twitter
    For Quick Alerts
    ALLOW NOTIFICATIONS  
    For Daily Alerts

    'ರಾಷ್ಟ್ರ ಪ್ರಶಸ್ತಿ'ಗಿಂತ ಇಂದಿರಾ ಗಾಂಧಿ ಜೊತೆಗಿನ ಫೋಟೋಗೆ ಹೆಚ್ಚು ಹೆಮ್ಮೆ ಪಟ್ಟಿದ್ದರು ಜಯಂತಿ

    By ಫಿಲ್ಮೀಬೀಟ್ ಡೆಸ್ಕ್
    |

    ಚಂದನವನದ ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಜಯಂತಿ ಕನ್ನಡ ಚಿತ್ರರಂಗಕ್ಕೆ ಗ್ಲಾಮರ್ ಅನ್ನು ಪರಿಚಯಿಸಿದ ಹೆಗ್ಗಳಿಕೆ ಕೂಡ ಅವರದ್ದು. ಪುರುಷ ಪ್ರಧಾನ ಸಿನಿಮಾರಂಗದಲ್ಲಿ ನಾಯಕರೇ ಹೆಚ್ಚು ರಾರಾಜಿಸುತ್ತಿದ್ದ ಕಾಲದಲ್ಲಿ ನಾಯಕರಿಗೆ ಸರಿಸಮಾನವಾಗಿ ನಿಂತಿದ್ದ ನಟಿ ಜಯಂತಿ.

    Recommended Video

    ಇಂದಿರಾ ಗಾಂಧಿ ಜೊತೆ ಫೋಟೋ ತೆಗೆಸಿಕೊಂಡ ದಿನ ಜಯಂತಿ ತುಂಬಾ ಖುಷಿ ಪಟ್ಟಿದ್ರು

    ಬೆಳ್ಳಿ ಪರದೆ ಮೇಲೆ ಮೊದಲ ಬಾರಿಗೆ ಬಿಕಿನಿಯಲ್ಲಿ ಮಿಂಚಿದವರು ನಟಿ ಜಯಂತಿ. ಮಿಸ್ ಲೀಲಾವತಿ ಚಿತ್ರದಲ್ಲಿ ಬೋಲ್ಡ್ ಪಾತ್ರ ನಿರ್ವಹಿಸಿದ್ದ ಜಯಂತಿ ಮೊದಲ ಬಾರಿಗೆ ಬಿಕಿನಿ ಧರಿಸಿದ್ದರು. ಅಂದಿನ ಮಡಿವಂತಿಯ ಸಮಾಜದಲ್ಲಿ 'ಮಿಸ್ ಲೀಲಾವತಿ' ಸಿನಿಮಾ ಸಂಚಲನ ಸೃಷ್ಟಿಮಾಡಿತ್ತು. ಅಲ್ಲಿಂದ ಚಿತ್ರರಂಗದಲ್ಲಿ ಮಡಿವಂತಿಗೆ ದೂರ ಸರಿಯುತ್ತಾ ಬಂತು.

    ಹಲವು ರೀತಿಯ ವಿಶೇಷತೆಗಳನ್ನು ಹೊಂದಿದ ಮಿಸ್ ಲೀಲಾವತಿ ಚಿತ್ರ ಅಪಾರ ಜನಪ್ರಿಯತೆ ಪಡೆಯುವ ಜೊತೆಗೆ ಜಯಂತಿ ಅವರಿಗೆ ರಾಷ್ಟ್ರಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಈ ಚಿತ್ರದ ಅದ್ಭುತ ನಟನೆಗೆ ಜಯಂತಿ ಅವರಿಗೆ ರಾಷ್ಟ್ರಪ್ರಶಸ್ತಿ ತಂದು ಕೊಟ್ಟಿತ್ತು.

    ಜಯಂತಿ ಯಾವತ್ತೂ ಪ್ರಶಸ್ತಿಗಳಿಗೆ ಆಸೆ ಪಟ್ಟವರಲ್ಲ

    ಜಯಂತಿ ಯಾವತ್ತೂ ಪ್ರಶಸ್ತಿಗಳಿಗೆ ಆಸೆ ಪಟ್ಟವರಲ್ಲ

    ನಟಿ ಜಯಂತಿ ಯಾವತ್ತು ಪ್ರಶಸ್ತಿಗಳಿಗೆ ಆಸೆ ಪಟ್ಟವರಲ್ಲ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ದಕ್ಷಿಣ ಭಾರತೀಯ ಸಿನಿಮಾರಂಗದ ದಿಗ್ಗಜ ನಟರ ಜೊತೆ ನಟಿಸಿರುವ ಜಯಂತಿ ಯಾವತ್ತು ಪ್ರಶಸ್ತಿಗಳ ಬಗ್ಗೆ ಮಾತನಾಡಿದವರೂ ಅಲ್ಲ. ಕೊಟ್ಟ ಪಾತ್ರಗಳಿಗೆ ನ್ಯಾಯ ಒದಗಿಸುವುದು ಅಷ್ಟೇ ಜಯಂತಿ ಅವರಿಗೆ ಗೊತ್ತಿತ್ತು.

    ಪ್ರಶಸ್ತಿಗಳ ಬಗ್ಗೆಯೇ ಗೊತ್ತಿರದ ಮುಗ್ಧ ನಟಿ

    ಪ್ರಶಸ್ತಿಗಳ ಬಗ್ಗೆಯೇ ಗೊತ್ತಿರದ ಮುಗ್ಧ ನಟಿ

    ಜಯಂತಿ ಪ್ರಶಸ್ತಿಗಳ ಬಗ್ಗೆಯೇ ಗೊತ್ತಿರ ಮುಗ್ಧ ನಟಿಯಾಗಿದ್ದರು ಎಂದು ಹಿರಿಯ ಪತ್ರಕರ್ತ ಸದಾಶಿವ ಶೆಣೈ ವಿವರಿಸಿದ್ದಾರೆ. "ಈ ಪಾತ್ರಗಳಲ್ಲಿ ನಟಿಸಿ ಪ್ರಶಸ್ತಿ ಬರುತ್ತೆ ಅಂತ ನಿರ್ದೇಶಕರು ಹೇಳಿದ್ರೆ ಪ್ರಶಸ್ತಿಗಳ ಬಗ್ಗಯೇ ಗೊತ್ತಿರದ ಜಯಂತಿ ಹೌದ.. ಪ್ರಶಸ್ತಿ ಬರುತ್ತಾ ಎಂದು ಮುಗ್ಧತೆಯಿಂದ ಹೇಳುತ್ತಿದ್ದರು. ನಿರ್ದೇಶಕರು ಹೇಳಿದನ್ನ ಮಾಡುತ್ತಿದ್ದ ನಟಿ" ಎಂದು ಹೇಳಿದ್ದಾರೆ.

    ಇಂದಿರಾ ಗಾಂಧಿಯೇ ಕರೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದರು

    ಇಂದಿರಾ ಗಾಂಧಿಯೇ ಕರೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದರು

    ರಾಷ್ಟ್ರ ಪ್ರಶಸ್ತಿ ಪಡೆದ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕರೆದು ಫೋಟ್ ಕ್ಲಿಕ್ಕಿಸಿಕೊಂಡ ಹೆಮ್ಮೆಯ ಕ್ಷಣವನ್ನು ವರ್ಣಿಸುತ್ತಿದ್ದ ರೀತಿಯನ್ನು ಸದಾಶಿವ ಶೆಣೈ ವಿವರಿಸಿದ್ದಾರೆ. "ರಾಷ್ಟ್ರ ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಜಯಂತಿ ಹೆಸರು ಹೇಳುತ್ತಿದ್ದ ಹಾಗೆ ವೇದಿಕೆ ಮೇಲೆ ಹೋಗಿ ಪ್ರಶಸ್ತಿ ಪಡೆದು ಕೆಳಗೆ ಬರುವಾಗ, ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಜಯಂತಿ ನೋಡಿ ಆ ಹುಡುಗಿಯನ್ನು ಕರೆಯಿರಿ ಎಂದು ಹೇಳಿ ಜಯಂತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು"

    ಇದಕ್ಕಿಂತ ಇನ್ನೇನು ಬೇಕು ಎಂದಿದ್ದರು ಮಹಾನ್ ನಟಿ

    ಇದಕ್ಕಿಂತ ಇನ್ನೇನು ಬೇಕು ಎಂದಿದ್ದರು ಮಹಾನ್ ನಟಿ

    "ಈ ಘಟನೆಯನ್ನು ತುಂಬಾ ಹೆಮ್ಮೆ, ಸಂಭ್ರಮದಿಂದ ಹೇಳುತ್ತಿದ್ದರು ಜಯಂತಿ. ಇನ್ನೇನು ಬೇಕು ನನಗೆ ಎಂದು ಸಂತಸ ಪಡುತ್ತಿದ್ದರು. ಇಂಧಿರಾ ಗಾಂಧಿ ಎಂದರೇ ಜಯಂತಿ ಅವರಿಗೆ ತುಂಬಾ ಇಷ್ಟ, ಅವರೇ ತುಂಬಾ ಎತ್ತರದ ನಾಯಕಿ. ಅವರೇ ನನ್ನ ಬಳಿ ಫೋಟೋ ತೆಗೆಸಿಕೊಂಡಾಗ ನನಗೆ ಇನ್ನೇನು ಬೇಕು ಎಂದು ಹೇಳಿದ್ದರು" ಎಂದು ಸದಾಶಿವ ಶೆಣೈ ನೆನಪಿಸಿಕೊಂಡರು.

    ಸಿಗಬೇಕಾದ ಸರಿಯಾದ ಗೌರವ ಸಿಗಲಿಲ್ಲ

    ಸಿಗಬೇಕಾದ ಸರಿಯಾದ ಗೌರವ ಸಿಗಲಿಲ್ಲ

    "ಸಣ್ಣ ಸಣ್ಣ ಘಟನೆಯನ್ನು ಸಂಭ್ರಮ ಪಡುತ್ತಿದ್ದರು. ಈಗಿನವರು ಪ್ರಶಸ್ತಿಗೋಸ್ಕರೆ ಸಿನಿಮಾ ಮಾಡುತ್ತಾರೆ. ಆದರೆ ಅವರು ಹಾಗಲ್ಲ. ಇಂಥ ಮಹಾನ್ ನಾಯಕಿಗೆ ಸಮಾಜದಲ್ಲಿ ಸಿಗಬೇಕಾದ ಸರಿಯಾದ ಗೌರವ ಸಿಗಲಿಲ್ಲ ಎನ್ನುವುದು ತುಂಬಾ ಬೇಸರದ ಸಂಗತಿ ಎಂದು" ಹಿರಿಯ ಪತ್ರಕರ್ತ ಸದಾಶಿವ ಶೆಣೈ ಖಾಸಗಿ ವಾಹಿನಿ ಜೊತೆ ಮಾತನಾಡಿದ್ದಾರೆ.

    English summary
    Actress Jayanthi was more proud for photo with Indira Gandhi than the National Award.
    Monday, July 26, 2021, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X