    ಜಯಂತ್ ಕಾಯ್ಕಿಣಿ ಅವರು ಬರೆದಿರುವ ಗೀತೆಗೆ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರು ರಾಗ ಸಂಯೋಜನೆ ಮಾಡಿ, ತಾವೇ ಹಾಡಿದ್ದಾರೆ.

    ಬಾಲಸುಬ್ರಹ್ಮಣ್ಯಂ ಅವರು ಜಯಂತ್ ಕಾಯ್ಕಿಣಿ ಅವರು ಬರೆದಿರುವ ಗೀತೆಯನ್ನು ಹಾಡಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುಂದರವಾದ ಹಾಡು ಎರಡೇ ಗಂಟೆಯಲ್ಲಿ 1000 ಶೇರ್ ಆಗಿದೆ ಆಗಿದೆ.

    ''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ''

    ''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ''

    ''ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ, ಅದಕೆ ನಾವೇ ಈಗ ದಾರಿ ಆಗದಿರೋಣ'' ಎಂದು ಪ್ರಾರಂಭವಾಗುವ ಹಾಡಿನಲ್ಲಿ ಕಾಯ್ಕಿಣಿ ಅವರು 'ಕಾಲಬುಡಕೆ ಮಾರಿ ಬರುವ ವರೆಗೆ ಕಾಯದಿರೋಣ'' ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದ ಕಾಯ್ಕಿಣಿ

    ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದ ಕಾಯ್ಕಿಣಿ

    ಹಾಡಿನಲ್ಲಿ, ಕೊರೊನಾ ದ ಮುಂಚಿನ ದಿನಗಳನ್ನು ಪ್ರಸ್ತುತ ದಿನಗಳಲ್ಲಿ ಮನುಷ್ಯನ ವರ್ತನೆಗಳಲ್ಲಿ ಆದ ವ್ಯತ್ಯಾಸವನ್ನು ಉಲ್ಲೇಖಿಸಿರುವ ಕಾಯ್ಕಿಣಿ, ಅಂದು ಹಾಗಿದ್ದೆವು, ಈಗ ಹೀಗಾಗಿದ್ದೇವೆ ಎಂದು ಬೇರ್ಪಡಿಸಿ ತೋರಿಸಿದ್ದಾರೆ.

    ಬೀದಿ ಬದಿ ವ್ಯಾಪಾರಿ, ಸೂರಿಲ್ಲದವರ ಬಗ್ಗೆ ಕಾಳಜಿ

    ಕೊರೊನಾ ಪರಿಣಾಮ ಎದುರಿಸುತ್ತಿರುವವರ ಬಗ್ಗೆಯೂ ಕಾಯ್ಕಿಣಿ ಕವನದಲ್ಲಿ ಮರುಕಪಟ್ಟಿದ್ದು, 'ಬೀದಿ ವ್ಯಾಪಾರಿ, ಮನೆಯೇ ಇರದ ಕೂಲಿ ಬಳಗ ಎಲ್ಲಿ ಹೋದರೋ, ಅವರಿಗಾಗಿ ಬುತ್ತಿಯನ್ನು ಮೀಸಲಿಡೋಣ'' ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.

    ನಾವೇ ತಂದುಕೊಂಡ ಚಂಡಮಾರುತ ಎಂದ ಕಾಯ್ಕಿಣಿ

    ನಾವೇ ತಂದುಕೊಂಡ ಚಂಡಮಾರುತ ಎಂದ ಕಾಯ್ಕಿಣಿ

    'ಭೂಮಿ, ಬಾನು, ನೀರು, ಕಾಡು ಧ್ವಂಸ ಮಾಡುತಾ, ನಮಗೆ ನಾವೇ ತಂದುಕೊಂಡೆವು ಚಂಡಮಾರುತ' ಎಂದು ಮಾನವನ ವಿನಾಶಕಾರಿ ಬುದ್ಧಿಯಿಂದಲೇ ಕೊರೊನಾದಂತಹಾ ಮಹಾ ಮಾರಿ ಬಂದೊದಗಿಗೆ ಎಂದು ಕಾಯ್ಕಿಣಿ ಕವನದಲ್ಲಿ ಹೇಳಿದ್ದಾರೆ.

    English summary
    Lyricist Jayanth Kaikini wrote song about corona. SP Balasubrahmanyam composed and sang the song.
    Friday, March 27, 2020, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X