ವೀಲ್ ಚೇರ್ ನಲ್ಲಿ ಬಂದು ಐರಾಗೆ ಆಶೀರ್ವಾದ ಮಾಡಿದ ಜಯಂತಿ
Recommended Video
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾ ಹುಟ್ಟುಹಬ್ಬ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದಾರೆ.
ಹಿರಿಯ ನಟಿ ಜಯಂತಿ ವೀಲ್ ಚೇರ್ ನಲ್ಲಿ ಬಂದು ಐರಾಗೆ ಆಶೀರ್ವಾದ ಮಾಡಿದ್ದಾರೆ. ವಯೋಸಹಜ ಕಾರಣದಿಂದ ಕಾರ್ಯಕ್ರಮಗಳಲ್ಲಿ ಜಯಂತಿ ಭಾಗಿಯಾಗುವುದು ತೀರ ಕಡಿಮೆಯಾಗಿದೆ. ಆದರೆ, ಯಶ್ ಕುಟುಂಬದ ಮೇಲಿನ ಪ್ರೀತಿಯಿಂದ ಜಯಂತಿ ಕಾರ್ಯಕ್ರಮಕ್ಕೆ ಬಂದು ಮುದ್ದು ಕಂದನಿಗೆ ಆಶೀರ್ವಾದ ಮಾಡಿದರು.
ನಟರಾದ ದರ್ಶನ್, ಶಿವರಾಜ್ ಕುಮಾರ್, ಪುನೀತ್ ಕುಮಾರ್, ದ್ವಾರಕೀಶ್, ರಕ್ಷಿತ್ ಶೆಟ್ಟಿ, ಚಿರಂಜೀವಿ ಸರ್ಜಾ ರಿಷಿ, ಅಜಯ್ ರಾವ್, ರವಿಶಂಕರ್, ಪ್ರಜ್ವಲ್ ದೇವರಾಜ್, ಉಪೇಂದ್ರ ಸೇರಿದಂತೆ ಅನೇಕರು ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ನಟಿ ಸುಮಲತಾ, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್, ಶ್ರೀಲೀಲಾ, ಅಮೂಲ್ಯ, ನಿರ್ದೇಶಕ ಪ್ರಶಾಂತ್ ನೀಲ್, ತರುಣ್ ಸುಧೀರ್, ರಿಷಭ್ ಶೆಟ್ಟಿ, ನಾದಬ್ರಹ್ಮ ಹಂಸಲೇಖ, ವಿಜಯ ಪ್ರಕಾಶ್, ಗುರುಕಿರಣ್, ರಾಕ್ ಲೈನ್ ವೆಂಕಟೇಶ್ ಕಾರ್ಯಕ್ರಮದಲ್ಲಿ ಕಳೆ ತುಂಬಿದರು.

ಅದ್ದೂರಿ ಕಾರ್ಯಕ್ರಮ ಮಾಡಿ, ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ರಾಕಿಂಗ್ ದಂಪತಿ ಮಾಡಿದೆ.


Click it and Unblock the Notifications











