»   » ಸದ್ಯಕ್ಕೆ ಜಯಂತಿ ಮನೆ ತುಂಬಾ ನಾಯಿಗಳು ಓಡಾಡುತ್ತಿವೆ.

ಸದ್ಯಕ್ಕೆ ಜಯಂತಿ ಮನೆ ತುಂಬಾ ನಾಯಿಗಳು ಓಡಾಡುತ್ತಿವೆ.

Posted By: Super
Subscribe to Filmibeat Kannada

ಮೊದಲು ಮದರ್‌ ಥರ, ಆಮೇಲೆ ಲವರ್‌ ಥರ, ಎರಡೂ ಪೋೕಸ್‌ಗಳ ಫೋಟೋ ತೆಗೆಯಿರಿ ಎನ್ನುತ್ತಾ ಚರಣ್‌ ರಾಜ್‌ ಮಡಿಲಲ್ಲಿ ಮಗುವಾದರು. ಅಮ್ಮನಾಗಿ ಕಂಗೊಳಿಸುತ್ತಿದ್ದವರು ಜಯಂತಿ. ಆಮೇಲೆ ಅದೇ ಜಯಂತಿ ಎದೆಗೊರಗಿ ಪ್ರೇಮ ಪರವಶರಾದರು. ಇದು ಕಾನೂನು ಚಿತ್ರದ ಸೆಟ್‌ನಲ್ಲಿ ಸ್ಟಿಲ್‌ ಫೋಟೋಗ್ರಾಫರ್‌ ಮುಂದೆ ನಡೆದ ನಾಟಕ.

ಜಯಂತಿ ಸಲೀಸಾಗಿ ಎರಡೂ ಪಾತ್ರಗಳನ್ನು ನಿರ್ವಹಿಸಿದರು. ಮದರ್‌ ಅಥವ ಲವರ್‌ ಇವೆರಡೂ ಪಾತ್ರಗಳು ತೆರೆಯ ಮೇಲೆ ಮತ್ತು ಈಚೆಗೆ- ಜಯಂತಿಗೆ ಹೊಸದೇನಲ್ಲ. ವಯಸ್ಸಿನಲ್ಲಿ ಮದರ್‌ ಆಗಿದ್ದರೂ ಅವರಲ್ಲಿ ಇಂದಿಗೂ ಲವರ್‌ ಗರ್ಲ್‌ ಕಳೆಯಿದೆ ಎಂದು ವಾದಿಸುವವರೂ ಇದ್ದಾರೆ.

ಇತ್ತೀಚೆಗೆ ಜಯಂತಿ ಅವರಿಗೆ ಅಮ್ಮನಾಗಿ , ಅತ್ತೆಯಾಗಿ ಬೇಡಿಕೆಯಿದೆ. ತಾವು ನಾಯಕಿಯಾಗಿ ನಟಿಸಿದ ನಾಯಕರ ಅಮ್ಮನ ಪಾತ್ರವನ್ನು ಮಾಡಲಾರೆ ಎನ್ನುವುದು ಅವರ ಕಂಡಿಷನ್‌. ಆದರೆ ಈಗ ನಟನೆಯನ್ನು ಆನಂದಿಸುವ ಮನಸ್ಥಿತಿಯಲ್ಲಿ ಅವರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗದು.

ಮೂರು ದಶಕಗಳಲ್ಲಿ ನಾನ್ನೂರಕ್ಕೂ ಮಿಕ್ಕ ಚಿತ್ರಗಳು ಜಯಂತಿ ವೃತ್ತಿ ಬದುಕಿನ ಖಜಾನೆಯಲ್ಲಿವೆ. ಜೇಡರ ಬಲೆಯಲ್ಲಿ ಜಯಂತಿಯ ಮಾದಕತೆಯನ್ನು ವಯಸ್ಸಾಗಿರುವ ರಸಿಕರು ಇಂದಿಗೂ ಸ್ಮರಿಸುತ್ತಾರೆ. ಬಹದ್ದೂರ್‌ ಗಂಡು ಚಿತ್ರದಲ್ಲಿ ಬಿಗಿಯುಡುಪು ತೊಟ್ಟ ಗಂಡುಬೀರಿ ಪಾತ್ರವೂ ಅದೇ ಮಾದರಿಯದ್ದು, ಆ ನಡುವೆ ಜಯಂತಿಯ ಅಸಲಿ ಪ್ರತಿಭೆಯನ್ನು ಒರೆಗೆ ಹಚ್ಚಿದ ಚಿತ್ರವೆಂದರೆ ಎಡಕಲ್ಲು ಗುಡ್ಡದ ಮೇಲೆ.

