For Quick Alerts
  ALLOW NOTIFICATIONS  
  For Daily Alerts

  ನಟಿ ಜಯಂತಿ ಅಸ್ವಸ್ಥ: ಎರಡನೇ ದಿನವೂ ಮುಂದುವರೆದ ಚಿಕಿತ್ಸೆ

  By Pavithra
  |
  ನಟಿ ಜಯಂತಿ ಅಸ್ವಸ್ಥ ಎರಡನೇ ದಿನವೂ ಮುಂದುವರೆದ ಚಿಕಿತ್ಸೆ | Filmibeat Kannada

  ಕನ್ನಡ ಸಿನಿಮಾರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 35 ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದ ಜಯಂತಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯು ಹೆಚ್ಚಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟಿಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ.

  68 ವರ್ಷ ವಯಸ್ಸಾಗಿರುವ ಜಯಂತಿ ಅವರಿಗೆ ವಯೋ ಸಹಜ ಕಾಯಿಲೆಗಳು ಕಾಣಿಸಿಕೊಂಡಿದ್ದು ವಿಕ್ರಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಜಯಂತಿ ಅವರಿಗೆ ಡಾ.ಸತೀಶ್ ಚಿಕಿತ್ಸೆ ನೀಡುತ್ತಿದ್ದಾರೆ. 24 ಗಂಟೆ observation ನಲ್ಲಿರುವ ಜಯಂತಿ ಅವರ ಆರೋಗ್ಯದ ಬಗ್ಗೆ ಇಂದು ಬೆಳ್ಳಿಗ್ಗೆ 11 ಗಂಟೆ ಸುಮಾರಿಗೆ ಮಾಹಿತಿ ನೀಡಲಿದ್ದಾರೆ ವೈದ್ಯರು.

  ಹಿರಿಯ ನಟಿ ಜಯಂತಿ ಅಸ್ವಸ್ಥ: ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲುಹಿರಿಯ ನಟಿ ಜಯಂತಿ ಅಸ್ವಸ್ಥ: ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು

  ಮಗ ಕೃಷ್ಣ ಕುಮಾರ್ ಜಯಂತಿ ಅವರ ಬಳಿ ಇದ್ದು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇನ್ನು ಸಿನಿಮಾರಂಗದಿಂದ ನಿನ್ನೆಯೇ ಸಾಕಷ್ಟು ಕಲಾವಿದರು ಬಂದು ಅಭಿನಯ ಶಾರದೆಯ ಆರೋಗ್ಯ ವಿಚಾರಿಸಿದ್ದಾರೆ.

  ಸಿನಿಮಾ ಕಲಾವಿದರಾದ ತಾರ, ಬಿ ಸರೋಜದೇವಿ, ಲೀಲಾವತಿ ಹಾಗೂ ವಿನೋದ್ ರಾಜ್, ಹೇಮಾ ಚೌದರಿ, ಹುಚ್ಚ ವೆಂಕಟ್ ಹಾಗೂ ಭಗವಾನ್ ಜಯಂತಿ ಅವರ ಆರೋಗ್ಯ ವಿಚಾರಿಸಿದರು. ಇಂದು ಡಾ ರಾಜ್ ಕುಟುಂಬದವರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಗಳಿವೆ.

  ಹಿರಿಯ ನಟಿ ಜಯಂತಿ ಅಸ್ವಸ್ಥ: ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲುಹಿರಿಯ ನಟಿ ಜಯಂತಿ ಅಸ್ವಸ್ಥ: ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು

  English summary
  Kannada Veteran Actress Jayanthi is suffering from Asthama. She has been admitted to Vikram Hospital, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X