ನಾಗರ ಹಾವು ಚಿತ್ರದ ಒನಕೆ ಓಬವ್ವನ ಪಾತ್ರ ಕೇವಲ ಹತ್ತೇ ನಿಮಿಷ ಬಂದು ಹೋಗುವುದಾಗಿದ್ದರೂ, ಪ್ರೇಕ್ಷಕರಿಗೆ ಅದಿನ್ನೂ ನೆನಪಿದೆ. ಇದೀಗ ಶೂಟಿಂಗ್‌ ಹಂತದಲ್ಲಿರುವ ರೋಷಾಗ್ನಿ ಎಂಬ ಚಿತ್ರದಲ್ಲಿ ಅದೇ ಒನಕೆ ಓಬವ್ವನನ್ನು ನೆನಪಿಸುವ ಪಾತ್ರದಲ್ಲಿ ಮತ್ತೊಮ್ಮೆ ನಟಿಸಿದ್ದಾರೆ.

ಜಯಂತಿ ಖಾಸಗಿ ಬದುಕೆನ್ನುವುದು ತೆರೆದ ಪುಸ್ತಕ. ಪ್ರತಿ ಪುಟದಲ್ಲಿಯೂ ನಿಟ್ಟುಸಿರು. ವಿವಾಹ ವಿಚ್ಛೇದನಗಳು, ನಂಬಿಕೆ , ದ್ರೋಹ, ಇತ್ಯಾದಿಗಳು ಅವರಿಗೆ ಹೊಸದಲ್ಲ. ಸಿನಿಮಾದಲ್ಲಿ ಗಳಿಸಿದ್ದೆಲ್ಲವನ್ನೂ ತನ್ನ ಮೂರನೇ ಪತಿಯನ್ನು ಹೀರೋ ಆಗಿಸುವ ಪ್ರಯತ್ನದಲ್ಲಿ ಕಳಕೊಂಡ ಜಯಂತಿ, ಸದ್ಯಕ್ಕೆ ಉತ್ತರ ಹಳ್ಳಿಯ ಬಾಡಿಗೆ ಮನೆಯಲ್ಲಿದ್ದಾರೆ. ಮದ್ರಾಸಿನಲ್ಲಿದ್ದ ಮೂರು ಬಂಗಲೆಗಳನ್ನು ಮಾರಿ ವರ್ಷಗಳೇ ಕಳೆದಿವೆ.

ಈ ಮಧ್ಯೆ ರಾಜಕೀಯಕ್ಕೆ ಇಳಿದ ಜಯಂತಿಗೆ ಅಲ್ಲೂ ಸೋಲೇ ಕಾದಿತ್ತು. ಚುನಾವಣೆಗೆ ಸ್ಪರ್ಧಿಸಿ ಸೋತು ಹೋದರು. ಆದರೆ ಇವಾವನ್ನೂ ಸೋಲು ಎಂದು ಒಪ್ಪಿಕೊಳ್ಳಲು ಆಕೆ ಸಿದ್ಧರಾಗಿಲ್ಲ. ಮೋಸ, ಬರಿ ಮೋಸ ಅಂತಾರೆ. ಮೋಸ ಮಾಡಿದವರು ಗೆದ್ದೆವೆಂಬ ಸಂತೋಷದಲ್ಲಿ ಬೀಗಬಹುದಾದರೂ ಜಯಂತಿ ಸೋತಿಲ್ಲ. ಯಾಕೆಂದರೆ ತನ್ನ ಹೆಸರಲ್ಲೇ ಜಯ ಅಡಗಿದೆ ಎಂಬ ತರ್ಕ ಅವರದು.

Read more about: sandalwood kannada cinema
English summary
Jayanthi has lost faith in human beings?!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada